WhatsApp Year-in-Review 2021: ಈ ವರ್ಷ ವಾಟ್ಸ್​ಆ್ಯಪ್​ ಪರಿಚಯಿಸಿದ ಫೀಚರ್ಸ್ ಯಾವುವು?: ಮುಂದಿನ ವರ್ಷದ ಟಾರ್ಗೆಟ್ ಏನು?

| Updated By: Vinay Bhat

Updated on: Dec 21, 2021 | 2:03 PM

Year Ender 2021: ವಾಟ್ಸ್​ಆ್ಯಪ್ ಈ ವರ್ಷ ಆಕರ್ಷಕ ಫೀಚರ್ಸ್ ಅನ್ನು ಅಪ್‌ಡೇಟ್ ಮೂಲಕ ಬಳಕೆದಾರರಿಗೆ ಪರಿಚಯಿಸಿ ಮತ್ತಷ್ಟು ಹತ್ತಿರವಾಗಿದೆ. ಹಾಗಾದ್ರೆ ವಾಟ್ಸ್​ಆ್ಯಪ್ 2021ನೇ ವರ್ಷದಲ್ಲಿ ಬಿಡುಗಡೆ ಮಾಡಿದ ಕೆಲವು ಬೆಸ್ಟ್ ಫೀಚರ್ಸ್‌ ಯಾವುದು ಎಂಬುದನ್ನು ನೋಡೋಣ.

WhatsApp Year-in-Review 2021: ಈ ವರ್ಷ ವಾಟ್ಸ್​ಆ್ಯಪ್​ ಪರಿಚಯಿಸಿದ ಫೀಚರ್ಸ್ ಯಾವುವು?: ಮುಂದಿನ ವರ್ಷದ ಟಾರ್ಗೆಟ್ ಏನು?
Whatsapp 2021
Follow us on

ವಾಟ್ಸ್​ಆ್ಯಪ್ (WhatsApp)​​​ ಎನ್ನುವುದು ಇಂದು ಅತ್ಯಂತ ಜನಪ್ರಿಯ ಮಾಧ್ಯಮವಾಗಿ ಮಾರ್ಪಟ್ಟಿದೆ. ಸ್ಮಾರ್ಟ್‌ಫೋನ್ (Smartphone) ಇದ್ದರೆ ವಾಟ್ಸ್​ಆ್ಯಪ್ ಇದ್ದಂತೆಯೇ ಎನ್ನುವಷ್ಟು ಮಟ್ಟಿಗೆ ಇದು ಜನಪ್ರಿಯತೆ ಗಳಿಸಿದೆ. ಕೇವಲ ಭಾರತದಲ್ಲೇ ಸುಮಾರು 487 ಮಿಲಿಯನ್ ವಾಟ್ಸ್​ಆ್ಯಪ್ ಬಳಕೆದಾರರಿದ್ದಾರೆ. ಪ್ರತಿ ವರ್ಷವೂ ವಾಟ್ಸ್​ಆ್ಯಪ್ ಹೊಸ ಹೊಸ ಫೀಚರ್‌ಗಳನ್ನು (WhatsApp Features) ದೇಶದಲ್ಲಿ ಬಳಕೆದಾರರಿಗೆ ನೀಡುತ್ತಿದೆ. ಅದರಂತೆ ಈ ವರ್ಷವೂ ಬಹೂಪಯೋಗಿ ಮತ್ತು ಆಕರ್ಷಕ ಫೀಚರ್ಸ್ ಅನ್ನು ಅಪ್‌ಡೇಟ್ ಮೂಲಕ ಬಳಕೆದಾರರಿಗೆ ಪರಿಚಯಿಸಿ ಮತ್ತಷ್ಟು ಹತ್ತಿರವಾಗಿದೆ. ಹಾಗಾದ್ರೆ ವಾಟ್ಸ್​ಆ್ಯಪ್ ಈ 2021ನೇ (WhatsApp 2021) ವರ್ಷದಲ್ಲಿ ಬಿಡುಗಡೆ ಮಾಡಿದ ಕೆಲವು ಬೆಸ್ಟ್ ಫೀಚರ್ಸ್‌ ಯಾವುದು ಎಂಬುದನ್ನು ನೋಡೋಣ.

