AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Big Diwali Sale 2021: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ದೀಪಾವಳಿ ಸೇಲ್: ಸ್ಮಾರ್ಟ್​ಫೋನ್, ಸ್ಮಾರ್ಟ್​ ಟಿವಿಗಳ ಮೇಲೆ ಬಂಪರ್ ಆಫರ್

ಫ್ಲಿಪ್​ಕಾರ್ಟ್ ಬಿಗ್ ದೀಪಾವಳಿ ಸೇಲ್‌ ಸೇಲ್‌ನಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಮತ್ತು ಆಕ್ಸಿಸ್ ಬ್ಯಾಂಕ್ ಬಳಕೆದಾರರಿಗೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ದೊರೆಯಲಿದೆ.

Flipkart Big Diwali Sale 2021: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ದೀಪಾವಳಿ ಸೇಲ್: ಸ್ಮಾರ್ಟ್​ಫೋನ್, ಸ್ಮಾರ್ಟ್​ ಟಿವಿಗಳ ಮೇಲೆ ಬಂಪರ್ ಆಫರ್
Flipkart Big Diwali Sale
TV9 Web
| Updated By: Vinay Bhat|

Updated on: Oct 16, 2021 | 1:21 PM

Share

ದೇಶದ ಪ್ರಮುಖ ಇ ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ (Flipkart) ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಸೇಲ್ ಆರಂಭಿಸಲಿದೆ. ಇದೇ ಅಕ್ಟೋಬರ್ 17 ರಿಂದ ಅಂದರೆ ನಾಳೆಯಿಂದ ಅಕ್ಟೋಬರ್ 23 ರವರೆಗೆ ಆಫರ್ ಬಿಗ್ ದೀಪಾವಳಿ ಸೇಲ್ ನಡೆಯಲಿದೆ. ಈ ಅವಧಿಯಲ್ಲಿ ಹೊಸ ಗ್ಯಾಜೆಟ್ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಡಿಸ್ಕೌಂಟ್ ಮತ್ತು ವಿಶೇಷ ಕೊಡುಗೆ ಕೂಡ ಲಭ್ಯವಾಗಲಿದೆ. ನವರಾತ್ರಿ ಹಬ್ಬದ ಪ್ರಯುಕ್ತ (Navaratri Sale) ಆಯೋಜಿಸಿದ್ದ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ (Big Billion Days Sale) ಮೊನ್ನೆಯಷ್ಟೆ ಮುಕ್ತಾಯಗೊಂಡೊತ್ತು. ಇದೀಗ ಫ್ಲಿಪ್‌ಕಾರ್ಟ್‌ ದೀಪಾವಳಿ ಪ್ರಯುಕ್ತ ಮತ್ತೊಂದು ವಿಶೇಷ ಸೇಲ್‌ ಘೋಷಣೆ ಮಾಡಿದ್ದು ಆನ್​ಪ್ರಿಯರಲ್ಲಿ ಸಂತಸ ಮೂಡಿದೆ. ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಆಫರ್‌ ಮಿಸ್‌ ಮಾಡಿಕೊಂಡವರಿಗೆ ಮತ್ತೊಮ್ಮೆ ದೀಪಾವಳಿ ಸಂದರ್ಭದಲ್ಲಿ ಬಿಗ್ ದೀಪಾವಳಿ ಸೇಲ್‌ (Flipkart Big Diwali Sale) ಮೂಲಕ ಮೊಬೈಲ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್​​ ಟಿವಿಗಳು (Smart TV) ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಕೆಲವು ರೋಮಾಂಚಕಾರಿ ಡೀಲ್‌ಗಳನ್ನು ಪಡೆಯಬಹುದಾಗಿದೆ.

ಫ್ಲಿಪ್‌ಕಾರ್ಟ್‌ ಪ್ಲಸ್ ಸದಸ್ಯರಿಗೆ ಈ ಸೇಲ್‌ ಅಕ್ಟೋಬರ್ 16ರ ಮಧ್ಯಾಹ್ನ 12 ಗಂಟೆಯಿಂದಲೇ ಲೈವ್‌ ಆಗಲಿದೆ. ಇನ್ನು ಈ ಸೇಲ್‌ನಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಮತ್ತು ಆಕ್ಸಿಸ್ ಬ್ಯಾಂಕ್ ಬಳಕೆದಾರರಿಗೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ದೊರೆಯಲಿದೆ. ಆದರೆ ಸೇಲ್‌ ಅವಧಿಯಲ್ಲಿ ನೀವು ನಿರೀಕ್ಷಿಸಬಹುದಾದ ಡೀಲ್‌ಗಳ ಬಗ್ಗೆ ಯಾವುದೇ ಮಾಹಿತಿಯನ್ನು ಫ್ಲಿಪ್‌ಕಾರ್ಟ್ ಇನ್ನೂ ಹಂಚಿಕೊಂಡಿಲ್ಲ.

