Updated on:Nov 24, 2022 | 4:16 PM
Bangalore Agarbatti mega fair at Palace Grounds in Bengaluru news in kannada
ಈ ವೇಳೆ ಮಾತನಾಡಿದ ಮುರುಗೇಶ್ ನಿರಾಣಿ, ಅಗರಬತ್ತಿ ಕ್ಷೇತ್ರ 8 ಸಾವಿರ ಕೋಟಿ ರೂ. ವಹಿವಾಟು ಹೊಂದಿದೆ. ದೇಶದಲ್ಲಿ ಶೇ.60ರಷ್ಟು ಅಗರಬತ್ತಿ ಕರ್ನಾಟಕದಲ್ಲೇ ತಯಾರಿಸಲಾಗುತ್ತಿದೆ ಎಂದರು.
ಕರ್ನಾಟಕ ಅಗರಬತ್ತಿ, ಸುಗಂಧ ದ್ರವ್ಯ ಉತ್ಪನ್ನಕ್ಕೆ ಹೆಸರುವಾಸಿಯಾಗಿದೆ. ಸಿಎಂ ಬೊಮ್ಮಾಯಿಗೆ ಕೈಗಾರಿಕಾ ಕ್ಷೇತ್ರದ ಬಗ್ಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಅವರ ಯೋಜನೆಯಿಂದಲೇ ಕೈಗಾರಿಕಾ ಕಂಪನಿಗಳು ಉಳಿದಿವೆ ಎಂದರು.
ಇಂದಿನಿಂದ (ನ.24) ಎರಡು ದಿನಗಳ ಕಾಲ ನಡೆಯುವ ಈ ಅಗರಬತ್ತಿ ಮೇಳದಲ್ಲಿ 500ಕ್ಕೂ ಹೆಚ್ಚು ಸ್ಟಾಲ್ಗಳನ್ನು ಹಾಕಲಾಗಿದೆ.
ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘದಿಂದ ಆಯೋಜಿಸಿರುವ ಈ ಮೇಳದಲ್ಲಿ ಅಗರಬತ್ತಿ ರಿಟೇಲ್ ಕ್ಷೇತ್ರದ ಭವಿಷ್ಯ,ಪ್ಯಾಕೇಜಿಂಗ್ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.
Published On - 4:11 pm, Thu, 24 November 22