ವಾಟ್ಸ್​ಆ್ಯಪ್​​​ ಪೇ:

ಆನ್​ಲೈನ್ ಪೇಮೆಂಟ್ ಆ್ಯಪ್​ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಇದನ್ನೇ ಗಮನದಲ್ಲಿಟ್ಟುಕೊಂಡು ವಾಟ್ಸ್​ಆ್ಯಪ್​ ಈ ವರ್ಷ ವಾಟ್ಸ್​ಆ್ಯಪ್​​​ ಪೇ ಫೀಚರ್ ಅನ್ನು ಪರಿಚಯಿಸಿತು. ಯುಪಿಐ ಪಾವತಿ ವ್ಯವಸ್ತೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಂತೆ ವಾಟ್ಸ್​ಆ್ಯಪ್​​​ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪೇಮೆಂಟ್‌ ವ್ಯವಸ್ಥೆಯನ್ನು ಪರಿಚಯಿಸಿತು. ಈ ಸೇವೆಯು ಎಚ್‌ಡಿಎಫ್‌ಸಿ, ಐಸಿಐಸಿಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್ ಮತ್ತು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನಂತಹ ಎಲ್ಲಾ ಪ್ರಮುಖ ಬ್ಯಾಂಕುಗಳನ್ನು ಬೆಂಬಲಿಸುತ್ತದೆ.

ವ್ಯೂ ಒನ್ಸ್‌ ಮೀಡಿಯಾ:

ವಾಟ್ಸ್​ಆ್ಯಪ್​​​ ಇತ್ತಿಚಿಗೆ ಸೇರಿರುವ ಹೊಸ ಫೀಚರ್ಸ್‌ಗಳಲ್ಲಿ ವ್ಯೂ ಒನ್ಸ್ ಮೀಡಿಯಾ ಫೀಚರ್ಸ್‌ ಕೂಡ ಸೇರಿದೆ. ಇದರಿಂದಾಗಿ ನೀವು ಸ್ವಿಕರಿಸುವ ವಾಟ್ಸಸಾಪ್‌ ಸಂದೇಶದ ಫೋಟೋಗಳು ಚಾಟ್‌ನಿಂದ ಹೊರಬಂದ ನಂತರ ಕಣ್ಮರೆಯಾಗುತ್ತದೆ. ಅಂದರೆ ವ್ಯೂ ಒನ್ಸ್‌ ಮೀಡಿಯಾ ಫೀಚರ್ಸ್‌ ಅನ್ನು ನೀವು ಬಳಸಿದರೆ ನೀವು ಕಳುಹಿಸುವ ಯಾವುದೇ ಫೋಟೋ ಅಥವಾ ವೀಡಿಯೊವನ್ನು ಸ್ವೀಕರಿಸುವವರ ಫೋಟೋಗಳು ಅಥವಾ ಗ್ಯಾಲರಿಯಲ್ಲಿ ಉಳಿಸಲಾಗುವುದಿಲ್ಲ.

ವಾಟ್ಸ್​ಆ್ಯಪ್​​​ ಡಾರ್ಕ್ ಮೋಡ್:

ಈ ವರ್ಷ ವಾಟ್ಸ್​ಆ್ಯಪ್​​​ ಸೇರಿದ ಜನಪ್ರಿಯ ಫೀಚರ್ಸ್‌ಗಳಲ್ಲಿ ಡಾರ್ಕ್ ಮೋಡ್ ಫೀಚರ್ಸ್‌ ಕೂಡ ಒಂದು. ಡಾರ್ಕ್‌ ಮೋಡ್‌ ಫೀಚರ್ಸ್‌ ಎಲ್ಲಾ ವರ್ಗಗಳ ಡಿಸ್‌ಪ್ಲೇ ಗಾಢ ಬೂದು ಬಣ್ಣಕ್ಕೆ ಬದಲಾಯಿಸುತ್ತದೆ. ಇನ್ನು ಈ ಫೀಚರ್ಸ್‌ ಬಳಕೆದಾರರ ಕಣ್ಣುಗಳ ಮೇಲೆ ರೆಡಿಯೇಷನ್‌ ಬೀಳದಂತೆ ಮಾಡಲಿದೆ.

