OnePlus 9RT: ಭರ್ಜರಿ ಕ್ಯಾಮೆರಾ, ಸ್ನಾಪ್‌ಡ್ರಾಗನ್ ಪ್ರೊಸೆಸರ್: ಬಿಡುಗಡೆ ಆಯಿತು ಬಲಿಷ್ಠ ಒನ್‌ಪ್ಲಸ್‌ 9RT ಸ್ಮಾರ್ಟ್​ಫೋನ್

ಒನ್‌ಪ್ಲಸ್‌ 9RT ಸ್ಮಾರ್ಟ್‌ಫೋನ್‌ ಒಟ್ಟು ಮೂರು ಮಾದರಿಯಲ್ಲಿ ಬಿಡುಗಡೆ ಆಗಿದೆ. 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಬೆಲೆ CNY 3,299 (ಭಾರತದಲ್ಲಿ ಅಂದಾಜು ರೂ. 38,600) ಹೊಂದಿದೆ.

OnePlus 9RT: ಭರ್ಜರಿ ಕ್ಯಾಮೆರಾ, ಸ್ನಾಪ್‌ಡ್ರಾಗನ್ ಪ್ರೊಸೆಸರ್: ಬಿಡುಗಡೆ ಆಯಿತು ಬಲಿಷ್ಠ ಒನ್‌ಪ್ಲಸ್‌ 9RT ಸ್ಮಾರ್ಟ್​ಫೋನ್
OnePlus 9RT
Follow us
TV9 Web
| Updated By: Vinay Bhat

Updated on: Oct 14, 2021 | 1:35 PM

ಒನ್‌ಪ್ಲಸ್‌ ಕಂಪನಿಯ ಬಹುನಿರೀಕ್ಷಿತ ಒನ್‌ಪ್ಲಸ್‌ 9ಆರ್​ಟಿ (OnePlus 9RT) ಸ್ಮಾರ್ಟ್​ಫೋನ್‌ (Smartphone) ಲಾಂಚ್‌ ಆಗಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇಷ್ಟೇ ಅಲ್ಲದೆ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ (Snapdragon ) 888 SoC ಪ್ರೊಸೆಸರ್‌, 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65T ವಾರ್ಪ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ (Fast Charging) ಅನ್ನು ಬೆಂಬಲಿಸುತ್ತದೆ. ಸದ್ಯಕ್ಕೆ ವಿದೇಶದಲ್ಲಿ ಬಿಡುಗಡೆ ಆಗಿರುವ ಈ ಫೋನ್ ಮುಂದಿನ ತಿಂಗಳೂ ಭಾರತಕ್ಕೂ ಕಾಲಿಡುವ ಅಂದಾಜಿದೆ.

ಒನ್‌ಪ್ಲಸ್‌ 9RT ಸ್ಮಾರ್ಟ್‌ಫೋನ್‌ ಒಟ್ಟು ಮೂರು ಮಾದರಿಯಲ್ಲಿ ಬಿಡುಗಡೆ ಆಗಿದೆ. 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಬೆಲೆ CNY 3,299 (ಭಾರತದಲ್ಲಿ ಅಂದಾಜು ರೂ. 38,600) ಹೊಂದಿದೆ. 8GB ಮತ್ತು 256GB ಮಾದರಿಗೆ CNY 3,499 (ಅಂದಾಜು 40,900ರೂ.) ಬೆಲೆ ನಿಗದಿಪಡಿಸಲಾಗಿದೆ. ಇನ್ನು 12GB RAM ಮತ್ತು 256GB ಆಯ್ಕೆಯಲ್ಲಿ ಸಿಎನ್‌ವೈ 3,799 (ಸರಿಸುಮಾರು ರೂ. 44,400) ಬೆಲೆಯನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಅಕ್ಟೋಬರ್ 19 ರಿಂದ ಚೀನಾದಲ್ಲಿ ಮಾರಾಟಕ್ಕೆ ಬರಲಿದೆ.

ಒನ್‌ಪ್ಲಸ್‌ 9RT ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.62-ಇಂಚಿನ ಫುಲ್‌-ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಓಪೋನ ಕಲರ್‌ಓಎಸ್ ಮೇಲೆ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಇನ್ನು ರಿಯರ್‌ ಕ್ಯಾಮರಾ ಸೆಟಪ್ 4K ವೀಡಿಯೋ ರೆಕಾರ್ಡಿಂಗ್ ನೀಡುತ್ತದೆ ಮತ್ತು ಹೈಬ್ರಿಡ್ ಫೋಕಸ್‌ ಹೊಂದಿದೆ.

4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65T ವಾರ್ಪ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC ಮತ್ತು USB Type-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಅನ್ನು ಒಳಗೊಂಡಿದೆ.

Best SmartPhones: 10,000 ರೂ. ಒಳಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

Realme GT Neo 2 5G: ಭಾರತದಲ್ಲಿ ಬಿಡುಗಡೆಯಾದ ರಿಯಲ್ ಮಿ ಜಿಟಿ ನಿಯೋ 2 5ಜಿ ಸ್ಮಾರ್ಟ್​ಫೋನ್​; ಇಲ್ಲಿದೆ ಸಂಪೂರ್ಣ ಡಿಟೇಲ್ಸ್

(OnePlus 9RT most awaited Smartphone With Snapdragon 888 SoC 50-Megapixel Cameras Launched)