Lava Yuva Pro
ಮಾರುಕಟ್ಟೆಯಲ್ಲಿ ಸದಾ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳನ್ನು (Smartphones) ಬಿಡುಗಡೆ ಮಾಡಿ ಸುದ್ದಿಯಾಗುವ ಭಾರತದ ಪ್ರಸಿದ್ಧ ಲಾವಾ (Lava) ಕಂಪನಿ ಇದೀಗ ದೇಶದಲ್ಲಿ ಊಹಿಸಲಾಗದ ಬೆಲೆಗೆ ಆಕರ್ಷಕ ಫೋನೊಂದನ್ನು ಅನಾವರಣ ಮಾಡಿದೆ. ಇದರ ಹೆಸರು ಲಾವಾ ಯುವ ಪ್ರೊ (Lava Yuva Pro). ಇದುಕೂಡ ಬಜೆಟ್ ಬೆಲೆ ಫೋನಾಗಿದೆ. ಆದರೆ, 5,000mAh ಸಾಮರ್ಥ್ಯದ ಬ್ಯಾಟರಿ, ಟ್ರಿಪಲ್ ಕ್ಯಾಮೆರಾ ಸೆಟಪ್ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಇತರೆ ಫೀಚರ್ಸ್ ಏನೇನಿದೆ ಎಂಬುದನ್ನು ನೋಡೋಣ.
- ಭಾರತದಲ್ಲಿ ಲಾವಾ ಯುವ ಪ್ರೊ ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ಇದರ 3GB RAM + 32GB ಸಾಮರ್ಥ್ಯದ ವೇರಿಯಂಟ್‌ಗೆ ಕೇವಲ 7,799 ರೂ. ನಿಗದಿ ಮಾಡಲಾಗಿದೆ.
- ಈ ಫೋನ್ ಮೆಟಾಲಿಕ್ ಬ್ಲ್ಯಾಕ್, ಮೆಟಾಲಿಕ್ ಬ್ಲೂ ಮತ್ತು ಮೆಟಾಲಿಕ್ ಗ್ರೇ ಬಣ್ಣಗಳಲ್ಲಿ ನಿಮ್ಮದಾಗಿಸಬಹುದು. ಪ್ರಸಿದ್ಧ ಇ ಕಾಮರ್ಸ್ ತಾಣ ಹಾಗೂ ಲಾವಾ ಇ-ಸ್ಟೋರ್ ನಲ್ಲಿ ಖರೀದಿಗೆ ಸಿಗಲಿದೆ.
- ಈ ಫೋನಿನಲ್ಲಿರುವ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 720×1,600 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.51 ಇಂಚಿನ HD+ IPS ಡಿಸ್‌ಪ್ಲೇ ಹೊಂದಿದೆ. 269ppi ಪಿಕ್ಸೆಲ್ ಸಾಂದ್ರತೆಯ ಡಿಸ್‌ಪ್ಲೇ ಇದರ ವಿಶೇಷತೆ.
- ಮೀಡಿಯಾ ಟೆಕ್ ಹಿಲಿಯೊ SoC ನಿಂದ ರನ್ ಆಗಲಿದ್ದು, ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ಸ್ಟೋರೇಜ್ ಹೆಚ್ಚಿಗೆ ಮಾಡಿಕೊಳ್ಳುವ ಅವಕಾಶವನ್ನು ಕೂಡ ಒದಗಿಸಲಾಗಿದೆ.
- ಲಾವಾ ಯುವ ಪ್ರೊ ರಿಯರ್ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದೆ. ಇದರಲ್ಲಿ ಪ್ರಮುಖ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎಲ್ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪೋರ್ಟ್ರೇಟ್, ಬ್ಯೂಟಿ, ನೈಟ್, ಜಿಐಎಫ್ ಮತ್ತು ಟೈಮ್ ಲ್ಯಾಪ್ಸ್ ದೃಶ್ಯಗಳನ್ನು ಸೆರೆಹಿಡಿಯಬಹುದು.
- ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಇದ್ದು, ಇದೂ ಸಹ ಎಲ್‌ಇಡಿ ಫ್ಲ್ಯಾಶ್ ಬೆಂಬಲ ಪಡೆದಿರುವುದು ವಿಶೇಷ.
- ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 10W ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.
- ಈ ಫೋನ್ನಲ್ಲಿ ಒಮ್ಮೆ ಶೇ. 100 ರಷ್ಟು ಚಾರ್ಜ್ ಫುಲ್ ಮಾಡಿದರೆ ಬರೋಬ್ಬರಿ 37 ಗಂಟೆಗಳ ಟಾಕ್ ಟೈಮ್ ಹಾಗೂ 320 ಗಂಟೆಗಳವರೆಗೆ ಸ್ಟ್ಯಾಂಡ್‌ಬೈ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
- ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. ಬದಲಾಗಿ 4G, ಬ್ಲೂಟೂತ್ v5, ಎಫ್‌ಎಂ ರೇಡಿಯೋ, ವೈ-ಫೈ, 3.5mm ಆಡಿಯೋ ಜಾಕ್, USB ಟೈಪ್-C ಪೋರ್ಟ್ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆ ನೀಡಲಾಗಿದೆ.