Jio Welcome Offer: ಜಿಯೋದಿಂದ ವೆಲ್​ಕಮ್ ಆಫರ್ ಘೋಷಣೆ: ಉಚಿತವಾಗಿ 5ಜಿ ಕನೆಕ್ಷನ್ ಪಡೆಯಲು ಏನು ಮಾಡಬೆಕು?

ಜಿಯೋ ಟ್ರೂ 5G ಅನ್ನು ಉಚಿತವಾಗಿ ಸಂಪರ್ಕಿಸಲು ಮತ್ತು ಆನಂದಿಸಲು ಗ್ರಾಹಕರಿಗೆ ವೆಲ್‌ಕಮ್ ಆಫರ್ ಅನ್ನು ಘೋಷಿಸಿದೆ. ಆದರೆ, ಈ ವೆಲ್‌ಕಮ್‌ ಆಫರ್ (Welcome Offer) ಆಯ್ದ ಜಿಯೋ 5G ಬಳಕೆದಾರರಿಗೆ ಮಾತ್ರವಷ್ಟೆ ಲಭ್ಯವಾಗುತ್ತಿದೆ.

Jio Welcome Offer: ಜಿಯೋದಿಂದ ವೆಲ್​ಕಮ್ ಆಫರ್ ಘೋಷಣೆ: ಉಚಿತವಾಗಿ 5ಜಿ ಕನೆಕ್ಷನ್ ಪಡೆಯಲು ಏನು ಮಾಡಬೆಕು?
Reliance JIO
Follow us
TV9 Web
| Updated By: Vinay Bhat

Updated on:Nov 24, 2022 | 11:44 AM

ಇತ್ತೀಚೆಗಷ್ಟೆ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಿಲಯನ್ಸ್ ಜಿಯೋ ತನ್ನ 5ಜಿ ಸೇವೆಯನ್ನು ಅನಾವರಣ ಮಾಡಿತ್ತು. ಭಾರತದ ಎಂಟು ನಗರಗಳಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ (Reliance) ಜಿಯೋ ಟೆಲಿಕಾಂ ಈಗಾಗಲೇ 5G ಸೇವೆಯನ್ನು ಪ್ರಾರಂಭಿಸಿದೆ. ದೆಹಲಿ – NCR, ಮುಂಬೈ, ಕೋಲ್ಕತ್ತಾ, ವಾರಣಾಸಿ, ಚೆನ್ನೈ, ನಾಥದ್ವಾರ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಜಿಯೋ ಟ್ರೂ 5G (Jio true 5G) ಸೇವೆಗಳನ್ನು ನೀಡುತ್ತಿದೆ. ಇದೀಗ ಜಿಯೋ ಟ್ರೂ 5G ಅನ್ನು ಉಚಿತವಾಗಿ ಸಂಪರ್ಕಿಸಲು ಮತ್ತು ಆನಂದಿಸಲು ಗ್ರಾಹಕರಿಗೆ ವೆಲ್‌ಕಮ್ ಆಫರ್ ಅನ್ನು ಘೋಷಿಸಿದೆ. ಆದರೆ, ಈ ವೆಲ್‌ಕಮ್‌ ಆಫರ್ (Welcome Offer) ಆಯ್ದ ಜಿಯೋ 5G ಬಳಕೆದಾರರಿಗೆ ಮಾತ್ರವಷ್ಟೆ ಲಭ್ಯವಾಗುತ್ತಿದೆ. ಈ ಸೌಲಭ್ಯವನ್ನು ಪಡೆಯಲು ಜಿಯೋ ಗ್ರಾಹಕರು ಕೆಲ ಅರ್ಹತೆಯನ್ನು ಪಡೆದುಕೊಂಡಿರಬೇಕು ಎಂದು ರಿಲಯನ್ಸ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಜಿಯೋ ಹೇಳಿರುವ ಪ್ರಕಾರ, ಬಳಕೆದಾರರು ಜಿಯೋ 5G ನೆಟ್‌ವರ್ಕ್ ಪಡೆಯಲು ಮೊದಲು 5ಜಿ ಬೆಂಬಲ ಪಡೆದುಕೊಂಡಿರುವ ಸ್ಮಾರ್ಟ್‌ಫೋನ್ ಅನ್ನು ಹೊಂದಿರಬೇಕು. ನಂತರ ನೀವಿರುವ ಜಾಗದಲ್ಲಿ ಜಿಯೋ 5G ನೆಟ್‌ವರ್ಕ್ ಕವರೇಜ್ ಲಭ್ಯವಿರಬೇಕು. ಜಿಯೋ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಬಳಕೆದಾರರಲ್ಲಿ ಕನಿಷ್ಠ 239 ರೂ. ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಪ್ಲಾನ್​ಗಳು ಆ್ಯಕ್ಟಿವ್ ಆಗಿರಬೇಕು ಎಂದು ಹೇಳಿದೆ.

