ಮತ್ತೆ ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತ ಪಾಕ್ ತಂಡ..! ತನಿಖೆಗಾಗಿ ಐಸಿಸಿ ಮುಂದೆ ಶ್ರೀಲಂಕಾ ಮನವಿ

PAK vs SL: ಈ ಎರಡು ದೇಶಗಳ ನಡುವೆ ನಡೆದ ಈ ಟೆಸ್ಟ್ ಸರಣಿಯಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ಶ್ರೀಲಂಕಾದ ಪ್ರಮುಖ ನಾಯಕರೊಬ್ಬರು ಅಲ್ಲಿನ ಸಂಸತ್ತಿನಲ್ಲಿ ಆರೋಪಿಸಿದ್ದಾರೆ.

Nov 24, 2022 | 10:53 AM
TV9kannada Web Team

| Edited By: pruthvi Shankar

Nov 24, 2022 | 10:53 AM

ಪಾಕಿಸ್ತಾನ ಕ್ರಿಕೆಟ್ ತಂಡದ ಮೇಲೆ ಆಗಾಗ್ಗೆ ಫಿಕ್ಸಿಂಗ್‌ ಆರೋಪ ಕೇಳಿಬರುವುದು ಹೊಸ ವಿಚಾರವೆನ್ನಲ್ಲ. ಹಲವು ಬಾರಿ ಫಿಕ್ಸಿಂಗ್‌ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿರುವ ಈ ತಂಡದ ಆಟಗಾರರು ವಿಶ್ವ ಕ್ರಿಕೆಟ್​ನ ಮುಂದೆ ಮಂಡಳಿಯ ಮಾನ ಕಳೆದಿದ್ದಾರೆ. ಇದರ ಹೊಸ ಅಧ್ಯಾಯವೆಂಬಂತೆ ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ದೊಡ್ಡ ಆರೋಪ ಕೇಳಿಬಂದಿದೆ.

1 / 5
ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಉಭಯ ದೇಶಗಳ ನಡುವೆ ನಡೆದ ಟೆಸ್ಟ್ ಸರಣಿ 1-1 ರಲ್ಲಿ ಸಮಬಲಗೊಂಡಿತ್ತು. ಈಗ ಈ ಎರಡು ದೇಶಗಳ ನಡುವೆ ನಡೆದ ಈ ಟೆಸ್ಟ್ ಸರಣಿಯಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ಶ್ರೀಲಂಕಾದ ಪ್ರಮುಖ ನಾಯಕರೊಬ್ಬರು ಅಲ್ಲಿನ ಸಂಸತ್ತಿನಲ್ಲಿ ಆರೋಪಿಸಿದ್ದಾರೆ.

2 / 5
ಈ ಗಂಭೀರ ಆರೋಪದ ನಂತರ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಈ ಟೆಸ್ಟ್ ಸರಣಿಯನ್ನು ತನಿಖೆ ಮಾಡುವಂತೆ ಐಸಿಸಿ ಮುಂದೆ ಮನವಿ ಇಟ್ಟಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದ್ದ ಪಾಕ್ ತಂಡ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

3 / 5
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ ತಂಡ 4 ವಿಕೆಟ್‌ಗಳಿಂದ ಗೆದ್ದುಕೊಂಡರೆ, ಎರಡನೇ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಶ್ರೀಲಂಕಾ ತಂಡ 246 ರನ್‌ಗಳ ಬೃಹತ್ ಗೆಲುವು ಸಾಧಿಸಿತ್ತು.

4 / 5
ಶ್ರೀಲಂಕಾ ಮಾಡಿರುವ ಈ ಆರೋಪದ ಬಗ್ಗೆ ಪಿಸಿಬಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಷಯದ ಬಗ್ಗೆ ಶ್ರೀಲಂಕಾ ಅಥವಾ ಐಸಿಸಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿಯೇ ನಾವು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಪಿಸಿಬಿ ಅಧಿಕಾರಿ ತಿಳಿಸಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada