Xiaomi 13 Ultra: DSLR ಕ್ಯಾಮೆರಾಗೆ ಪಂಚ್ ನೀಡಲು ಬರುತ್ತಿದೆ ಶಓಮಿ 13 ಅಲ್ಟ್ರಾ
ಚೀನಾ ಮೂಲದ ಜನಪ್ರಿಯ ಸಂಸ್ಥೆ ಶಓಮಿ, 13 ಸರಣಿಯಲ್ಲಿ ಹೊಸ ಸ್ಮಾರ್ಟ್ಫೋನ್ ಪರಿಚಯಿಸುತ್ತಿದೆ. ಶಓಮಿ 13 ಅಲ್ಟ್ರಾದಲ್ಲಿ ಸೋನಿ ಸೆನ್ಸಾರ್ ಬಳಸಿ, ಆಕರ್ಷಕ ಕ್ಯಾಮೆರಾ ರೂಪಿಸಲಾಗುತ್ತಿದೆ.
ಮೊಬೈಲ್ ಎಂದರೆ ಅದರಲ್ಲಿ ಕ್ಯಾಮೆರಾ ಚೆನ್ನಾಗಿರಬೇಕು, ಫೋಟೊ ಸೂಪರ್ ಆಗಿ ಬರಬೇಕು ಎಂದಷ್ಟೇ ಯುವಕರು ಬಯಸುವುದು. ಫೋಟೊಗ್ರಫಿ ಪ್ರಿಯರಿಗಾಗಿ ಇಂದು ವಿವಿಧ ಬ್ರ್ಯಾಂಡ್ಗಳ ಸ್ಮಾರ್ಟ್ಫೋನ್ ತಯಾರಕರು, ಅದರಲ್ಲಿ ಆರ್ಟಿಫಿಶಿಯಲ್ ತಾಂತ್ರಿಕತೆ ಬಳಸಿ, ಫೋಟೊವನ್ನು ಇನ್ನಷ್ಟು ಸೂಪರ್ ಆಗಿಸಲು ಆ್ಯಪ್, ಫಿಲ್ಟರ್ ಅಳವಡಿಸುತ್ತಾರೆ. ಇದರಿಂದ, ಡಿಎಸ್ಎಲ್ಆರ್ ಕ್ಯಾಮೆರಾಗೆ ಸೆಡ್ಡು ಹೊಡೆಯುವ ಉತ್ತಮ ಫೋಟೊಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತಿದೆ. ಚೀನಾ ಮೂಲದ ಜನಪ್ರಿಯ ಸಂಸ್ಥೆ ಶಓಮಿ, 13 ಸರಣಿಯಲ್ಲಿ ಹೊಸ ಸ್ಮಾರ್ಟ್ಫೋನ್ ಪರಿಚಯಿಸುತ್ತಿದೆ. ಶಓಮಿ 13 ಅಲ್ಟ್ರಾದಲ್ಲಿ ಸೋನಿ ಸೆನ್ಸಾರ್ ಬಳಸಿ, ಆಕರ್ಷಕ ಕ್ಯಾಮೆರಾ ರೂಪಿಸಲಾಗುತ್ತಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ. ಲೇಕಾ ಲೆನ್ಸ್ ಬಳಸಿ ರೂಪಿಸಿರುವ ಕ್ಯಾಮೆರಾ ಹೊಂದಿದೆ ಶಓಮಿ 13 ಅಲ್ಟ್ರಾ ಫೋನ್. ಜತೆಗೆ ಏಪ್ರಿಲ್ನಲ್ಲಿಯೇ ಬಿಡುಗಡೆಯಾಗುತ್ತಿದೆ ಹೊಸ ಶಓಮಿ 13 ಅಲ್ಟ್ರಾ ಫೋನ್. ಅದರಲ್ಲಿ ಲೆಕಾ ಎಂ ಸರಣಿಯ ಲೆನ್ಸ್ ಬಳಸಬಹುದಾಗಿದೆ. ಉಳಿದಂತೆ ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ 8 Gen 2 ಪ್ರೊಸೆಸರ್ ಹೊಂದಿದೆ. ಶಓಮಿ 13 ಅಲ್ಟ್ರಾ ಫೋನ್ 12GB ಮತ್ತು 16GB RAM ಹಾಗೂ 256GB and 512GB ಸ್ಟೋರೇಜ್ ಆಯ್ಕೆ ಹೊಂದಿದ್ದು, 6.7 ಇಂಚಿನ WQHD+ AMOLED LTPO ಡಿಸ್ಪ್ಲೇ ಹೊಂದಿದೆ. ಶಓಮಿ 13 ಅಲ್ಟ್ರಾ ಸ್ಮಾರ್ಟ್ಫೋನ್ನಲ್ಲಿ 50 MP+50 MP+ 50 MP ಕ್ಯಾಮೆರಾ ಹೊಂದಿದೆ. ಶಓಮಿ 13 ಅಲ್ಟ್ರಾ ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.