ಪ್ರತಿಬಾರಿ ಅಗ್ಗದ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡಿದರೂ ಗ್ರಾಹಕರಿಂದ ಮನ್ನಣೆ ಸಿಗದಿರುವ ಲಾವಾ (LAVA) ಕಂಪನಿ ಈಗ ಒಂದು ಹೆಜ್ಜೆ ಮುಂದೆ ಹೋಗಿದೆ. ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ 5ಜಿ ಸ್ಮಾರ್ಟ್‌ಫೋನ್ (G Smartphone) ಅನ್ನು ಭಾರತದಲ್ಲಿ ಅನಾವರಣ ಮಾಡಿದೆ. ಅದುವೇ ‘ಲಾವಾ ಅಗ್ನಿ 5ಜಿ’ (Lava Agni 5G). ಈ ಸ್ಮಾರ್ಟ್‌ಫೋನ್ ಸದ್ಯದ ಮಾರುಕಟ್ಟೆಯಲ್ಲಿರುವ ಉತ್ತಮ ಕ್ಯಾಮೆರಾ, ಬಿಗ್ ಬ್ಯಾಟರಿ, ವೇಗದ ಪ್ರೊಸೆಸರ್‌ನಂತಹ ಫೀಚರ್ಸ್ ಅನ್ನು ಒಳಗೊಂಡಿದ್ದು, ಬಜೆಟ್ ಪ್ರಿಯರಿಗೆ (Budget Smartphone) ಬಿಗ್ ಶಾಕ್ ನೀಡಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ನೋಡೋಣ.
ಲಾವಾ ಅಗ್ನಿ 5G ಸ್ಮಾರ್ಟ್‌ಫೋನ್ ಇಂದು ಅಧಿಕೃತವಾಗಿ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಇದು ಅಧಿಕ ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.78 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಅತ್ಯಂತ ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ವಿಶೇಷವಾಗಿ ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಅವುಗಳಲ್ಲಿ ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾ 5 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದೆ. ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, ನಾಲ್ಕನೇ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಅದೇ ರೀತಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಕ್ಯಾಮೆರಾ ಸೆನ್ಸಾರ್ ನೀಡಲಾಗಿದೆ.
ಬ್ಯಾಟರಿ ಕೂಡ ಬೊಂಬಾಟ್ ಆಗಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು ಇದಕ್ಕೆ ಪೂರಕವಾಗಿ 30W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಇದು 90 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿದೆ.
ಲಾವಾ ಅಗ್ನಿ 5G ಸ್ಮಾರ್ಟ್‌ಫೋನ್ ಸದ್ಯಕ್ಕೆ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ಖರೀದಿಗೆ ಸಿಗುತ್ತಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ದರವು ಕೇವಲ 19,999 ರೂ. ಆಗಿದೆ. ಈ ಫೋನ್ ಇದೇ ನವೆಂಬರ್ 18 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ರೀಟೇಲ್ ಸ್ಟೋರ್‌ಗಳ ಮೂಲಕ ದೇಶದಲ್ಲಿ ಮಾರಾಟವಾಗಲಿದೆ.
Poco M4 Pro 5G: ರೋಚಕತೆ ಸೃಷ್ಟಿಸಿರುವ ಬಹುನಿರೀಕ್ಷಿತ ಪೋಕೋ M4 ಪ್ರೊ 5G ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ
(Lava Agni 5G Lava has launched its first 5G-enabled smartphone in India its a budget smartphone)