Flipkart Big Diwali Sale: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ದೀಪಾವಳಿ ಸೇಲ್ ಆರಂಭ: ಏನಿದೆ ಆಫರ್?, ಇಲ್ಲಿದೆ ಮಾಹಿತಿ

ಇಂದು ಅಕ್ಟೋಬರ್ 11 ರಿಂದ ಅಕ್ಟೋಬರ್ 16 ರವರೆಗೆ ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ದೀಪಾವಳಿ ಸೇಲ್ (Flipkart Big Diwali sale) ನಡೆಯಲಿದೆ. ಈ ಅವಧಿಯಲ್ಲಿ ಹೊಸ ಗ್ಯಾಜೆಟ್ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಡಿಸ್ಕೌಂಟ್ ಮತ್ತು ವಿಶೇಷ ಕೊಡುಗೆ ಕೂಡ ಲಭ್ಯವಾಗಲಿದೆ.

Flipkart Big Diwali Sale: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ದೀಪಾವಳಿ ಸೇಲ್ ಆರಂಭ: ಏನಿದೆ ಆಫರ್?, ಇಲ್ಲಿದೆ ಮಾಹಿತಿ
Flipkart Big Diwali Sale 2022
Follow us
TV9 Web
| Updated By: Vinay Bhat

Updated on: Oct 11, 2022 | 1:59 PM

ದೇಶದ ಪ್ರಮುಖ ಇ ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ (Flipkart) ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಸೇಲ್ ಆರಂಭಿಸಿದೆ. ಇಂದು ಅಕ್ಟೋಬರ್ 11 ರಿಂದ ಅಕ್ಟೋಬರ್ 16 ರವರೆಗೆ ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ದೀಪಾವಳಿ ಸೇಲ್ (Flipkart Big Diwali sale) ನಡೆಯಲಿದೆ. ಈ ಅವಧಿಯಲ್ಲಿ ಹೊಸ ಗ್ಯಾಜೆಟ್ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಡಿಸ್ಕೌಂಟ್ ಮತ್ತು ವಿಶೇಷ ಕೊಡುಗೆ ಕೂಡ ಲಭ್ಯವಾಗಲಿದೆ. ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ (Big Billion Days Sale) ಮೊನ್ನೆಯಷ್ಟೆ ಮುಕ್ತಾಯಗೊಂಡೊತ್ತು. ಇದೀಗ ಫ್ಲಿಪ್‌ಕಾರ್ಟ್‌ ದೀಪಾವಳಿ ಪ್ರಯುಕ್ತ ಮತ್ತೊಂದು ವಿಶೇಷ ಸೇಲ್‌ ಶುರು ಮಾಡಿರುವುದು ಆನ್​ಪ್ರಿಯರಲ್ಲಿ ಸಂತಸ ಮೂಡಿದೆ.

ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಆಫರ್‌ ಮಿಸ್‌ ಮಾಡಿಕೊಂಡವರಿಗೆ ಮತ್ತೊಮ್ಮೆ ದೀಪಾವಳಿ ಸಂದರ್ಭದಲ್ಲಿ ಬಿಗ್ ದೀಪಾವಳಿ ಸೇಲ್‌ ಮೂಲಕ ಮೊಬೈಲ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್​​ ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಕೆಲವು ರೋಮಾಂಚಕಾರಿ ಡೀಲ್‌ಗಳನ್ನು ಪಡೆಯಬಹುದಾಗಿದೆ. ದೀಪಾವಳಿ ಸೇಲ್​ನಲ್ಲಿ ಗ್ಯಾಜೆಟ್‌ಗಳ ಮೇಲೆ ಬರೋಬ್ಬರಿ 45% ರಷ್ಟು ರಿಯಾಯಿತಿ ನೀಡಲಾಗಿದೆ. ಕೊಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಆಫರ್‌ಗಳು ಇರುತ್ತವೆ.

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ. 45 ರ ತನಕ ರಿಯಾಯಿತಿ ನೀಡುತ್ತದೆ. ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇ. 80 ರ ವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಈ ರಿಯಾಯಿತಿ ಒಳಗೆ ಸ್ಮಾರ್ಟ್ ವಾಚ್‌ಗಳು, ಹೆಡ್‌ಫೋನ್‌ಗಳು, ವೈರ್‌ಲೆಸ್ ಇಯರ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಅನೇಕ ಪ್ರಾಟಕ್ಟ್ ಸೇರಿವೆ. ಲ್ಯಾಪ್‌ಟಾಪ್‌ ಮೇಲೆ ಶೇ. 50 ರಷ್ಟು ರಿಯಾಯಿತಿ ಇದೆ. ಬಲಿಷ್ಠವಾದ ಗೇಮಿಂಗ್ ಲ್ಯಾಪ್‌ಟಾಪ್‌ಗಳು ರೂ. 50,990 ರಿಂದ ಮಾರಾಟವಾಗುತ್ತವೆ. ಪ್ರಿಂಟರ್‌ಗಳು ಮತ್ತು ಮಾನಿಟರ್‌ಗಳು ಮಾರಾಟದಲ್ಲಿ ಶೇ. 80 ರಷ್ಟು ರಿಯಾಯಿತಿ ಲಭ್ಯ ಇರುತ್ತವೆ.

