Tech Tips: ನಿಮ್ಮದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್?: ವಾಟ್ಸ್ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ ನೋಡಿ
WhatsApp Call Record Tricks: ನಿಮ್ಮದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆಗಿದ್ದರೆ ವಾಟ್ಸ್ಆ್ಯಪ್ನಲ್ಲಿ ವಾಯ್ಸ್ ಕಾಲ್ಗಳನ್ನು ರೆಕಾರ್ಡ್ ಮಾಡುವುದು ಹೇಗೆ?. ಆದರೆ, ಒಂದು ವಿಷಯವನ್ನು ನೆನಪಿನಲ್ಲಿಡಿ, ಯಾರೊಬ್ಬರ ಫೋನ್ ಕರೆಯನ್ನು ರೆಕಾರ್ಡ್ ಮಾಡುವ ಮುನ್ನ ಅವರ ಅನುಮತಿ ಪಡೆಯಿರಿ. ಯಾರೊಬ್ಬರ ಕರೆಯನ್ನು ರೆಕಾರ್ಡ್ ಮಾಡುವ ಮೊದಲು ನಿಮ್ಮ ರಾಜ್ಯದ ಕಾನೂನು ನಿಯಮಗಳನ್ನು ತಿಳಿದುಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ವಂಚನೆಯ ಪ್ರಮಾಣ ಹೆಚ್ಚುತ್ತಿದ್ದು, ಪ್ರತಿದಿನ ಎಚ್ಚರದಿಂದಿರುವುದು ಬಹಳ ಮುಖ್ಯ. ಒಂದು ತಪ್ಪು ನಿರ್ಧಾರ ನಿಮ್ಮ ಜೀವಕ್ಕೆ ಅಪಾಯ ತರಬಹುದು. ಈಗ ವಾಟ್ಸ್ಆ್ಯಪ್ನಲ್ಲಿಯೂ (WhatsApp) ಹಲವು ವಂಚನೆಗಳು ನಡೆಯುತ್ತಿವೆ. ಈ ಬಗ್ಗೆ ಎಚ್ಚರವಾಗಿರುವುದು ಅಗತ್ಯ. ವಾಟ್ಸ್ಆ್ಯಪ್ನಲ್ಲಿ ಕರೆ ಮಾಡುವ ಮೂಲಕ ಅಥವಾ ಸಂದೇಶ ಕಳುಹಿಸುವ ಮೂಲಕ ಯಾರಾದರೂ ನಿಮ್ಮನ್ನು ವಂಚಿಸಲು ಪ್ರಯತ್ನಿಸಿದರೆ ದಾಖಲೆಗಳೊಂದಿಗೆ ತಕ್ಷಣವೇ ವರದಿ ಮಾಡಿ. ಆದರೆ ವಾಟ್ಸ್ಆ್ಯಪ್ನಲ್ಲಿ ಕರೆಗಳನ್ನು ರೆಕಾರ್ಡ್ ಮಾಡಲು ಸಾಧ್ಯವಿಲ್ಲ. ಹೀಗಾದಾಗ ಸಾಕ್ಷ್ಯವನ್ನು ಹೇಗೆ ಕಂಡುಹಿಡಿಯಬೇಕು?. ಅದಕ್ಕೂ ಒಂದು ಉಪಾಯವಿದೆ.
ನಿಮ್ಮದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆಗಿದ್ದರೆ ವಾಟ್ಸ್ಆ್ಯಪ್ನಲ್ಲಿ ವಾಯ್ಸ್ ಕಾಲ್ಗಳನ್ನು ರೆಕಾರ್ಡ್ ಮಾಡುವುದು ಹೇಗೆ ನೋಡೋಣ.
ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ 108MP ಕ್ಯಾಮೆರಾದ ಈ ಹೊಸ ಸ್ಮಾರ್ಟ್‌ಫೋನ್
- ಮೊದಲು, ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ ಮತ್ತು “ಕಾಲ್ ರೆಕಾರ್ಡರ್: ಕ್ಯೂಬ್ ಎಸಿಆರ್” ಅಪ್ಲಿಕೇಶನ್ ಸರ್ಚ್ ಮಾಡಿ.
- ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಒಮ್ಮೆ ಇನ್ಸ್ಟಾಲ್ ಆದ ಬಳಿಕ ಅಪ್ಲಿಕೇಶನ್ ತೆರೆಯಿರಿ.
- ಈಗ ವಾಟ್ಸ್ಆ್ಯಪ್ಗೆ ಹೋಗಿ ಮತ್ತು ಯಾರಿಗಾದರೂ ಕರೆ ಮಾಡಿ ಅಥವಾ ಬಂದ ಕರೆಯನ್ನು ಸ್ವೀಕರಿಸಿ.
- ಕರೆ ಸಮಯದಲ್ಲಿ, ನೀವು “ಕ್ಯೂಬ್ ಕಾಲ್” ನ ವಿಜೆಟ್ ಅನ್ನು ನೋಡುತ್ತೀರಿ. ಅದನ್ನು ಡಿಸ್ಪ್ಲೇ ಮೇಲೆ ನೋಡದಿದ್ದರೆ, ಕ್ಯೂಬ್ ಕಾಲ್ ಅಪ್ಲಿಕೇಶನ್ ತೆರೆಯಿರಿ ಮತ್ತು ಧ್ವನಿ ಕರೆಗಳಿಗಾಗಿ “ಫೋರ್ಸ್ VoIP ಕರೆ” ಆಯ್ಕೆಯನ್ನು ಆಯ್ಕೆಮಾಡಿ.
- ನಂತರ ಈ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ವಾಟ್ಸ್ಆ್ಯಪ್ ವಾಯ್ಸ್ ಕರೆಯನ್ನು ರೆಕಾರ್ಡ್ ಮಾಡುತ್ತದೆ.
- ಹೀಗೆ ರೆಕಾರ್ಡ್ ಆದ ಆದ ಕಾಲ್ಗಳು ನಿಮ್ಮ ಮೊಬೈಲ್ನ ಆಂತರಿಕ ಮೆಮೊರಿಯಲ್ಲಿ ಆಡಿಯೋ ಫೈಲ್ ರೂಪದಲ್ಲಿ ಇರುತ್ತದೆ.
ಗೂಗಲ್ ಮ್ಯಾಪ್ಗೆ ನಿಮ್ಮ ಮನೆ, ಹೊಸ ಜಾಗವನ್ನು ಸೇರಿಸುವುದು ಹೇಗೆ?: ಇಲ್ಲಿದೆ ಟ್ರಿಕ್
ಎಚ್ಚರ ವಹಿಸಿ:
ನೀವು ಯಾವುದೇ ಒಂದು ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್ಸ್ಟಾಲ್ ಮಾಡುವ ಮುನ್ನ ಎಚ್ಚರಬಹಿಸಬೇಕು. ಯಾಕಂದ್ರೆ ಈ ಥರ್ಡ್ ಪಾರ್ಟಿ ಆ್ಯಪ್ಗಳು ನಿಮ್ಮ ಫೋನ್ಗೆ ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರುವುದಿಲ್ಲ. ಹಾಗೆಯೆ, ಯಾರೊಬ್ಬರ ಫೋನ್ ಕರೆಯನ್ನು ರೆಕಾರ್ಡ್ ಮಾಡುವ ಮುನ್ನ ಯೋಚಿಸಿ. ಅವರ ಅನುಮತಿ ಪಡೆದು ರೆಕಾರ್ಟ್ ಮಾಡಿದರೆ ಉತ್ತಮ.
ಯಾರೊಬ್ಬರ ಕರೆಯನ್ನು ರೆಕಾರ್ಡ್ ಮಾಡುವ ಮೊದಲು ನಿಮ್ಮ ರಾಜ್ಯದ ಕಾನೂನು ನಿಯಮಗಳನ್ನು ತಿಳಿದುಕೊಳ್ಳಿ. ಆದರೆ ಸ್ಕ್ಯಾಮರ್‌ಗಳ ವಿಚಾರದಲ್ಲಿ ಸಾಕ್ಷ್ಯವಾಗಿ ಬಳಸಲು ಕರೆಗಳನ್ನು ರೆಕಾರ್ಡ್ ಮಾಡಿದರೆ, ತೊಂದರೆಯಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