ಕಸ್ಟಮೈಸ್ ಸ್ಟಿಕ್ಕರ್‌:

ಸ್ಟಿಕ್ಕರ್ ಮೇಕರ್ ಟೂಲ್‌ ಬಳಸಿಕೊಂಡು ನಿಮ್ಮ ಸ್ವಂತ ಕಸ್ಟಮ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡುವ ಆಯ್ಕೆ ವಾಟ್ಸ್​ಆ್ಯಪ್​​​ ಈ ವರ್ಷ ಪರಿಚಯಿಸಿತ್ತು. ಈ ಫೀಚರ್ಸ್‌ ಅನ್ನು ನೀವು ಸುಲಭವಾಗಿ ಪ್ರವೇಶಿಸಬಹುದಾಗಿದ್ದು, ವಾಟ್ಸ್​ಆ್ಯಪ್​​​ನ ಸ್ಟಿಕ್ಕರ್ ವಿಭಾಗದಲ್ಲಿ ಇದನ್ನು ಕಾಣಬಹುದಾಗಿದೆ.

ವಾಯ್ಸ್ ಮೆಸೇಜ್ ಪ್ರಿವ್ಯೂ:

ಈ ವರ್ಷದ ಜನಪ್ರಿಯ ಫೀಚರ್ಸ್‌ನಲ್ಲಿ ವಾಟ್ಸ್​ಆ್ಯಪ್​​​ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಕೂಡ ಸೇರಿದೆ. ಇದು ವಾಟ್ಸ್​ಆ್ಯಪ್​​​ ವಾಯ್ಸ್‌ ಮೆಸೇಜ್‌ನಲ್ಲಿ ಹೊಸ ಬದಲಾವಣೆಗೆ ನಾಂದಿಯಾಗಲಿದೆ. ಇದರಿಂದ ನಿಮ್ಮ ವಾಯ್ಸ್‌ ಮೆಸೇಜ್‌ ಅನುಭವ ಇನ್ನಷ್ಟು ಸುಧಾರಿಸಲಿದೆ ಎನ್ನಲಾಗಿದೆ.

ಮಲ್ಟಿ ಡಿವೈಸ್‌ ಫೀಚರ್ಸ್‌:

ವಾಟ್ಸ್​ಆ್ಯಪ್​​​ ಈ ವರ್ಷ ಪರಿಚಯಿಸಿರುವ ಹಲವು ಫೀಚರ್ಸ್‌ಗಳಲ್ಲಿ ಮಲ್ಟಿ ಡಿವೈಸ್‌ ಫೀಚರ್ಸ್‌ ಹೆಚ್ಚು ಉಪಯುಕ್ತ ಎಂದೇ ಹೇಳಬಹುದು. ಈ ಫೀಚರ್ಸ್‌ ಸೆಟ್ಟಿಂಗ್ಸ್‌ > ಲಿಂಕ್ಡ್ ವಿಭಾಗದಲ್ಲಿ ಗೋಚರಿಸುತ್ತದೆ. ಈ ಫೀಚರ್ಸ್‌ ಬಳಸಿಕೊಂಡು ವಾಟ್ಸ್​ಆ್ಯಪ್​​​ ಬಳಕೆದಾರರು ಫೋನ್‌ ಕನೆಕ್ಟ್‌ ಮಾಡದೆ ಹೋದರೂ, ಲಿಂಕ್ ಮಾಡಲಾದ ಕಂಪ್ಯಾನಿಯನ್ ಡಿವೈಸ್‌ಗಳನ್ನು ಬಳಸಲು ಸಾಧ್ಯವಾಗಲಿದೆ.

