ಐಕ್ಯೂ Z9 5G ಬೆಲೆ ಬಹಿರಂಗ: 20 ಸಾವಿರಕ್ಕಿಂತ ಕಡಿಮೆಗೆ ಸ್ಟ್ರಾಂಗ್ ಫೀಚರ್​ಗಳ ಫೋನ್

|

Updated on: Mar 09, 2024 | 1:19 PM

iQOO Z9 5G Price in India: ಐಕ್ಯೂ Z9 5G ಸ್ಮಾರ್ಟ್‌ಫೋನ್ ಮೈಕ್ರೋಸೈಟ್‌ನಿಂದ 20 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಲಾಗಿದೆ. ಅಂದರೆ 18 ರಿಂದ 20 ಸಾವಿರ ರೂ. ವರೆಗೆ ಬೆಲೆ ಬರಬಹುದು. ಟಿಪ್‌ಸ್ಟರ್ ಮುಕುಲ್ ಶರ್ಮಾ ಮಾಹಿತಿ ನೀಡಿದ್ದಾರೆ.

ಐಕ್ಯೂ Z9 5G ಬೆಲೆ ಬಹಿರಂಗ: 20 ಸಾವಿರಕ್ಕಿಂತ ಕಡಿಮೆಗೆ ಸ್ಟ್ರಾಂಗ್ ಫೀಚರ್​ಗಳ ಫೋನ್
iQOO Z9 5G
Follow us on

ಕೆಲವು ವರ್ಷಗಳ ಹಿಂದೆ ಭಾರತೀಯ ಮಾರುಕಟ್ಟೆಗೆ ಬಂದ ವಿವೋದ ಸಬ್​ಬ್ರ್ಯಾಂಡ್ ಐಕ್ಯೂ ವೇಗವಾಗಿ ಹಿಡಿತ ಸಾಧಿಸುತ್ತಿದೆ. ಚೀನೀ ಬ್ರಾಂಡ್ ಇದೀಗ ಹೊಸ ಸ್ಮಾರ್ಟ್​ಫೋನ್ ಒಂದನ್ನು ದೇಶದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಮಾರ್ಚ್ 12 ರಂದು ಐಕ್ಯೂ Z9 5G (iQOO Z9 5G) ಫೋನ್ ಬಿಡುಗಡೆಯಾಗಲಿದೆ. ಕಂಪನಿಯು ಈ ಸ್ಮಾರ್ಟ್​ಫೋನ್​ನ ಫೀಚರ್ಸ್ ಕುರಿತ ಮಾಹಿತಿ ಒಂದೊಂದಾಗಿ ಬಹಿರಂಗ ಪಡಿಸುತ್ತಿದೆ. ಇದೀಗ ಐಕ್ಯೂ Z9 5G ಫೋನಿನ ಬೆಲೆ ಎಷ್ಟಿರಬಹುದು ಎಂಬುದು ಬೆಳಕಿಗೆ ಬಂದಿದೆ. ಐಕ್ಯೂ Z9 5G ಅನ್ನು ಮಧ್ಯ ಶ್ರೇಣಿಯಲ್ಲಿ ತರಲಾಗುತ್ತಿದ್ದು, ಇದು ಶವೋಮಿ ಮತ್ತು ರಿಯಲ್ ಮಿಯ ಅನೇಕ ಸ್ಮಾರ್ಟ್‌ಫೋನ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಐಕ್ಯೂ Z9 5G ಸ್ಮಾರ್ಟ್‌ಫೋನ್ ಮೈಕ್ರೋಸೈಟ್‌ನಿಂದ 20 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಲಾಗಿದೆ. ಅಂದರೆ 18 ರಿಂದ 20 ಸಾವಿರ ರೂ. ವರೆಗೆ ಬೆಲೆ ಬರಬಹುದು. ಟಿಪ್‌ಸ್ಟರ್ ಮುಕುಲ್ ಶರ್ಮಾ ಸ್ಮಾರ್ಟ್‌ಫೋನ್ ಝಡ್9 5G ಬೆಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಫೋನ್‌ನಲ್ಲಿ ಮೀಡಿಯಾ ಟೆಕ್‌ನ ಡೈಮೆನ್ಶನ್ 7200 ಪ್ರೊಸೆಸರ್ಅನ್ನು ಒದಗಿಸುವುದರಿಂದ, ಇದು ಈ ಪ್ರೊಸೆಸರ್ ಹೊಂದಿರುವ ಅಗ್ಗದ ಸ್ಮಾರ್ಟ್‌ಫೋನ್ ಆಗಿರಬಹುದು.

ನಿಮ್ಮದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌?: ವಾಟ್ಸ್​ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ ನೋಡಿ

ಐಕ್ಯೂ Z9 5G ಗೆ ಸಂಬಂಧಿಸಿದಂತೆ, ಈ ಮೊಬೈಲ್ 1800 ನಿಟ್‌ಗಳ ಗರಿಷ್ಠ ಬ್ರೈಟ್​ನೆಸ್ ನೀಡುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಇದು 20 ಸಾವಿರದೊಳಗಿನ ಬೆಲೆ ವಿಭಾಗದಲ್ಲಿ ಅತ್ಯಧಿಕವಾಗಿದೆ. ಈ ಫೋನ್ 120Hz ರಿಫ್ರೆಶ್ ದರ, 300Hz ಟಚ್ ಸ್ಯಾಂಪ್ಲಿಂಗ್ ದರ, 1200Hz ತ್ವರಿತ ಸ್ಪರ್ಶ ಮಾದರಿ ದರ ಮತ್ತು ಉತ್ತಮ ಗೇಮಿಂಗ್ ಅನುಭವಕ್ಕಾಗಿ ಮೂವಿಂಗ್ ಕಂಟ್ರೋಲರ್ ಬೆಂಬಲವನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ.

ಈ ಸ್ಮಾರ್ಟ್​ಫೋನ್ ಡ್ಯುಯಲ್ ಸ್ಟೀರಿಯೋ ಸ್ಪೀಕರ್​ಗಳೊಂದಿಗೆ ಅನಾವರಣಗೊಳ್ಳಲಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಬೆಂಬಲಿಸುವ 50-ಮೆಗಾಪಿಕ್ಸೆಲ್ ಮುಖ್ಯ ಹಿಂಭಾಗದ ಕ್ಯಾಮೆರಾವನ್ನು ಹೊಂದಿರುತ್ತದೆ. CallMeShazzam ಪ್ರಕಾರ, ಐಕ್ಯೂ Z9 5G AMOLED ಡಿಸ್​ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್ 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ, ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