Poco M4 Pro 5G: ರೋಚಕತೆ ಸೃಷ್ಟಿಸಿರುವ ಬಹುನಿರೀಕ್ಷಿತ ಪೋಕೋ M4 ಪ್ರೊ 5G ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ
Poco M4 Pro 5G global launch today: ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್ ಬಗೆಗಿನ ವಿಶೇಷತೆ ಬಗ್ಗೆ ಕಂಪನಿ ಯಾವುದೇ ಖಚಿತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಇದು ರೆಡ್ಮಿ ನೋಟ್ 115G ಸ್ಮಾರ್ಟ್ಫೋನಿನ ಹೊಸ ಅವತಾರ ಎಂದು ಹೇಳಲಾಗಿದೆ.
ಪೋಕೋ (POCO) ಕಂಪನಿಯ ಬಹುನಿರೀಕ್ಷಿತ ಹೊಸ ಪೋಕೋ ಎಮ್4 ಪ್ರೊ 5ಜಿ (POCO M4 Pro 5G) ಸ್ಮಾರ್ಟ್‌ಫೋನ್ ಇಂದು ಅನಾವರಣಗೊಳ್ಳಲಿದೆ. ಅಲ್ಟ್ರಾ-ಫಾಸ್ಟ್ ಪ್ರೊಸೆಸರ್, ವೇಗದ ಚಾರ್ಜಿಂಗ್ ಸಾಮರ್ಥ್ಯ ಜೊತೆಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ ಇದೆ ಎನ್ನಲಾಗುತ್ತಿರುವ ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್ ನವೆಂಬರ್ 9ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 5:30ಕ್ಕೆ ಲಾಂಚ್ ಕಾರ್ಯಕ್ರಮ ಶುರುವಾಗಲಿದೆ. ಲೈವ್ ಅನ್ನು ನೀವು ಪೋಕೋ ಕಂಪನಿಯ ಅಧಿಕೃತ ಫೇಸ್ಬುಕ್ (Facebook), ಟ್ವಿಟ್ಟರ್ (Twiter) ಮತ್ತು ಯೂಟ್ಯೂಬ್ (Youtube) ಖಾತೆಯಲ್ಲಿ ವೀಕ್ಷಿಸಬಹುದು.
ಪೋಕೋ M4 ಪ್ರೊ 5G ಸ್ಮಾರ್ಟ್‌ಫೋನ್ ಬಗೆಗಿನ ವಿಶೇಷತೆ ಬಗ್ಗೆ ಕಂಪನಿ ಯಾವುದೇ ಖಚಿತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಇದು ರೆಡ್ಮಿ ನೋಟ್ 115G ಸ್ಮಾರ್ಟ್ಫೋನಿನ ಹೊಸ ಅವತಾರ ಎಂದು ಹೇಳಲಾಗಿದೆ. ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಅಥವಾ ಡೈಮೆನ್ಸಿಟಿ 700 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರುವ ಸಾಧ್ಯತೆ ಇದೆ. ಇದು ಆಂಡ್ರಾಯ್ಡ್ 11 ಸಾಫ್ಟ್‌ವೇರ್ ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಬಹಿರಂಗಪಡಿಸಿದೆ.
Make sure to watch the #POCOM4Pro 5G global launch event on November 9th at 20:00 (GMT+8)! Share with us what you like most about the new #POCOM4Pro 5G and how you like the whole launch event in the POCO Community to win awesome giveaways!https://t.co/sST5zK2kHh pic.twitter.com/tKOdjwborD
— POCO (@POCOGlobal) November 8, 2021
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆಯಂತೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ f/1.79 ವೈಡ್ ಆಂಗಲ್ ಲೆನ್ಸ್ ಹೊಂದಿರುವ ಸಾಧ್ಯತೆ ಇದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿರುವ ಸಾಧ್ಯತೆ ಇದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್, ಟಚ್ ಟು ಫೋಕಸ್ ಅನ್ನು ಒಳಗೊಂಡಿರಲಿದೆ.
ಅಧಿಕೃತ ಟೀಸರ್ ಮೂಲಕ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಸಾಧ್ಯತೆ ಇದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ ಎಂದು ಬಹಿರಂಗಪಡಿಸಿದ್ದಾರೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ, ಜಿಪಿಎಸ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಎಕ್ಸೆಲೋಮೀಟರ್, ಏಂಬಿಯಂಟ್ ಲೈಟ್ ಸೆನ್ಸಾರ್, ಗೈರೋಸ್ಕೋಪ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಗಳನ್ನು ಒಳಗೊಂಡಿರುತ್ತದೆ.
ಪೋಕೋ M4 ಪ್ರೊ ಸ್ಮಾರ್ಟ್‌ಫೋನ್ ಇಂದು ನವೆಂಬರ್ 9 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ವದಂತಿಗಳ ಪ್ರಕಾರ ಇದು ಈ ತಿಂಗಳ ಕೊನೆಯಲ್ಲಿ ಇದು ಭಾರತದಲ್ಲಿ ಲಾಂಚ್ ಆಗುವ ಸಾದ್ಯತೆ ಇದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 4GB RAM ಮತ್ತು 128GB, 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ. ಇದರ ಬೆಲೆ ಎಷ್ಟಿರಬಹುದು ಎಂಬುದುಕೂಡ ಇನ್ನೂ ಬಹಿರಂಗವಾಗಿಲ್ಲ.
(Poco M4 Pro 5G global launch event will begin at 5-30PM expected price specs to LIVE streaming details)