Honor 80 Series: ಬರೋಬ್ಬರಿ 160MP ಕ್ಯಾಮೆರಾ: ಟೆಕ್ ಮಾರುಕಟ್ಟೆಯನ್ನು ದಂಗಾಗಿಸಿದ ಹೊಸ ಹಾನರ್ 80 ಸರಣಿ ಸ್ಮಾರ್ಟ್​ಫೋನ್

Honor 80, Honor 80 Pro: ಈ ಬಾರಿ ಹಾನರ್ ಕಂಪನಿ ತನ್ನ ಬಹುನಿರೀಕ್ಷಿತ ಹಾನರ್‌ 80 ಸರಣಿ (Honor 80 Series) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಇದರಲ್ಲಿ ಹಾನರ್ 80, ಹಾನರ್ 80 ಪ್ರೊ ಮತ್ತು ಹಾನರ್ 80 SE ಎಂಬ ಒಟ್ಟು ಮೂರು ಫೋನ್​ಗಳಿದೆ.

Honor 80 Series: ಬರೋಬ್ಬರಿ 160MP ಕ್ಯಾಮೆರಾ: ಟೆಕ್ ಮಾರುಕಟ್ಟೆಯನ್ನು ದಂಗಾಗಿಸಿದ ಹೊಸ ಹಾನರ್ 80 ಸರಣಿ ಸ್ಮಾರ್ಟ್​ಫೋನ್
Honor 80 Series
Follow us
TV9 Web
| Updated By: Vinay Bhat

Updated on: Nov 24, 2022 | 10:49 AM

ಟೆಕ್ ಮಾರುಕಟ್ಟೆಯಲ್ಲಿ ಕ್ಯಾಮೆರಾ ಫೋನ್​ಗಳ ನಡುವಣ ಪೈಪೋಟಿ ಹೆಚ್ಚುತ್ತಿದೆ. ಯಾವಾಗ ಮೋಟೋ ಕಂಪನಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಮೊಟ್ಟ ಮೊದಲ ಸ್ಮಾರ್ಟ್​ಫೋನ್ (Smartphone) ಅನಾವರಣ ಮಾಡಿತೋ ಅಲ್ಲಿಂದ ಹೆಚ್ಚಿನ ಕಂಪನಿಗಳು ಕ್ಯಾಮೆರಾ ಮೇಲೆಯೇ ಹೆಚ್ಚಿನ ಆಸಕ್ತಿ ತೋರಿಸಿದೆ. ಇದೀಗ ಹಾನರ್ ಸರದಿ. ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಆಕರ್ಷಕ ಮೊಬೈಲ್​ಗಳನ್ನು ಪರಿಚಯಿಸುವ ಪ್ರಸಿದ್ಧ ಹಾನರ್‌ (Honor) ಕಂಪನಿ ಇದೀಗ ನೂತನ ಫೋನ್​ನೊಂದಿಗೆ ಮತ್ತೆ ಬಂದಿದೆ. ಈ ಬಾರಿ ಹಾನರ್ ಕಂಪನಿ ತನ್ನ ಬಹುನಿರೀಕ್ಷಿತ ಹಾನರ್‌ 80 ಸರಣಿ (Honor 80 Series) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಇದರಲ್ಲಿ ಹಾನರ್ 80, ಹಾನರ್ 80 ಪ್ರೊ ಮತ್ತು ಹಾನರ್ 80 SE ಎಂಬ ಒಟ್ಟು ಮೂರು ಫೋನ್​ಗಳಿದೆ. ಕ್ಯಾಮೆರಾದಿಂದಲೇ ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿರುವ ಈ ಸ್ಮಾರ್ಟ್‌ಫೋನ್​ನಲ್ಲಿ ಆಕರ್ಷಕ ಫೀಚರ್​ಗಳಿದೆ. ಹಾಗಾದರೆ ಇದರ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಹಾನರ್ 80 ವಿಶೇಷತೆ:

ಈ ಸ್ಮಾರ್ಟ್‌ಫೋನ್‌ ಫೀಚರ್ಸ್ ಬಗ್ಗೆ ನೋಡುವುದಾದರೆ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080*2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು 120Hz ರಿಫ್ರೆಶ್‌ ರೇಟ್‌ ನೀಡಲಾಗಿದೆ. ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 782G+ SoC ಪ್ರೊಸೆಸರ್‌ ಇದೆ. ಹಾನರ್‌ 80ರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 160 ಮೆಗಾಪಿಕ್ಸೆಲ್​ನಲ್ಲಿದೆ. ಎರಡನೇ ಕ್ಯಾಮೆರಾ 8 ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಹೊಂದಿದೆ. ಇದರ ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 4,800mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಇದಕ್ಕೆ ತಕ್ಕಂತೆ 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ
Image
Whatsapp New Update: WhatsAppನಲ್ಲಿ ಶೀಘ್ರದಲ್ಲೇ ಬರಲಿದೆ ಕಾಲ್​ ಟ್ಯಾಬ್, ಕರೆಗಳ ವಿವರಗಳನ್ನು ಟ್ರ್ಯಾಕ್ ಮಾಡಬಹುದು
Image
OnePlus 10 Pro 5G: ಈ ಆಫರ್ ಮಿಸ್ ಮಾಡ್ಬೇಡಿ: 71,999 ರೂ. ವಿನ ಈ ಸ್ಮಾರ್ಟ್​ಫೋನ್ ಬೆಲೆ ಈಗ ಕೇವಲ …
Image
Twitter Layoffs: ಟ್ವಿಟರ್ ಉದ್ಯೋಗಿಗಳ ವಜಾ ಮುಗಿದಿದೆ, ಮತ್ತೆ ನೇಮಕಾತಿ ಮಾಡುತ್ತೇವೆ ಎಂದ ಮಸ್ಕ್
Image
Google Layoffs: ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್​ನಿಂದ 10,000 ಉದ್ಯೋಗಿಗಳ ವಜಾಕ್ಕೆ ಸಿದ್ಧತೆ; ವರದಿ

