ಮಾರುಕಟ್ಟೆಯಲ್ಲಿ ಸದಾ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳನ್ನು (Smartphones) ಬಿಡುಗಡೆ ಮಾಡಿ ಸುದ್ದಿಯಾಗುವ ಭಾರತದ ಪ್ರಸಿದ್ಧ ಲಾವಾ (Lava) ಕಂಪನಿ ಇದೀಗ ದೇಶದಲ್ಲಿ ಊಹಿಸಲಾಗದ ಬೆಲೆಗೆ ಆಕರ್ಷಕ ಫೋನೊಂದನ್ನು ಅನಾವರಣ ಮಾಡಿದೆ. ಇದರ ಹೆಸರು ಲಾವಾ ಬ್ಲೇಜ್ 2 (Lava Blaze 2). ಇದು ಲಾವಾ ಬ್ಲೇಜ್ ಫೋನ್ನ ಮುಂದಿನ ವರ್ಷನ್ ಆಗಿದೆ. ಇದುಕೂಡ ಬಜೆಟ್ ಬೆಲೆ ಫೋನಾಗಿದೆ. ಹೀಗಿದ್ದರು, 5,000mAh ಸಾಮರ್ಥ್ಯದ ಬ್ಯಾಟರಿ, ಡ್ಯುಯಲ್ ಕ್ಯಾಮೆರಾ ಸೆಟಪ್ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಇತರೆ ಫೀಚರ್ಸ್ ಏನೇನಿದೆ ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 8,999ರೂ. ನಿಗದಿ ಮಾಡಲಾಗಿದೆ. ಈ ಫೋನ್ ಇದೇ ಏಪ್ರಿಲ್ 18 ರಿಂದ ಮಧ್ಯಾಹ್ನ 12 ಗಂಟೆಯಿಂದ ಲಾವಾ ಅಧಿಕೃತ ವೆಬ್ಸೈಟ್ನಲ್ಲಿ ಮತ್ತು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಮಾರಾಟ ಕಾಣಲಿದೆ. ಇದು ಗ್ಲಾಸ್ ಬ್ಲ್ಯಾಕ್, ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಆರೆಂಜ್ ಕಲರ್ ಆಯ್ಕೆಗಳಲ್ಲಿ ಅನಾವರಣಗೊಂಡಿದೆ.
ಫೀಚರ್ಸ್ ಏನು?:
ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್ ಬೆಲೆಗೆ ತಕ್ಕಂತೆ 6.5-ಇಂಚಿನ ಹೆಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು ಪಂಚ್ ಹೋಲ್ ವಿನ್ಯಾಸದಿಂದ ಕೂಡಿದೆ. ಯುನಿಸೋಕ್ T616 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು ಆಂಡ್ರಾಯ್ಡ್ 13 ಒಎಸ್ ನೀಡಲಾಗಿದೆ. ವಿಶೇಷ ಎಂದರೆ ಇದರಲ್ಲಿ 5GB ವರೆಗೆ ವರ್ಚುವಲ್ RAM ಅನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ. ಮೆಮೊರಿ ಕಾರ್ಡ್ ಮೂಲಕವೂ ಸ್ಟೋರೇಜ್ ಹೆಚ್ಚಿಸಬಹುದು.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ನೀಡಲಾಗಿದೆ. ಇದಲ್ಲದೆ ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾದಲ್ಲಿ ಪೋರ್ಟ್ರೇಟ್, ನೈಟ್, AI, ಪ್ರೊ, ಬ್ಯೂಟಿ, ಸ್ಲೋ ಮೋಷನ್, ಆಡಿಯೋ ನೋಟ್, ಟೈಮ್‌ಲ್ಯಾಪ್ಸ್, ಫಿಲ್ಟರ್‌ಗಳು, HDR ಮತ್ತು ಪನೋರಮಾದಂತಹ ಆಯ್ಕೆಗಳನ್ನು ನೀಡಲಾಗಿದೆ.
ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಸಪೋರ್ಟ್ ಮಾಡುವುದಿಲ್ಲ. 4ಜಿ ಆಯ್ಕೆ ಇದೆ. ಉಳಿದಂತೆ ಹಾಟ್‌ಸ್ಪಾಟ್, ಯುಎಸ್‌ಬಿ ಸಿ ಪೋರ್ಟ್, ಬ್ಲೂಟೂತ್, ವೈಫೈ ಹಾಗೂ 3.5mm ಆಡಿಯೋ ಜ್ಯಾಕ್, ಫಿಂಗರ್ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಎಲ್ಲ ಆಯ್ಕೆಗಳಿವೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