ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ಹೊಸ ವರ್ಷ!; ವಿಜ್ಞಾನಿಗಳು ಕಂಡುಹಿಡಿದ ಹೊಸ ಗ್ರಹದ ಮಾಹಿತಿ ಇಲ್ಲಿದೆ

ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ಹೊಸ ವರ್ಷ!; ವಿಜ್ಞಾನಿಗಳು ಕಂಡುಹಿಡಿದ ಹೊಸ ಗ್ರಹದ ಮಾಹಿತಿ ಇಲ್ಲಿದೆ
ಪತ್ತೆಯಾದ ಹೊಸ ಗ್ರಹ (Credits: NASA, ESA and G. Bacon)

16 ಗಂಟೆಗಳಿಗೊಮ್ಮೆ ಒಂದು ವರ್ಷವಾದರೆ....! ಹೌದು. ಇಂತಹ ಹೊಸ ಗ್ರಹವೊಂದನ್ನು ವಿಜ್ಞಾನಿಗಳು ಅನ್ವೇಷಿಸಿದ್ದಾರೆ. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

TV9kannada Web Team

| Edited By: shivaprasad.hs

Nov 28, 2021 | 9:53 AM

ಪ್ರತಿ 16 ಗಂಟೆಗಳಿಗೊಮ್ಮೆ ಹೊಸ ವರ್ಷ ಬರುವ ಗ್ರಹದಲ್ಲಿ ಜೀವಿಸುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ! ಹೌದು, ನಾಸಾದ (NASA) ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್ (TESS), ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ನೇತೃತ್ವದ ಕಾರ್ಯಾಚರಣೆಯ ವಿಜ್ಞಾನಿಗಳು, ಗುರುಗ್ರಹದ ದ್ರವ್ಯರಾಶಿಯ ಐದು ಪಟ್ಟು ಹೆಚ್ಚು ಎಂದು ಅಂದಾಜಿಸಲಾದ ಗುರು ಗ್ರಹದಂತಹದ್ದೇ ಗ್ರಹವನ್ನು ಅನ್ವೇಷಣೆ ಮಾಡಿದ್ದಾರೆ. TOI-2109b ಎಂದು ಗುರುತಿಸಲಾದ ಗ್ರಹವು ಕೇವಲ 16 ಗಂಟೆಗಳಲ್ಲಿ ಅದರ ನಕ್ಷತ್ರದ ಸುತ್ತ ಸುತ್ತುತ್ತದೆ. ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡವು ಮಾಡಿದ ಈ ಕುರಿತ ಸಂಶೋಧನೆಗಳನ್ನು ಆಸ್ಟ್ರೋನಾಮಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ನವೆಂಬರ್ 23, 2021 ರಂದು ಪ್ರಕಟವಾದ ಅಧ್ಯಯನವು, ಹೊಸ ಗ್ರಹದ ಅತ್ಯಂತ ಬಿಗಿಯಾದ ಕಕ್ಷೆ ಮತ್ತು ಅದರ ನಕ್ಷತ್ರದ ಸಾಮೀಪ್ಯದಿಂದಾಗಿ,ತಾಪಮಾನವು ಸುಮಾರು 3,500 ಕೆಲ್ವಿನ್ ಅಥವಾ 3227 ಡಿಗ್ರಿ ಸೆಲ್ಸಿಯಸ್‌ಗೆ ಹತ್ತಿರದಲ್ಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ TOI-2109b ಗ್ರಹವು ಇದುವರೆಗೆ ಪತ್ತೆಯಾದ ಗ್ರಹಗಳಲ್ಲಿ ಅತಿ ಹೆಚ್ಚು ತಾಪಮಾನ ಹೊಂದಿರುವ ಎರಡನೇ ಸ್ಥಾನದಲ್ಲಿದೆ.

