Hacking Alert: ಈ ಏಳು ಆ್ಯಪ್​ಗಳನ್ನು ತಕ್ಷಣವೇ ಡಿಲೀಟ್ ಮಾಡಲು ಸೂಚಿಸಿದ ಮೊಬೈಲ್ ಭದ್ರತಾ ಸಂಸ್ಥೆ

| Updated By: Digi Tech Desk

Updated on: Dec 21, 2021 | 12:44 PM

Joker malwar: ಗೂಗಲ್ ಪ್ಲೇ ಸ್ಟೋರ್‌ನ (Google Play store) ಹೊಸ ಅಪ್ಲಿಕೇಶನ್‌ಗಳಲ್ಲಿ ಮತ್ತೆ ಜೋಕರ್ (Joker malwar) ಎಂಬ ವೈರಸ್ ಕಾಣಿಸಿಕೊಂಡಿದೆ. ಜೋಕರ್ ಮಾಲ್ವೇರ್ ಈಗಾಗಲೇ 15 ಜನಪ್ರಿಯ ಅಪ್ಲಿಕೇಶನ್‌ಗಳ ಒಳಹೊಕ್ಕಿದೆ ಎಂದು ತಿಳಿಸಿದೆ.

Hacking Alert: ಈ ಏಳು ಆ್ಯಪ್​ಗಳನ್ನು ತಕ್ಷಣವೇ ಡಿಲೀಟ್ ಮಾಡಲು ಸೂಚಿಸಿದ ಮೊಬೈಲ್ ಭದ್ರತಾ ಸಂಸ್ಥೆ
Joker malware
Follow us on

ಮೊಬೈಲ್ ಸೆಕ್ಯುರಿಟಿ ಸೊಲ್ಯೂಷನ್ಸ್ ಸಂಸ್ಥೆಯಾದ ಪ್ರಡಿಯೊ ಸ್ಮಾರ್ಟ್​ಫೋನ್ (Smartphone) ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದ್ದು ಈ ಏಳು ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡಲು ಸೂಚಿಸಿದೆ. ಗೂಗಲ್ ಪ್ಲೇ ಸ್ಟೋರ್‌ನ (Google Play store) ಹೊಸ ಅಪ್ಲಿಕೇಶನ್‌ಗಳಲ್ಲಿ ಮತ್ತೆ ಜೋಕರ್ (Joker malwar) ಎಂಬ ವೈರಸ್ ಕಾಣಿಸಿಕೊಂಡಿದೆ. ಜೋಕರ್ ಮಾಲ್ವೇರ್ ಈಗಾಗಲೇ 15 ಜನಪ್ರಿಯ ಅಪ್ಲಿಕೇಶನ್‌ಗಳ ಒಳಹೊಕ್ಕಿದೆ ಎಂದು ತಿಳಿಸಿದೆ. ಈ ಮಾಲ್‌ವೇರ್ ದಾಳಿಗಳಲ್ಲಿ ಅತ್ಯಂತ ಸಾಮಾನ್ಯವಾದವು ನಕಲಿ ಚಂದಾದಾರಿಕೆಗಳು ಮತ್ತು ಅಪ್ಲಿಕೇಶನ್‌ನಲ್ಲಿನ ಖರೀದಿಗಳ ಮೂಲಕ ಅಕ್ರಮ ಹಣವನ್ನು ಗಳಿಸುವ ಗುರಿಯನ್ನು ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಆನ್‌ಲೈನ್‌ಗೆ ಸ್ಥಳಾಂತರಗೊಳ್ಳುತ್ತಿರುವುದರಿಂದ ಸೈಬರ್ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಇನ್ನುಮುಂದೆ ಬಳಕೆದಾರರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅನುಮಾನಾಸ್ಪದವಾಗಿ ತೋರುವ ಯಾವುದೇ ಲಿಂಕ್‌ಗಳು ಅಥವಾ ಅನುಚಿತ ಖರೀದಿಗಳಿಗೆ ಬಲಿಯಾಗಬಾರದು ಎಂದು ತಜ್ಞರು ತಿಳಿಸಿದ್ದಾರೆ.

