ರೈಲಿಗೆ ಸಿಲುಕಿ ಸಾಗರ ಕೋರ್ಟ್​ ಬೆಂಚ್ ಕ್ಲರ್ಕ್ ಆತ್ಮಹತ್ಯೆ, ಮತ್ತೊಂದೆಡೆ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

ಸಾಗರ ಜೆಎಂಎಫ್ಸಿ ಕೋರ್ಟ್ನಲ್ಲಿ ಎಫ್ಡಿಸಿ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲಿಗೆ ಸಿಲುಕಿ ದೇಹ ಚಿದ್ರ ಚಿದ್ರವಾಗಿದೆ. ರುಂಡ ಮುಂಡ ಬೇರ್ಪಟ್ಟಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ರೈಲಿಗೆ ಸಿಲುಕಿ ಸಾಗರ ಕೋರ್ಟ್​ ಬೆಂಚ್ ಕ್ಲರ್ಕ್ ಆತ್ಮಹತ್ಯೆ, ಮತ್ತೊಂದೆಡೆ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ
ರೈಲಿಗೆ ಸಿಲುಕಿ ಸಾಗರ ಕೋರ್ಟ್ನ ಬೆಂಚ್ ಕ್ಲರ್ಕ್ ಆತ್ಮಹತ್ಯೆ
Follow us
TV9 Web
| Updated By: ಆಯೇಷಾ ಬಾನು

Updated on:Nov 28, 2021 | 11:16 AM

ಶಿವಮೊಗ್ಗ: ತಾಳಗುಪ್ಪ-ಬೆಂಗಳೂರು ರೈಲಿಗೆ ಸಿಲುಕಿ ಸಾಗರ ಕೋರ್ಟ್ನ ಬೆಂಚ್ ಕ್ಲರ್ಕ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಗರ ತಾಲೂಕಿನ ಕುಗ್ವೆ-ಶಿರವಾಳ ರೈಲ್ವೆ ಗೇಟ್ ಬಳಿ ನಡೆದಿದೆ. ಸಾಗರದ ಲೋಹಿಯಾ ನಗರದ ನಿವಾಸಿ ನಾಗರಾಜ್(31) ಮೃತ ವ್ಯಕ್ತಿ.

ಸಾಗರ ಜೆಎಂಎಫ್ಸಿ ಕೋರ್ಟ್ನಲ್ಲಿ ಎಫ್ಡಿಸಿ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲಿಗೆ ಸಿಲುಕಿ ದೇಹ ಚಿದ್ರ ಚಿದ್ರವಾಗಿದೆ. ರುಂಡ ಮುಂಡ ಬೇರ್ಪಟ್ಟಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮರಕ್ಕೆ ನೇಣು ಬಿಗಿದುಕೊಂಡು ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮೈಸೂರಿನ ವಿದ್ಯಾರಣ್ಯಪುರಂನ ಶಾಲೆಯ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ವಿದ್ಯಾರಣ್ಯಪುರಂ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆಎಸ್ಆರ್​ಟಿಸಿ ಬಸ್ ಹರಿದು ದ್ವಿಚಕ್ರ ವಾಹನ ಸವಾರ ಸಾವು ಬೆಂಗಳೂರಿನ ಕೊಡಿಗೆಹಳ್ಳಿ ಸರ್ಕಲ್ ಬಳಿ ಕೆಎಸ್ಆರ್​ಟಿಸಿ ಬಸ್ ಹರಿದು ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನಡೆದಿದೆ. ಕಾವೇರಿ ಭವನದಿಂದ ದೊಡ್ಡಬಳ್ಳಾಪುರಕ್ಕೆ ಹೋಗ್ತಿದ್ದ ಕೆಎ 40-ಎಫ್-0994 ನಂಬರ್​ನ ಬಸ್ ದ್ವಿಚಕ್ರ ವಾಹನ ಸವಾರನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸವಾರ ಮೃತಪಟ್ಟಿದ್ದಾನೆ. ಆಕ್ಸಿಡೆಂಟ್ ಆಗ್ತಿದ್ದಂತೆ ಕೆಎಸ್ಆರ್​ಟಿಸಿ ಡ್ರೈವರ್ ಮತ್ತು ಕಂಡಕ್ಟರ್ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

ಖಾಸಗಿ ಬಸ್​ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಸಾವು ಇನ್ನು ಮತ್ತೊಂದೆಡೆ ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ಬಳಿ‌ ಖಾಸಗಿ ಬಸ್​ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಅಪಘಾತದಲ್ಲಿ ಐವರಿಗೆ ಗಾಯಗಳಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಹುಬ್ಬಳ್ಳಿ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ವಿಜಯನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಯೋಗೇಶ್‌ನನ್ನು ಪೊಲೀಸರು ಬಂಧಿಸಿ 71 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಬಂಧನದಿಂದ 4 ಪ್ರಕರಣಗಳು ಬೆಳಕಿಗೆ ಬಂದಿವೆ.

ಮೈಸೂರಿನಲ್ಲಿ ಐವರು ದರೋಡೆಕೋರರ ಬಂಧನ ಇನ್ನು ಇದೇ ರೀತಿ ಮೈಸೂರಿನಲ್ಲಿ ಐವರು ದರೋಡೆಕೋರರ ಬಂಧನವಾಗಿದೆ. ಮೈಸೂರಿನ ಉದಯಗಿರಿ ಪೊಲೀಸರು ಸಲೀಂ ಪಾಷಾ, ಫಾಜಿಲ್ ಖಾನ್, ಸೈಯದ್, ಸೈಫ್, ಸೈಯದ್ ನಯಾಜ್ನನ್ನು ಬಂಧಿಸಿದ್ದಾರೆ. ಬಂಧಿತರಿಂದ 45,300 ನಗದು, 2 ಬೈಕ್, 1 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಸಾರ್ವಜನಿಕರನ್ನು ಹೆದರಿಸಿ ಹಣ ದೋಚುತ್ತಿದ್ದರು. ಹಲವು ಕಡೆ ದರೋಡೆ ಮಾಡಿದ್ದರು. ಅಲ್ಲದೆ ಪಿಗ್ಮಿ ಫೈನಾನ್ಸ್ ಹಣ ಸಂಗ್ರಹಣೆ ಹಣವನ್ನ ದೋಚಿದ್ದರು.

ಇದನ್ನೂ ಓದಿ: ಇದುವರೆಗೆ ಬಾಡಿಗೆಗೆ ಸಿಗುತ್ತಿದ್ದ ಬೌನ್ಸ್ ಸ್ಕೂಟರ್ ಹೊಸ ರೂಪದಲ್ಲಿ ಖರೀದಿಗೆ ಸಿಗಲಿದೆ, ಡಿಸೆಂಬರ್ 2 ರಿಂದ ಮುಂಗಡ ಬುಕಿಂಗ್ ಶುರು

Published On - 9:43 am, Sun, 28 November 21