ಇದನ್ನೂ ಓದಿ
Image
Reliance Jio: ಬಜೆಟ್ ಬೆಲೆಗೆ ಬಂಪರ್ ಪ್ಲಾನ್: ಜಿಯೋ, ಏರ್ಟೆಲ್, ವಿ ನಡುವೆ ಪೈಪೋಟಿ
Image
Tecno Pova 4 Pro: ಟೆಕ್ನೋ ಪೋವಾ 4 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ: ಇದು ಬಜೆಟ್ ಬೆಲೆಯ ಬಂಪರ್ ಫೋನ್
Image
WhatsApp Scam: ವಾಟ್ಸ್​ಆ್ಯಪ್​ನಲ್ಲಿ ನಡೆಯುತ್ತಿದೆ ಬಹುದೊಡ್ಡ ವಂಚನೆ: ತಪ್ಪಿಯೂ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
Image
Galaxy F13: ಆಫರ್ ಅಂದ್ರೆ ಇದು: 6000mAh ಬ್ಯಾಟರಿಯ ಗ್ಯಾಲಕ್ಸಿ F13 ಈಗ ಕೇವಲ 9499 ರೂ. ಗೆ ಲಭ್ಯ

ಇನ್ನು ರಿಯಲ್‌ಮಿ, ಪೋಕೋ ಮತ್ತು ರೆಡ್ಮಿ ಸೇರಿದಂತೆ ಇನ್ನಿತರೆ ಸ್ಮಾರ್ಟ್‌ ಫೋನ್‌ಗಳಿಗೆ ಭಾರೀ ರಿಯಾಯಿತಿ ನೀಡುತ್ತಿದೆ. ಇದಿಷ್ಟೇ ಅಲ್ಲದೆ ಈ ಸ್ಮಾರ್ಟ್‌ಫೋನ್‌ಗಳನ್ನು ಕೊಂಡುಕೊಳ್ಳಲು ಎಕ್ಸ್‌ಚೇಂಜ್‌ ಅಫರ್‌ ಸಹ ಘೋಷಣೆ ಮಾಡಲಾಗಿದ್ದು, ಇದರ ಜೊತೆಗೆ ಇಎಂಐ ಆಯ್ಕೆಯನ್ನೂ ನೀಡಲಾಗಿದೆ. ಪ್ರಮುಖವಾಗಿ ಈ ಸೇಲ್‌ನಲ್ಲಿ ಆ್ಯಪಲ್‌ ಐಫೋನ್‌ 13, ಐಫೋನ್‌ 13 ಮಿನಿ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22+, ರಿಯಲ್‌ಮಿ 9i 5G ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತದೆ ಎಂದು ಫ್ಲಿಪ್‌ಕಾರ್ಟ್‌ನ ಟೀಸರ್‌ನಲ್ಲಿ ತಿಳಿಸಲಾಗಿದೆ.

ಬರೋಬ್ಬರಿ 6000mAh ಬ್ಯಾಟರಿ ಸಾಮರ್ಥ್ಯದಿಂದ ಕೂಡಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್‌ ಫ್ಲಿಪ್​ಕಾರ್ಟ್​ ಸೇಲ್​ನಲ್ಲಿ​ ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಗ್ಯಾಲಕ್ಸಿ F13 ಭಾರತದಲ್ಲಿ 14,999 ರೂ. ಗೆ ಬಿಡುಗಡೆ ಆಗಿತ್ತು. ಇದೀಗ 5,000 ರೂ. ಗಳ ಡಿಸ್ಕೌಂಟ್ ಪಡೆದುಕೊಂಡಿರುವ ಈ ಫೋನ್ ಕೇವಲ 9999 ರೂ. ಗೆ ಮಾರಾಟ ಆಗುತ್ತಿದೆ. ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್​ ಮೂಲಕ ಖರೀದಿಸಿದರೆ ಪುನಃ 500 ರೂ. ರಿಯಾಯಿತಿ ಪಡೆಯಬಹುದು. ನಥಿಂಗ್ ಫೋನ್ 1 ಕೇವಲ 32,999 ರೂ. ಗೆ ನಿಮ್ಮದಾಗಿಸಬಹುದು. ಗೂಗಲ್ ಪಿಕ್ಸೆಲ್ 6ಎ ಫೋನ್ 34,199 ರೂ. ಗೆ ಸೇಲ್ ಆಗುತ್ತಿದೆ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