AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivo X90: ಬೆಸ್ಟ್ ಕ್ಯಾಮೆರಾ ಸೆಟಪ್ ಸಹಿತ ಬರುತ್ತಿದೆ ಪ್ರೀಮಿಯಂ ವಿವೊ X90 ಫೋನ್

Vivo X90: ಬೆಸ್ಟ್ ಕ್ಯಾಮೆರಾ ಸೆಟಪ್ ಸಹಿತ ಬರುತ್ತಿದೆ ಪ್ರೀಮಿಯಂ ವಿವೊ X90 ಫೋನ್

ಕಿರಣ್​ ಐಜಿ
|

Updated on: Apr 11, 2023 | 9:30 AM

ಚೀನಾ ಮೂಲದ ವಿವೊ ಕಂಪನಿ, ಭಾರತದ ಮಾರುಕಟ್ಟೆಗೆ, ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್ ಅನ್ನು ಎಕ್ಸ್ ಸರಣಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ವಿವೊ X90 ಮತ್ತು X90 ಪ್ರೊ ಸ್ಮಾರ್ಟ್​ಫೋನ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ನೂತನ ಫೋನ್ ಕುರಿತ ವಿವರ ಇಲ್ಲಿದೆ.

ಈಗಿನ ದಿನಗಳಲ್ಲಿ ಸ್ಮಾರ್ಟ್​ಫೋನ್ ಕೊಳ್ಳುವುದು ಎಂದರೆ ಅದೊಂದು ಗೊಂದಲವೇ ಸರಿ. ದಿನವೂ ಹೊಸ ಹೊಸ ತಾಂತ್ರಿಕತೆ, ಕ್ಯಾಮೆರಾ ವೈಶಿಷ್ಟ್ಯಗಳು ಅಪ್​ಗ್ರೇಡ್ ಆಗುತ್ತಿರುವಾಗ, ಆಯ್ಕೆಯ ಕುರಿತು ಸಹಜವಾಗಿ ಜನರಲ್ಲಿ ಗೊಂದಲ ಉಂಟಾಗುತ್ತದೆ. ಚೀನಾ ಮೂಲದ ವಿವೊ ಕಂಪನಿ, ಭಾರತದ ಮಾರುಕಟ್ಟೆಗೆ, ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್ ಅನ್ನು ಎಕ್ಸ್ ಸರಣಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ವಿವೊ X90 ಮತ್ತು X90 ಪ್ರೊ ಸ್ಮಾರ್ಟ್​ಫೋನ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ನೂತನ ಫೋನ್ ಕುರಿತ ವಿವರ ಇಲ್ಲಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ವಿವೊ X90 ಮತ್ತು X90 ಪ್ರೊ ಫೋನ್. MediaTek Dimensity 9200 ಪ್ರೊಸೆಸರ್ ಹೊಂದಿರುವ ವಿವೊ X90 ಮತ್ತು X90 ಪ್ರೊ ಫೋನ್, ಚೀನಾ, ಮಲೇಷ್ಯಾ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ವಿವೊ X90 ಮತ್ತು X90 ಪ್ರೊ Android 13 ಆಧಾರಿತ Funtouch OS 13 ಮೂಲಕ ಕಾರ್ಯನಿರ್ವಹಿಸುತ್ತದೆ. 6.78 ಇಂಚಿನ ಫುಲ್ HD+ AMOLED ಡಿಸ್​ಪ್ಲೇ ಹೊಂದಿದ್ದು, ವಿವೊ X90 ಫೋನ್​ನಲ್ಲಿ 50+12+12 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಹಾಗೂ ವಿವೊ X90 ಪ್ರೊ ಫೋನ್​ನಲ್ಲಿ 50+50+12 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಇದೆ. 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.