ನೀವು ಈ ಏಳು ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡಿ

  1. Color Message
  2. Safety AppLock
  3. Convenient Scanner 2
  4. Push Message-Texting&SMS
  5. Emoji Wallpaper
  6. Separate Doc Scanner
  7. Fingertip GameBox

ಕಳೆದ ಎರು ತಿಂಗಳಲ್ಲಿ ಜೋಕರ್‌  ಹೆಸರಿನ ಅಪಾಯಕಾರಿ ಮಾಲ್‌ವೇರ್‌ ಎರಡನೇ ಬಾರಿ ಗೂಗಲ್‌ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿರುವುದು. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್​ಗಳನ್ನು ನಿರಂತರವಾಗಿ ಗುರಿಯಾಗಿಸುವ ಮಾಲ್‌ವೇರ್‌ಗಳಲ್ಲಿ ಜೋಕರ್ ಕೂಡಾ ಒಂದು. ಕ್ವಿಕ್ ಹೀಲ್ ಸೆಕ್ಯುರಿಟಿ ಲ್ಯಾಬ್‌ಗಳ ಸಂಶೋಧಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಮಾಲ್‌ವೇರ್ ಅಪ್ಲಿಕೇಶನ್‌ಗಳನ್ನು ಪತ್ತೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಆ್ಯಪ್‌ಗಳಲ್ಲಿರುವ ಟ್ರೋಜನ್ ಜೋಕರ್ ಮಾಲ್‌ವೇರ್ ಅನ್ನು ಗಮನದಲ್ಲಿಟ್ಟುಕೊಂಡು, ಗೂಗಲ್ ಈ 14 ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ‌ ತೆಗೆದುಹಾಕಿತ್ತು.

ಅನೇಕ ಸ್ಕ್ವಿಡ್ ಆಟದ ಬಳಕೆದಾರರು ಮಾಲ್‌ವೇರ್‌ನೊಂದಿಗೆ ಸೈಬರ್ ಅಪರಾಧಿಗಳಿಂದ ಇದೇ ರೀತಿಯ ದಾಳಿಯನ್ನು ಎದುರಿಸುತ್ತಿದ್ದಾರೆ. ಈ ವಿಷಯ ಬೆಳಕಿಗೆ ಬಂದ ನಂತರ ಪ್ಲೇ ಸ್ಟೋರ್ ಅನ್ನು ಹೊಂದಿರುವ ಗೂಗಲ್ ಆ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿತ್ತಿದೆ.

ಹೆಚ್ಚಿನ ವೈರಸ್ ಆ್ಯಪ್​ಗಳು ರಹಸ್ಯವಾಗಿ ಜಾಹೀರಾತು ವೆಬ್‌ಸೈಟ್‌ಗಳೊಂದಿಗೆ ಸಂವಹನದ ಆರಂಭಕ್ಕೆ ಪ್ರಚೋದನೆ ನೀಡುತ್ತದೆ. ಬಾಧೆಗೀಡಾದ ಫೋನ್‌ನ ಎಸ್​ಎಮ್​ಎಸ್​ ಸಂದೇಶಗಳನ್ನು ಕದಿಯುತ್ತದೆ, ಸಂಪರ್ಕ ಸಂಖ್ಯೆಯ ಪಟ್ಟಿ ಮತ್ತು ಸಾಧನದ ಮಾಹಿತಿಯನ್ನೂ ಪಡೆದುಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇತ್ತೀಚೆಗೆ ನಿರ್ಬಂಧಿಸಲಾದ ಕೆಲವು ಅಪ್ಲಿಕೇಶನ್‌ಗಳಲ್ಲಿ ಎಮೋಜಿಒನ್ ಕೀಬೋರ್ಡ್ ಮತ್ತು ನೌ ಕ್ಯೂಆರ್‌ಕೋಡ್ ಸ್ಕ್ಯಾನ್ ಗಳನ್ನು ಕ್ರಮವಾಗಿ 50,000 ಮತ್ತು 10,000 ಕ್ಕಿಂತ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಈ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿ ಇನ್​ಸ್ಟಾಲ್ ಆಗಿದ್ದರೆ ತಕ್ಷಣವೇ ಅವುಗಳನ್ನು ಅನ್‌ಇನ್​ಸ್ಟಾಲ್ ಮಾಡಿ.

WhatsApp: ವಾಟ್ಸ್ಆ್ಯಪ್​ನಲ್ಲಿ ಹಳೆಯ ಮೆಸೇಜ್ ಡಿಲೀಟ್ ಆಗದಂತೆ ನಂಬರ್ ಬದಲಾಯಿಸುವುದು ಹೇಗೆ?

Published On - 11:55 am, Tue, 21 December 21