- Kannada News Photo gallery iPhone 14 is available at a discounted price on Amazon check new price technology News in Kannada
iPhone 14: ಇದೇ ಮೊದಲ ಬಾರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ ಹೊಸ ಐಫೋನ್ 14: ಎಷ್ಟು ರೂ. ನೋಡಿ
Apple iPhone 14 Price: ಐಫೋನ್ 14 128GB ಸ್ಟೋರೇಜ್ ಮಾಡೆಲ್ 79,900 ರೂಪಾಯಿಗೆ ಬಿಡುಗಡೆ ಆಗಿತ್ತು. ಇದೀಗ ರಿಲೀಸ್ ಆಗಿ ಮೊದಲ ಬಾರಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಈ ಫೋನನ್ನು ನೀವು 77,400 ರೂ. ಗೆ ಅಮೆಜಾನ್ನಲ್ಲಿ ಖರೀದಿಸಬಹುದು. ಸದ್ಯ 2500 ರೂ. ಗಳ ರಿಯಾಯಿತಿ ಘೋಷಿಸಲಾಗಿದೆ. ಜೊತೆಗೆ ನೀವು ಹೆಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ ಮೂಲಕ ಪಡೆದುಕೊಂಡರೆ 5,000 ರೂ. ಗಳ ಹೆಚ್ಚಿನ ಡಿಸ್ಕೌಂಟ್ ಸಿಗಲಿದೆ.
Updated on: Nov 24, 2022 | 12:36 PM

ಆ್ಯಪಲ್ ಕಂಪನಿ ಇತ್ತೀಚೆಗಷ್ಟೆ ಅನಾವರಣಗೊಳಿಸಿದ ಐಫೋನ್ 14 ಸ್ಮಾರ್ಟ್ಫೋನ್ ಇದೀಗ ಬಂಪರ್ ಡಿಸ್ಕೌಂಟ್ನಲ್ಲಿ ಮಾರಾಟ ಆಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಈ ಆಫರ್ ಕಾಣಿಸಿಕೊಂಡಿದೆ. ನೀವು ಐಫೋನ್ ಖರೀದಿಸಬೇಕು ಎಂದು ಅಂದುಕೊಂಡಿದ್ದಲ್ಲಿ ಅಥವಾ ಹಳೆಯ ಐಫೋನ್ ಬಿಟ್ಟು ಹೊಸ ಐಫೋನ್ ಪಡೆದುಕೊಳ್ಳುವ ಪ್ಲಾನ್ನಲ್ಲಿದ್ದರೆ ಇದೊಂದು ಅತ್ಯುತ್ತಮ ಅವಕಾಶ.

ಐಫೋನ್ 14 128GB ಸ್ಟೋರೇಜ್ ಮಾಡೆಲ್ 79,900 ರೂಪಾಯಿಗೆ ಬಿಡುಗಡೆ ಆಗಿತ್ತು. ಇದೀಗ ರಿಲೀಸ್ ಆಗಿ ಮೊದಲ ಬಾರಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಈ ಫೋನನ್ನು ನೀವು 77,400 ರೂ. ಗೆ ಅಮೆಜಾನ್ನಲ್ಲಿ ಖರೀದಿಸಬಹುದು. ಸದ್ಯ 2500 ರೂ. ಗಳ ರಿಯಾಯಿತಿ ಘೋಷಿಸಲಾಗಿದೆ. ಜೊತೆಗೆ ನೀವು ಹೆಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ ಮೂಲಕ ಪಡೆದುಕೊಂಡರೆ 5,000 ರೂ. ಗಳ ಹೆಚ್ಚಿನ ಡಿಸ್ಕೌಂಟ್ ಸಿಗಲಿದೆ.

ಈ ಮೂಲಕ ಐಫೋನ್ 14 ಅನ್ನು 72,400 ರೂ. ಗೆ ನಿಮ್ಮದಾಗಿಸಬಹುದು. ನೀವು ಐಫೋನ್ 11, ಐಫೋನ್ XR ಅಥವಾ ಐಫೋನ್ 12 ಉಪಯೋಗಿಸುತ್ತಿದ್ದರೆ ಬದಲಾಯಿಸಲು ಉತ್ತಮ ಸಮಯ. ನೀವೆಲ್ಲಾದರು ಐಫೋನ್ 13 ಬಳಸುತ್ತದ್ದರೆ ಐಫೋನ್ 15 ಗೆ ಕಾಯುವುದು ಉತ್ತಮ. ಯಾಕೆಂದರೆ ಐಫೋನ್ 13 ಮತ್ತು 14 ನಲ್ಲಿರುವ ಫೀಚರ್ಸ್ ಬಹುತೇಕ ಒಂದೇರೀತಿಯಲ್ಲಿದೆ.

ಐಫೋನ್ 14 ಫೋನ್ ಸೂಪರ್ ರೆಟಿನಾ 6.1 ಇಂಚಿನ XDR OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್ ಸಪೋರ್ಟ್ ಪಡೆದುಕೊಂಡಿದೆ. A15 ಬಯೋನಿಕ್ ಚಿಪ್ಸೆಟ್ ನಿಂದ ಕಾರ್ಯನಿರ್ವಹಿಸುತ್ತದೆ.

ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಎರಡೂ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ ಕೂಡ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿದೆ.

ಐಫೋನ್ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು ಇ-ಸಿಮ್ ಆಯ್ಕೆಯನ್ನು ನೀಡಲಾಗಿದೆ. ಇದರ ಜೊತೆಗೆ ಕೆಲ ಬ್ಯಾಂಕ್ ಆಫರ್ ಪಡೆದುಕೊಂಡಿರುವ ಐಫೋನ್ 13 ಅನ್ನು ನೀವು ಅಮೆಜಾನ್ನಲ್ಲಿ 65,000 ರೂ. ಗೆ ಖರೀದಿಸಬಹುದು.

ಐಫೋನ್ 13 6.1 ಇಂಚಿನ ಡಿಸ್ ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್, 1200 ನಿಟ್ಸ್ ಬ್ರೈಟ್‌ನೆಸ್ ನಿಂದ ಕೂಡಿದೆ. ಹಾಗೆಯೇ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅಳವಡಿಸಲಾಗಿತ್ತು. ಕ್ಯಾಮರಾ ವಿಚಾರಕ್ಕೆ ಬರುವುದಾದರೆ, ಐಫೋನ್ 13 ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ.

ಐಫೋನ್ 14 ಪ್ರೊ, 14 ಪ್ರೊ ಮ್ಯಾಕ್ಸ್ ಈ ಎರಡು ಫೋನ್‌ಗಳು ಕ್ಯಾಮೆರಾ, ಬ್ಯಾಟರಿ ಸೇರಿದಂತೆ ಹಲವು ವಿಭಾಗಗಳಲ್ಲಿ ಅಪ್‌ಡೇಟ್ ಪಡೆದಿವೆ. ಐಫೋನ್ 14 ಪ್ರೊ ಹಿಂಬದಿಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ನಿಂದ ಕೂಡಿದ್ದು 65 ಪ್ರತಿಶತ ದೊಡ್ಡ ಸಂವೇದಕವನ್ನು ಹೊಂದಿದೆ. ಆಟೋಫೋಕಸ್, ಕ್ರ್ಯಾಶ್ ಡಿಟೆಕ್ಷನ್ ಮತ್ತು Emergency SOS via satellite ಸಂಪರ್ಕವನ್ನು ಪಡೆದುಕೊಂಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಡಿದೆ.