ಹಾನರ್ 80 ಪ್ರೊ ವಿಶೇಷತೆ:

ಈ ಸ್ಮಾರ್ಟ್‌ಫೋನ್‌ ಫೀಚರ್ಸ್ ಬಗ್ಗೆ ನೋಡುವುದಾದರೆ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,224*2,700 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು 120Hz ರಿಫ್ರೆಶ್‌ ರೇಟ್‌ ನೀಡಲಾಗಿದೆ. ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8+ GEN 1ಪ್ರೊಸೆಸರ್‌ ಇದೆ. ಹಾನರ್‌ 80ಪ್ರೊನಲ್ಲಿ ಕೂಡ ಮುಖ್ಯ ಕ್ಯಾಮೆರಾ ಬರೋಬ್ಬರಿ 160 ಮೆಗಾಪಿಕ್ಸೆಲ್​ನಲ್ಲಿದೆ. ಎರಡನೇ ಕ್ಯಾಮೆರಾ 50MP ಆಲ್ಟ್ರಾ ವೈಡ್ ಮ್ಯಾಕ್ರೊ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಹೊಂದಿದೆ. ಇದರ ಜೊತೆಗೆ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 4,800mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಇದಕ್ಕೆ ತಕ್ಕಂತೆ ಸೂಪರ್ ಫಾಸ್ಟ್ 66W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹಾನರ್ 80 SE ವಿಶೇಷತೆ:

ಈ ಸ್ಮಾರ್ಟ್‌ಫೋನ್‌ ಫೀಚರ್ಸ್ ಬಗ್ಗೆ ನೋಡುವುದಾದರೆ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,224*2,700 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು 120Hz ರಿಫ್ರೆಶ್‌ ರೇಟ್‌ ನೀಡಲಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 900 ಪ್ರೊಸೆಸರ್‌ ಇದೆ. ಹಾನರ್‌ 80ಪ್ರೊನಲ್ಲಿ ಕೂಡ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್​ನಲ್ಲಿದೆ. ಎರಡನೇ ಕ್ಯಾಮೆರಾ 5MP ಆಲ್ಟ್ರಾ ವೈಡ್ ಮ್ಯಾಕ್ರೊ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಹೊಂದಿದೆ. ಇದರ ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 4,600mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಇದಕ್ಕೆ ತಕ್ಕಂತೆ ಸೂಪರ್ ಫಾಸ್ಟ್ 66W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಬೆಲೆ ಎಷ್ಟು?:

ಹಾನರ್ 80, ಹಾನರ್ 80 ಪ್ರೊ ಮತ್ತು ಹಾನರ್ 80 SE ಸ್ಮಾರ್ಟ್​ಫೋನ್ ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಕೆಲ ತಿಂಗಳ ಬಳಿಕ ಇದು ಭಾರತದ ಮಾರುಕಟ್ಟೆಗೂ ಲಗ್ಗೆಯಿಡುವ ಬಗ್ಗೆ ವದಂತಿಯಿದೆ. ಇಲ್ಲಿದೆ ಬೆಲೆಗಳ ಪಟ್ಟಿ.

ಹಾನರ್ 80 8GB + 256GB ಸ್ಟೋರೇಜ್ ರೂಪಾಂತರಕ್ಕೆ CNY 2,699 (ಭಾರತದಲ್ಲಿ ಅಂದಾಜು 31,000 ರೂ.). 12GB + 256GB ಸ್ಟೋರೇಜ್​ಗೆ CNY 2,999 ( 34,000 ರೂ.) ಮತ್ತು 12GB + 512GB ಸ್ಟೋರೇಜ್​ಗೆ CNY 3,299 (ಭಾರತದಲ್ಲಿ 38,000 ರೂ.).

ಹಾನರ್ 80 ಪ್ರೊ 8GB + 256GB ಸ್ಟೋರೇಜ್ ರೂಪಾಂತರಕ್ಕೆ CNY 3,499 (ಭಾರತದಲ್ಲಿ ಅಂದಾಜು 40,000 ರೂ.). 12GB + 256GB ಸ್ಟೋರೇಜ್​ಗೆ CNY 3,799 (43,000 ರೂ.) ಮತ್ತು 12GB + 512GB ಸ್ಟೋರೇಜ್​ಗೆ CNY 4,099 (ಭಾರತದಲ್ಲಿ 47,000 ರೂ.).

ಹಾನರ್ 80 SE 8GB + 256GB ಸ್ಟೋರೇಜ್ ರೂಪಾಂತರಕ್ಕೆ CNY 2,399 (ಭಾರತದಲ್ಲಿ ಅಂದಾಜು 27,000 ರೂ.). 12GB + 256GB ಸ್ಟೋರೇಜ್​ಗೆ CNY 2,699 (31,000 ರೂ.).

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