ಬಾಹ್ಯಾಕಾಶ ಅಧ್ಯಯನದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿರುವ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ನ ಕನ್ನಡಿಗಳನ್ನು (ಮಿರರ್) ಜೋಡಿಸಲಾಗಿದ್ದು ಅಂತಿಮ ರೂಪ ಪಡೆದುಕೊಂಡಿದೆ. ಡಿಸೆಂಬರ್ 25ರಂದು ಇದನ್ನು ಉಡಾವಣೆ ಮಾಡಲಾಗಿತ್ತು. ಎರಡು ವಾರಗಳ ತರುವಾಯು ಇದೀಗ ಮಹತ್ವದ ಮೈಲಿಗಲ್ಲನ್ನು ತಲುಪಿರುವ ನಾಸಾ ಅದರ ಅಂತಿಮ ಜೋಡಣೆಯನ್ನು ಪೂರ್ಣಗೊಳಿಸಿದ್ದು, ಸಂಪೂರ್ಣವಾಗಿ ನಿಯೋಜಿಸಿದೆ. ಈ ಕುರಿತು ನಾಸಾ ಮಾಹಿತಿ ನೀಡಿದ್ದು, ಸಂತಸ ಹಂಚಿಕೊಂಡಿದೆ. ‘‘ಎರಡು ವಾರಗಳ ನಂತರ ಯಶಸ್ವಿಯಾಗಿ ಟೆಲಿಸ್ಕೋಪ್ನ ಕನ್ನಡಿಗಳನ್ನು (ಮಿರರ್) ಕೂರಿಸಲಾಗಿದೆ. ಈ ಮೂಲಕ ಟೆಲಿಸ್ಕೋಪ್ ಸಂಪೂರ್ಣ ಸಿದ್ಧವಾಗಿದೆ’’ ಎಂದು ಹೇಳಿದೆ.
ದಕ್ಷಿಣ ಅಮೇರಿಕಾದ ಫ್ರೆಂಚ್ ಗಯಾನಾದಿಂದ ಈ ದೂರದರ್ಶಕ (ಟೆಲಿಸ್ಕೋಪ್) ಹೊತ್ತ ರಾಕೆಟ್ ಡಿಸೆಂಬರ್ 25ರಂದು ಪ್ರಯಾಣಿಸಿತ್ತು. ರಾಕೆಟ್ ಕೋನ್ ಆಕಾರದಲ್ಲಿ ಇದ್ದಿದ್ದರಿಂದ ಅತ್ಯಂತ ಶಕ್ತಿಶಾಲಿಯಾದ ದೊಡ್ಡ ಟೆಲಿಸ್ಕೋಪ್ಅನ್ನು ಪೂರ್ಣಪ್ರಮಾಣದಲ್ಲಿ ಕೂರಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಅದನ್ನು ಮಡಿಸಿ (ಫೋಲ್ಡ್) ಕಳುಹಿಸಲಾಗಿತ್ತು. ಇದೀಗ ಎರಡು ವಾರಗಳ ಪ್ರಯತ್ನದ ನಂತರ ಟೆಲಿಸ್ಕೋಪ್ ಸಿದ್ಧಗೊಂಡಿದೆ. ರಾಕೆಟ್ ಸದ್ಯ ಅದರ ಅಂತಿಮ ಕಕ್ಷೆಯತ್ತ ಪ್ರಯಾಣಿಸುತ್ತಿದ್ದು, ಅದು ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರವಿದೆ.
Two weeks after launch, @NASAWebb has hit its next biggest milestone: the mirrors have completed deployment and the next-generation telescope has taken its final form.
Next up for Webb? Five months of alignment and calibration before we start getting images: pic.twitter.com/BOj5O1HS37
— NASA (@NASA) January 8, 2022
ಈ ದೂರದರ್ಶಕದ ಮಹತ್ವವೇನು?