ವಾಟ್ಸ್​ಆ್ಯಪ್​​​ ಚಾಟ್‌ಬಾಟ್‌:

ವಾಟ್ಸ್​ಆ್ಯಪ್​​​ ಪರಿಚಯಿಸಿರುವ ಹೊಸ ಫೀಚರ್ಸ್‌ಗಳಲ್ಲಿ ಚಾಟ್‌ ಬಾಟ್‌ ಕೂಡ ಸೇರಿದೆ. ಕೋವಿಡ್‌-19 ಗೆ ಸಂಬಂಧಿಸಿದ ನಕಲಿ ಮಾಹಿತಿಯನ್ನು ತಡೆಗಟ್ಟಲು ಇಂಟರ್ನ್ಯಾಷನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್ (IFCN) ಮಾರ್ಚ್‌ನಲ್ಲಿ ವಾಟ್ಸ್​ಆ್ಯಪ್​​​ ಚಾಟ್‌ಬಾಟ್ ಅನ್ನು ಪ್ರಾರಂಭಿಸಿತು.

2020ಕ್ಕೆ ಮತಷ್ಟು ಅಪ್ಡೇಟ್:

ವಾಟ್ಸ್​ಆ್ಯಪ್​​ನಲ್ಲಿ ಮುಂದಿನ ವರ್ಷ ಅಂದರೆ 2022 ರಲ್ಲಿ ಸಾಲು ಸಾಲು ಹೊಸ ಅಪ್ಡೇಟ್​ಗಳು ಬರಲು ತಯಾರಾಗಿದೆ. ಕೆಲವು ಫೀಚರ್ಸ್‌ ವಾಟ್ಸ್​ಆ್ಯಪ್​​ ಬೀಟಾ ಪ್ರೋಗ್ರಾಂ ನಲ್ಲಿ ದಾಖಲಾಗಿರುವ ಬಳಕೆದಾರರಿಗೆ ಲಭ್ಯವಿದ್ದರೆ, ಇನ್ನು ಕೆಲವು ಪ್ರಗತಿಯಲ್ಲಿದೆ. ಈ ಪೈಕಿ ಸಂದೇಶ ಪ್ರತಿಕ್ರಿಯೆಗಳು, ಸಮುದಾಯಗಳು ಆಯ್ಕೆಗಳು ಸೇರಿದಂತೆ ಇನ್ನು ಕೆಲವು ಅನುಕೂಲಕರ ಆಯ್ಕೆಗಳನ್ನು ಪರಿಚಯಿಸಲು ವಾಟ್ಸ್​ಆ್ಯಪ್ ಸಿದ್ಧತೆ ನಡೆಸಿದೆ. ಫೇಸ್​ಬುಕ್​ನಲ್ಲಿರುವಂತೆಯೆ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ ಅನ್ನು ಪರಿಚಯಿಸಲಿದೆ. ಇನ್ನು ಆಯ್ದ ಬಳಕೆದಾರರಿಗೆ ಲಾಸ್ಟ್‌ ಸೀನ್ ಅನ್ನು ಮರೆಮಾಡುವ ಆಯ್ಕೆ ಇರಲಿದೆ ಎನ್ನಲಾಗಿದೆ. ಜೊತೆಗೆ  ಆಡಿಯೋ ಮೆಸೆಜ್‌ಗಳ ಪ್ಲೇಬ್ಯಾಕ್ ನಿಯಂತ್ರಣ ಮಾಡಬಹುದು ಆಯ್ಕೆ ಕೂಡ ಬರಲಿದೆ.

SmartPhones Under 25,000: ಈ ವರ್ಷ 25,000 ರೂ. ಒಳಗೆ ರಿಲೀಸ್ ಆದ ಬೆಸ್ಟ್ ಸ್ಮಾರ್ಟ್​ಫೋನ್ ಯಾವುವು?: ಇಲ್ಲಿದೆ ನೋಡಿ

Hacking Alert: ಈ ಏಳು ಆ್ಯಪ್​ಗಳನ್ನು ತಕ್ಷಣವೇ ಡಿಲೀಟ್ ಮಾಡಲು ಸೂಚಿಸಿದ ಮೊಬೈಲ್ ಭದ್ರತಾ ಸಂಸ್ಥೆ

(WhatsApp has released its year-end review of 2021 Here is the Features WhatsApp introduced 2021 year)