ಆದರೂ ಕೂಡ ಈ ಬಾರಿಯ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಮೇಲೆ 80% ರಿಯಾಯಿತಿ ಲಭ್ಯವಿರೋದು ಪಕ್ಕಾ ಆಗಿದೆ. ಇದರ ಜೊತೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ ಕೂಡ 80% ರಿಯಾಯಿತಿ ಲಭ್ಯವಾಗಲಿದೆ. ಇನ್ನು ಟಿವಿಗಳು ಮತ್ತು ಇತರೆ ಉಪಕರಣಗಳ ಮೇಲೆ 75% ವರೆಗೆ ರಿಯಾಯಿತಿಯನ್ನು ನಿರೀಕ್ಷಿಸಬಹುದಾಗಿದೆ.

ಇನ್ನು ಫ್ಲಿಪ್‌ಕಾರ್ಟ್‌ ವೆಬ್‌ಪೇಜ್‌ನಲ್ಲಿ ಕ್ರೇಜಿ ಡೀಲ್ಸ್‌ ಎಂಬ ವರ್ಗವನ್ನು ಉಲ್ಲೇಖಿಸಿದೆ. ಇದು ಮಾರಾಟದ ದಿನಗಳಲ್ಲಿ ಬೆಳಿಗ್ಗೆ 12, 8 ಮತ್ತು ಸಂಜೆ 4 ಕ್ಕೆ ಹೊಸ ಡೀಲ್‌ಗಳನ್ನು ತೋರಿಸುತ್ತದೆ. ಮತ್ತೊಂದು ಟೈಮ್ ಬಾಂಬ್ ಡೀಲ್ ವಿಭಾಗವು ಈ ದಿನಗಳಲ್ಲಿ ಪ್ರತಿ ಗಂಟೆಗೆ ಸಂಜೆ 6 ರಿಂದ ಬೆಳಿಗ್ಗೆ 12 ರವರೆಗೆ ಒಂದು ಹೊಸ ಡೀಲ್ ಅನ್ನು ತೋರಿಸಲಿದೆ. ಸದ್ಯ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ನಲ್ಲಿ ಡೀಲ್‌ಗಳ ಕುರಿತು ಹೆಚ್ಚಿನ ವಿವರಗಳನ್ನು ನೋಡಬೇಕಾಗಿದೆ.

ಇತ್ತ ಮತ್ತೊಂದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ಈ ತಿಂಗಳು ಪೂರ್ತಿ ನಡೆಯಲಿದೆ. ಹೀಗಾಗಿ ಫ್ಲಿಪ್‌ಕಾರ್ಟ್‌ ಬಿಗ್ ದೀಪಾವಳಿ ಸೇಲ್‌ ಇನ್ನಷ್ಟು ಡಿಲ್ಸ್‌ಗಳನ್ನು ನೀಡುವ ಸಾದ್ಯತೆ ಇದೆ. ಒಟ್ಟಾರೆ ದೀಪಾವಳಿ ಸಮಯದಲ್ಲಿ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು ಭರ್ಜರಿ ಡಿಸ್ಕೌಂಟ್‌ಗಳನ್ನು ಹೊತ್ತು ತಂದಿದ್ದು ಆನ್​ಲೈನ್​ ಪ್ರಿಯರು ಭರ್ಜರಿ ಡಿಸ್ಕೌಂಟ್ ಮೂಲಕ ತಮಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಬಹುದು.

WhatsApp Backups: ಗೂಗಲ್​ನಿಂದ ವಾಟ್ಸ್​ಆ್ಯಪ್ ಬಳಕೆದಾರರಿಗೆ ಶಾಕ್: ಇನ್ನುಂದೆ ಈ ಸೇವೆ ಸ್ಥಗಿತ

OnePlus 9RT: ಭರ್ಜರಿ ಕ್ಯಾಮೆರಾ, ಸ್ನಾಪ್‌ಡ್ರಾಗನ್ ಪ್ರೊಸೆಸರ್: ಬಿಡುಗಡೆ ಆಯಿತು ಬಲಿಷ್ಠ ಒನ್‌ಪ್ಲಸ್‌ 9RT ಸ್ಮಾರ್ಟ್​ಫೋನ್

(Flipkart Big Diwali Sale starts October 17 Flipkart termed it as the Big Diwali Sale and promises to Big offer)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!