ಇನ್ಫ್ರಾರೆಡ್ ಟೆಕ್ನಾಲಜಿ ಮೂಲಕ ಗ್ಯಾಲಕ್ಸಿಯ ಮೊದಲ ನಕ್ಷತ್ರಗಳನ್ನು ನೋಡಲು ಈ ಟೆಲಿಸ್ಕೋಪ್ನಿಂದ ಸಾಧ್ಯವಾಗಲಿದೆ. ಅಂದರೆ 13.5 ಬಿಲಿಯನ್ ವರ್ಷಗಳ ಹಿಂದೆ ತಯಾರಾದ ನಕ್ಷತ್ರಗಳನ್ನು ನೋಡುತ್ತಾ, ವಿಶ್ವದ ಸೃಷ್ಟಿಯ ರಹಸ್ಯವನ್ನು ಅರಿಯಲು ಇದು ಸಹಾಯಕವಾಗಲಿದೆ. ಬಿಗ್ ಬ್ಯಾಂಗ್ ಸಂದರ್ಭದಲ್ಲಿ ರೂಪುಗೊಂಡ ಗ್ಯಾಲಕ್ಸಿಗಳು, ನಕ್ಷತ್ರದ ಮೂಲಕ ಇದುವರೆಗೆ ತಿಳಿಯದ ಸೃಷ್ಟಿಯ ರಹಸ್ಯ ಇದರಿಂದ ಅರಿಯಬಹುದು ಎನ್ನಲಾಗಿದೆ. ಇಷ್ಟೇ ಅಲ್ಲದೇ ಸೌರವ್ಯೂಹದಾಚೆ ಇರುವ ನಕ್ಷತ್ರಗಳ, ಗ್ರಹಗಳನ್ನು ನೋಡಲು ಹಾಗೂ ಅಧ್ಯಯನ ಮಾಡಲು ಇದರಿಂದ ಸಾಧ್ಯವಾಗಲಿದೆ. ಇದುವರೆಗೆ ಈ ಮಾದರಿಯ ಯಾಔಉದೇ ಟೆಲಿಸ್ಕೋಪ್ ಲಭ್ಯವಿರಲಿಲ್ಲ. ಆದ್ದರಿಂದ ಎಂದೂ ಕಾಣಿಸಿಕೊಳ್ಳದ ಹೊಸ ಜಾಗಗಳ ಚಿತ್ರಗಳನ್ನು ಈ ಟೆಲಿಸ್ಕೋಪ್ ಮೂಲಕ ಸೆರೆಹಿಡಿಯಬಹುದು. ಆದ್ದರಿಂದ ಈ ಯೋಜನೆ ಬಹಳ ಮಹತ್ವದ್ದು ಮತ್ತು ಕುತೂಹಲದ್ದೆನಿಸಿದೆ.
ಈ ಟೆಲಿಸ್ಕೋಪ್ ಕಾರ್ಯ ನಿರ್ವಹಿಸುವುದು ಎಂದಿನಿಂದ?
ಬಹಳ ಕುತೂಹಲ ಕೆರಳಿಸಿರುವ ಈ ವೆಬ್ ಸ್ಪೇಸ್ ಟೆಲಿಸ್ಕೋಪ್ ಕಾರ್ಯನಿರ್ವಹಿಸಲು ಸಮಯಾವಕಾಶ ಬೇಕಾಗಲಿದೆ. ನಾವು ಈ ಹಾದಿಯಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ನಾಸಾ ಹೇಳಿದೆ. 2022ರ ಜೂನ್ನಲ್ಲಿ ಈ ದೂರದರ್ಶಕ ಮೊದಲ ಚಿತ್ರವನ್ನು ಸೆರೆಹಿಡಿದು ಕಳುಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:
ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ಹೊಸ ವರ್ಷ!; ವಿಜ್ಞಾನಿಗಳು ಕಂಡುಹಿಡಿದ ಹೊಸ ಗ್ರಹದ ಮಾಹಿತಿ ಇಲ್ಲಿದೆ
Virat Kohli: ಒಂದು ಇನ್ಸ್ಟಾಗ್ರಾಮ್ ಪೋಸ್ಟ್ಗೆ ವಿರಾಟ್ ಕೊಹ್ಲಿ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