ನೆಲಮಂಗಲದಲ್ಲಿ ವ್ಯಕ್ತಿಯ ಮೇಲೆ ಹರಿದ ಹಲವು ವಾಹನಗಳು! ತುಂಡು ತುಂಡಾದ ದೇಹ

ಅಪರಿಚಿತ ವ್ಯಕ್ತಿಯ ಮೇಲೆ ವಾಹನಗಳು ಹರಿದ ಪರಿಣಾಮ ರಸ್ತೆಯಲ್ಲಿ ಕಿಲೋಮೀಟರ್ ಉದ್ದಕ್ಕೆ ಮೃತ ದೇಹದ ತುಂಡುಗಳು ಚೆಲ್ಲಾಪಿಲ್ಲಿಯಾಗಿವೆ. ಗುರುತು ಪತ್ತೆಯಾಗದಂತೆ ವ್ಯಕ್ತಿಯ ಶವ ನುಜ್ಜುಗುಜ್ಜಾಗಿದೆ.

ನೆಲಮಂಗಲದಲ್ಲಿ ವ್ಯಕ್ತಿಯ ಮೇಲೆ ಹರಿದ ಹಲವು ವಾಹನಗಳು! ತುಂಡು ತುಂಡಾದ ದೇಹ
ತುಂಡಾದ ದೇಹದ ತುಂಡುಗಳನ್ನು ಆಂಬುಲೆನ್ಸ್ ಸಿಬ್ಬಂದಿ ಸಂಗ್ರಹಿಸುತ್ತಿದ್ದಾರೆ

ಬೆಂಗಳೂರು: ಅಪರಿಚಿತ ವ್ಯಕ್ತಿಯ ಮೇಲೆ ಹಲವು ವಾಹನಗಳು ಹರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ. ವಾಹನಗಳು ಹರಿದ ಹಿನ್ನೆಲೆ ವ್ಯಕ್ತಿ ದೇಹ ತುಂಡು ತುಂಡಾಗಿದೆ. ದೇಹದ ತುಂಡುಗಳು ರಸ್ತೆಗೆ ಅಂಟಿಕೊಂಡಿವೆ. ರಸ್ತೆಗೆ ಅಂಟಿಕೊಂಡ ಮಾಂಸದ ಚೂರುಗಳು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಅಪರಿಚಿತ ವ್ಯಕ್ತಿಯ ಮೇಲೆ ವಾಹನಗಳು ಹರಿದ ಪರಿಣಾಮ ರಸ್ತೆಯಲ್ಲಿ ಕಿಲೋಮೀಟರ್ ಉದ್ದಕ್ಕೆ ಮೃತ ದೇಹದ ತುಂಡುಗಳು ಚೆಲ್ಲಾಪಿಲ್ಲಿಯಾಗಿವೆ. ಗುರುತು ಪತ್ತೆಯಾಗದಂತೆ ವ್ಯಕ್ತಿಯ ಶವ ನುಜ್ಜುಗುಜ್ಜಾಗಿದೆ. ಕಬ್ಬಿಣದ ಸಲಾಕೆಗಳನ್ನ ಬಳಸಿ ಆಂಬುಲೆನ್ಸ್ ಸಿಬ್ಬಂದಿ ಮೃತ ದೇಹದ ತುಂಡುಗಳನ್ನು ಸಂಗ್ರಹಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸವಾರರಿಬ್ಬರ ಸಾವು 2 ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಮಂಗೇನಹಳ್ಳಿ ಬಳಿ ಈ ಘಟನೆ ನಡೆದಿದೆ. ಕಾರ್ತಿಕ್(21), ಅಭಿಷೇಕ್(20) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ತಿಕ್ ಚನ್ನಗಿರಿ ತಣಿಗೆರೆ ಗ್ರಾಮದ ನಿವಾಸಿ. ಅಭಿಷೇಕ್ ಮೆದಿಕರೆ ಗ್ರಾಮದ ನಿವಾಸಿ ಅಂತ ತಿಳಿದುಬಂದಿದೆ. ಕಾರ್ತಿಕ್ ತಣಿಗೆರೆಯಿಂದ ಸಂತೆಬೆನ್ನೂರಿಗೆ ಹೋಗುತ್ತಿದ್ದಾಗ ಮತ್ತು ಅಭಿಷೇಕ್ ಸಂತೆಬೆನ್ನೂರು ಕಡೆಯಿಂದ ದಾವಣಗೆರೆ ಕಡೆ ಬರುತ್ತಿರುವಾಗ ಈ ದುರಂತ ನಡೆದಿದೆ.

ಇದನ್ನೂ ಓದಿ

ಮಾನವಸಹಿತ ಗಗನಯಾನ ಕಾರ್ಯಕ್ರಮ ಸ್ಥಳಾಂತರ ಮಾಡದಂತೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿಗೆ ಮನವಿ ಪತ್ರ ಬರೆದ ಡಿಕೆ ಶಿವಕುಮಾರ್

‘ಸರಿಗಮಪ ನನ್ನ ಪ್ರೀತಿಯ ಭೂಮಿಕೆ, ಬೇಗ ಬಂದು ಸೇರಿಕೊಳ್ಳುತ್ತೇನೆ’; ಹಂಸಲೇಖ ಪತ್ರ

Click on your DTH Provider to Add TV9 Kannada