ಮೇ 13, 2020 ರಂದು, ನಾಸಾದ TESS ಉಪಗ್ರಹವು ಭೂಮಿಯಿಂದ 855 ಜ್ಯೋತಿರ್​ವರ್ಷಗಳ ದೂರದಲ್ಲಿರುವ ಹರ್ಕ್ಯುಲಸ್ ನಕ್ಷತ್ರಪುಂಜದ ದಕ್ಷಿಣ ಭಾಗದಲ್ಲಿರುವ TOI-2109b ಅನ್ನು ವೀಕ್ಷಿಸಲು ಪ್ರಾರಂಭಿಸಿತು. ಸಂಶೋಧಕರು ನಕ್ಷತ್ರದ ಬೆಳಕಿನ ಮಾಪನಗಳನ್ನು ಸಂಗ್ರಹಿಸಿದರು. ಅಂದರೆ ಗ್ರಹವು ನಕ್ಷತ್ರದ ಮುಂದೆ ಹಾದುಹೋಗುವಾಗ ನಕ್ಷತ್ರದ ಬೆಳಕಿನ ಪ್ರಮಾಣ ಸ್ವಲ್ಪ ಕಡಿಮೆಯಾಗುತ್ತದೆ. ಅದನ್ನೇ ಆಧಾರವಾಗಿಟ್ಟು ಗ್ರಹದ ಚಲನೆಯ ಅವಧಿಯನ್ನು ಲೆಕ್ಕ ಹಾಕಲಾಗಿದೆ.

ಅಧ್ಯಯನದ ಪ್ರಮುಖ ಲೇಖಕ ಇಯಾನ್ ವಾಂಗ್ ಹೇಳುವ ಪ್ರಕಾರ, ಒಂದು ಅಥವಾ ಎರಡು ವರ್ಷಗಳಲ್ಲಿ ಗ್ರಹವು ತನ್ನ ನಕ್ಷತ್ರದ ಹತ್ತಿರ ಹೇಗೆ ಚಲಿಸುತ್ತದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ ಮತ್ತು ಇನ್ನೊಂದು 10 ಮಿಲಿಯನ್ ವರ್ಷಗಳಲ್ಲಿ ಗ್ರಹವು ತನ್ನ ನಕ್ಷತ್ರಕ್ಕೆ ಬೀಳಬಹುದು ಎಂದು ಎಂದು ಅಂದಾಜಿಸಲಾಗಿದೆ. ಮುಂಬರುವ ಅಧ್ಯಯನಗಳಲ್ಲಿ ಮತ್ತಷ್ಟು ಅಂಶಗಳು ಪತ್ತೆಯಾಗಲಿವೆ ಎಂದು ಸಂಶೋಧಕರು ಭಾವಿಸಿದ್ದಾರೆ. ಉದಾಹರಣೆಗೆ ಇಂತಹ ಗ್ರಹಗಳ ರಚನೆಗೆ ಕಾರಣಗಳೇನು? ಇವುಗಳು ಏಕೆ ನಮ್ಮ ಸೌರವ್ಯೂಹದ ಭಾಗವಾಗಿಲ್ಲ? ಮೊದಲಾದ ವಿಚಾರಗಳು ಮತ್ತಷ್ಟು ಅಧ್ಯಯನದ ಬಳಿಕ ಹೊರಬರಲಿವೆ ಎಂದು ವಾಂಗ್ ಹೇಳಿದ್ದಾರೆ.

ಇದನ್ನೂ ಓದಿ:

ಸುಳ್ಳು ಹೇಳುತ್ತೀರಾ? ಜೋಕೆ! ಅತ್ಯಂತ ಪರಿಣಾಮಕಾರಿ ಸುಳ್ಳು-ಪತ್ತೆ ತಂತ್ರಜ್ಞಾನ ಅಭಿವೃದ್ಧಿ; ಇದು ಕಾರ್ಯ ನಿರ್ವಹಿಸೋದು ಹೇಗೆ?

ರೈಲಿಗೆ ಸಿಲುಕಿ ಸಾಗರ ಕೋರ್ಟ್​ ಬೆಂಚ್ ಕ್ಲರ್ಕ್ ಆತ್ಮಹತ್ಯೆ, ಮತ್ತೊಂದೆಡೆ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

Follow us on

Related Stories

Most Read Stories

Click on your DTH Provider to Add TV9 Kannada