ಪೂರ್ವ ಲಡಾಖ್​ ಗಡಿ ಸಮೀಪ ಹೆದ್ದಾರಿ ನಿರ್ಮಾಣ ಮಾಡಿದ ಚೀನಾ; ಕ್ಷಿಪಣಿ, ರಾಕೆಟ್​ ರೆಜಿಮೆಂಟ್​ ನಿಯೋಜನೆ

ಪೂರ್ವ ಲಡಾಖ್​ ಗಡಿ ಸಮೀಪ ಹೆದ್ದಾರಿ ನಿರ್ಮಾಣ ಮಾಡಿದ ಚೀನಾ; ಕ್ಷಿಪಣಿ, ರಾಕೆಟ್​ ರೆಜಿಮೆಂಟ್​ ನಿಯೋಜನೆ
ಸಾಂಕೇತಿಕ ಚಿತ್ರ

ಟಿಬೆಟ್​ ಸ್ವಾಯತ್ತ ಪ್ರದೇಶದ ಹಿಂಭಾಗದ ಸ್ಥಳಗಳಲ್ಲಿ ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ರಾಕೆಟ್​ ಮತ್ತು ಕ್ಷಿಪಣಿ ರೆಜಿಮೆಂಟ್​​ಗಳನ್ನು ನಿಯೋಜಿಸಿದೆ. ಹಾಗೇ ಅಲ್ಲಿ ಅಡಗಿಕೊಳ್ಳಲು ಅನುಕೂಲವಾಗುವ ತಾಣಗಳ ನಿರ್ಮಾಣವನ್ನೂ ಮಾಡಿದೆ ಎಂದು ಮೂಲಗಳು ತಿಳಿಸಿವೆ.

TV9kannada Web Team

| Edited By: Lakshmi Hegde

Nov 28, 2021 | 2:55 PM

ಭಾರತ-ಚೀನಾ ನಡುವೆ ಮಿಲಿಟರಿ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತೆ ಇದ್ದು, ಆಗಾಗ ಸಣ್ಣಮಟ್ಟದಲ್ಲಿ ಹೊತ್ತಿ ಉರಿಯುತ್ತಿದೆ. ಈ ಮಧ್ಯೆ ಪೂರ್ವ ಲಡಾಖ್​​ ಸಮೀಪದಲ್ಲಿಯೇ ಹೆದ್ದಾರಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಶುರು ಮಾಡಿದೆ ಮತ್ತು ಕ್ಷಿಪಣಿ, ರಾಕೆಟ್​ ರೆಜಿಮೆಂಟ್​ಗಳನ್ನು ನಿಯೋಜಿಸುತ್ತಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪೂರ್ವ ಲಡಾಖ್​ ವಲಯದ ಎದುರು ಭಾಗದಲ್ಲಿರುವ ಅಕ್ಸಾಯ್​ ಚೀನಾ ಏರಿಯಾದಲ್ಲಿ ಹೊಸದಾಗಿ ಹೆದ್ದಾರಿ, ರಸ್ತೆಗಳು ನಿರ್ಮಾಣವಾಗುತ್ತಿವೆ. ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ಅತಿ ಕಡಿಮೆ ಸಮಯದಲ್ಲಿ ತಲುಪುವಂತೆ ಈ ರಸ್ತೆಯನ್ನು ಚೀನಾ ನಿರ್ಮಾಣ ಮಾಡಿಕೊಂಡಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. 

ಟಿಬೆಟ್​ ಸ್ವಾಯತ್ತ ಪ್ರದೇಶದ ಹಿಂಭಾಗದ ಸ್ಥಳಗಳಲ್ಲಿ ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ರಾಕೆಟ್​ ಮತ್ತು ಕ್ಷಿಪಣಿ ರೆಜಿಮೆಂಟ್​​ಗಳನ್ನು ನಿಯೋಜಿಸಿದೆ. ಹಾಗೇ ಅಲ್ಲಿ ಅಡಗಿಕೊಳ್ಳಲು ಅನುಕೂಲವಾಗುವ ತಾಣಗಳ ನಿರ್ಮಾಣವನ್ನೂ ಮಾಡಿದೆ ಎಂದು ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. ಇಷ್ಟೆಲ್ಲದರ ಜತೆ, ಕಣ್ಗಾವಲು ಡ್ರೋನ್​ಗಳ ಸಂಖ್ಯೆಯನ್ನೂ ಚೀನಾ ಮಿಲಿಟರಿ ಹೆಚ್ಚಿಸಿದೆ.  ಚೀನಾ ತನ್ನ ಮುಖ್ಯ ಸೇನಾ ನೆಲೆಗಳಾದ ಕಶ್ಗರ್​, ಗರ್​ ಗುನ್ಸಾ ಮತ್ತು ಹೋಟಾನ್​​ಗಳನ್ನು ಹೊರತು ಪಡಿಸಿ ಇದೀಗ ಹೆದ್ದಾರಿಗಳ ವಿಸ್ತರಣೆ ಮಾಡುತ್ತಿದೆ. ಏರ್​ಸ್ಟ್ರಿಪ್​​ಗಳನ್ನು ನಿರ್ಮಿಸುತ್ತಿದೆ. ಹೀಗೆ ಮೂಲಸೌಕರ್ಯಗಳ ನವೀಕರಣ ಮಾಡುತ್ತಿರುವುದು ತುಂಬ ಮಹತ್ವದ ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.

ಇಷ್ಟೇ ಅಲ್ಲ ಚೀನಾ ಸೇನೆ ಗಡಿ ಪೋಸ್ಟ್​ಗಳಿಗೆ ಹೆಚ್ಚೆಚ್ಚು ಟಿಬೆಟಿಯನ್​​ರನ್ನು ನೇಮಕ ಮಾಡುವ ಕೆಲಸವನ್ನೂ ವೇಗಗೊಳಿಸಿದೆ ಎಂದೂ ಹೇಳಲಾಗಿದೆ. ಅಂದರೆ ಚೀನಾ ಸೇನೆಯಲ್ಲಿರುವ ಇತರ ಸೈನಿಕರಿಗೆ ಗಡಿ ಭಾಗದಲ್ಲಿ ವಾಸ ಕಷ್ಟ. ಇಲ್ಲಿನ ಚಳಿಗೆ ಅವರು ಹೊಂದಿಕೊಳ್ಳಲಾರರು.  ಹೀಗಾಗಿ ಅದೇ ಪ್ರದೇಶದ ಜನರನ್ನೇ ಸೇನೆಗೆ ತೆಗೆದುಕೊಂಡು, ಗಡಿ ಭಾಗದಲ್ಲಿ ಕಾಯಲು ಬಿಡುವುದು ಅದರ ಯೋಚನೆ ಎನ್ನಲಾಗಿದೆ. ಒಟ್ಟಿನಲ್ಲಿ ಚೀನಾ ನಡೆ ನಿಗೂಢವಾಗುತ್ತಿದೆ. ಇತ್ತ ಅರುಣಾಚಲ ಗಡಿ ಭಾಗದಲ್ಲೂ ಒಂದೇ ಸಮನೆ ಗ್ರಾಮಗಳ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ: ನೆಲಮಂಗಲದಲ್ಲಿ ವ್ಯಕ್ತಿಯ ಮೇಲೆ ಹರಿದ ಹಲವು ವಾಹನಗಳು! ತುಂಡು ತುಂಡಾದ ದೇಹ

Follow us on

Related Stories

Most Read Stories

Click on your DTH Provider to Add TV9 Kannada