ಅತ್ಯುತ್ತಮ ಗ್ರಾಹಕ ಅನುಭವ ಖಚಿತ ಮಾಡಿಕೊಳ್ಳಲು ಜಿಯೋದಿಂದ ಸುಧಾರಿತ ಟ್ರೂ 5G ಸೇವೆಗಳನ್ನು ಹಂತ-ಹಂತವಾಗಿ ಹೊರತರುತ್ತಿದೆ. ಜಿಯೋ ಟ್ರೂ 5G ಅನುಭವವನ್ನು ಈಗಾಗಲೇ ಆರು ನಗರಗಳಲ್ಲಿ ಲಕ್ಷಗಟ್ಟಲೆ ಬಳಕೆದಾರರು ಪಡೆಯುತ್ತಿದ್ದಾರೆ. ಇದಕ್ಕೆ ದೊರೆಯುತ್ತಿರುವ ಪ್ರತಿಕ್ರಿಯೆ ಅತ್ಯಂತ ಧನಾತ್ಮಕವಾಗಿದೆ ಮತ್ತು ಭರವಸೆ ನೀಡುತ್ತದೆ. ಜಿಯೋ ಜಾಗತಿಕವಾಗಿ ಅತ್ಯಾಧುನಿಕ 5G ನೆಟ್‌ವರ್ಕ್ ಅನ್ನು ರೂಪಿಸುವುದಕ್ಕೆ ಗ್ರಾಹಕರ ಒಳನೋಟಗಳು ಮತ್ತು ಪ್ರತಿಕ್ರಿಯೆಯು ಸಹಾಯ ಮಾಡುತ್ತಿದೆ.

ಇದನ್ನೂ ಓದಿ
Image
Honor 80 Series: ಬರೋಬ್ಬರಿ 160MP ಕ್ಯಾಮೆರಾ: ಟೆಕ್ ಮಾರುಕಟ್ಟೆಯನ್ನು ದಂಗಾಗಿಸಿದ ಹೊಸ ಹಾನರ್ 80 ಸರಣಿ ಸ್ಮಾರ್ಟ್​ಫೋನ್
Image
Whatsapp New Update: WhatsAppನಲ್ಲಿ ಶೀಘ್ರದಲ್ಲೇ ಬರಲಿದೆ ಕಾಲ್​ ಟ್ಯಾಬ್, ಕರೆಗಳ ವಿವರಗಳನ್ನು ಟ್ರ್ಯಾಕ್ ಮಾಡಬಹುದು
Image
OnePlus 10 Pro 5G: ಈ ಆಫರ್ ಮಿಸ್ ಮಾಡ್ಬೇಡಿ: 71,999 ರೂ. ವಿನ ಈ ಸ್ಮಾರ್ಟ್​ಫೋನ್ ಬೆಲೆ ಈಗ ಕೇವಲ …
Image
Twitter Layoffs: ಟ್ವಿಟರ್ ಉದ್ಯೋಗಿಗಳ ವಜಾ ಮುಗಿದಿದೆ, ಮತ್ತೆ ನೇಮಕಾತಿ ಮಾಡುತ್ತೇವೆ ಎಂದ ಮಸ್ಕ್

ಜಿಯೋ 5G ವೆಲ್‌ಕಮ್‌ ಆಫರ್ ಸದ್ಯ ದೆಹಲಿ – NCR, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಇತರ 5 ನಗರಗಳು ಸೇರಿದಂತೆ ಅರ್ಹ ನಗರಗಳಲ್ಲಿ ಮಾತ್ರ ಲಭ್ಯವಿದೆ. ಅಂದಹಾಗೆ ಈ 5G ಕೊಡುಗೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ 1gbps ವೇಗದೊಂದಿಗೆ ಅನಿಯಮಿತ 5G ಡೇಟಾವನ್ನು ಒದಗಿಸುತ್ತಿದೆ. ಅಂತೆಯೆ 5G ನೆಟ್‌ವರ್ಕ್‌ಗೆ ಸಂಪರ್ಕಿಸಲು ಹೊಸ 5G ಸಿಮ್ ಖರೀದಿಸಬೇಕಾಗಿಲ್ಲ ಎಂದು ಜಿಯೋ ಈ ಹಿಂದೆ ತನ್ನ ಬಳಕೆದಾರರಿಗೆ ಭರವಸೆ ನೀಡಿದೆ.

ಸದ್ಯ ಬಳಕೆಯಲ್ಲಿರುವ ಜಿಯೋ 4G ಸಿಮ್, ನೂತನ 5G ಸಂಪರ್ಕವನ್ನು ಸಪೋರ್ಟ್ ಮಾಡಲಿದೆ. ಜಿಯೋ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್‌ ಆಫರ್‌ನ ಆಹ್ವಾನವನ್ನು ಕಳುಹಿಸುತ್ತದೆ. ಈ ನಿಟ್ಟಿನಲ್ಲಿ ನೀವೇನಾದರೂ ಜಿಯೋ 5G ಸಪೋರ್ಟ್‌ ಇರುವ ನಗರಗಳಲ್ಲಿ ಇದ್ದರೆ, ಮೈ ಜಿಯೋ (MyJio) ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್‌ ಆಫರ್ ಪಡೆಯಬಹುದು.

Published On - 11:43 am, Thu, 24 November 22

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