Flipkart Big Diwali Sale: ದೀಪಾವಳಿಗೆ ಫ್ಲಿಪ್ಕಾರ್ಟ್ನಿಂದ ಹೊಸ ಮೇಳ: ಯಾವಾಗ ಆರಂಭ?, ಏನು ಆಫರ್?, ಇಲ್ಲಿದೆ ನೋಡಿ
ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಆಫರ್ ಮಿಸ್ ಮಾಡಿಕೊಂಡವರಿಗೆ ಮತ್ತೊಮ್ಮೆ ದೀಪಾವಳಿ ಸಂದರ್ಭದಲ್ಲಿ ಬಿಗ್ ದೀಪಾವಳಿ ಸೇಲ್ ಮೂಲಕ ಮೊಬೈಲ್‌ಗಳು, ಟ್ಯಾಬ್ಲೆಟ್‌ಗಳು, ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಕೆಲವು ರೋಮಾಂಚಕಾರಿ ಡೀಲ್‌ಗಳನ್ನು ಪಡೆಯಬಹುದಾಗಿದೆ.
ದೇಶದ ಪ್ರಮುಖ ಇ ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ (Flipkart) ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಸೇಲ್ ಆರಂಭಿಸಲಿದೆ. ಇದೇ ಅಕ್ಟೋಬರ್ 17 ರಿಂದ ಅಕ್ಟೋಬರ್ 23 ರವರೆಗೆ ಆಫರ್ ಸೇಲ್ ನಡೆಯಲಿದೆ. ಈ ಅವಧಿಯಲ್ಲಿ ಹೊಸ ಗ್ಯಾಜೆಟ್ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಡಿಸ್ಕೌಂಟ್ ಮತ್ತು ವಿಶೇಷ ಕೊಡುಗೆ ಕೂಡ ಲಭ್ಯವಾಗಲಿದೆ. ನವರಾತ್ರಿ ಹಬ್ಬದ ಪ್ರಯುಕ್ತ (Navaratri Sale) ಆಯೋಜಿಸಿದ್ದ ಬಿಗ್ ಬಿಲಿಯನ್ ಡೇಸ್ ಸೇಲ್ (Big Billion Days Sale) ಎರಡು ದಿನಗಳ ಹಿಂದೆಯಷ್ಟೇ ತೆರೆ ಎಳೆದಿತ್ತು. ಇದೀಗ ಫ್ಲಿಪ್‌ಕಾರ್ಟ್ ದೀಪಾವಳಿ ಪ್ರಯುಕ್ತ ಮತ್ತೊಂದು ವಿಶೇಷ ಸೇಲ್ ಘೋಷಣೆ ಮಾಡಿದ್ದು ಆನ್ಪ್ರಿಯರಲ್ಲಿ ಸಂತಸ ಮೂಡಿದೆ. ಬಿಗ್ ಬಿಲಿಯನ್ ಡೇಸ್ ಸೇಲ್ ಆಫರ್ ಮಿಸ್ ಮಾಡಿಕೊಂಡವರಿಗೆ ಮತ್ತೊಮ್ಮೆ ದೀಪಾವಳಿ ಸಂದರ್ಭದಲ್ಲಿ ಬಿಗ್ ದೀಪಾವಳಿ ಸೇಲ್ (Flipkart Big Diwali Sale) ಮೂಲಕ ಮೊಬೈಲ್‌ಗಳು, ಟ್ಯಾಬ್ಲೆಟ್‌ಗಳು, ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಕೆಲವು ರೋಮಾಂಚಕಾರಿ ಡೀಲ್‌ಗಳನ್ನು ಪಡೆಯಬಹುದಾಗಿದೆ.
ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಈ ಸೇಲ್ ಅಕ್ಟೋಬರ್ 16ರ ಮಧ್ಯಾಹ್ನ 12 ಗಂಟೆಯಿಂದಲೇ ಲೈವ್ ಆಗಲಿದೆ. ಇನ್ನು ಈ ಸೇಲ್‌ನಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಮತ್ತು ಆಕ್ಸಿಸ್ ಬ್ಯಾಂಕ್ ಬಳಕೆದಾರರಿಗೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ದೊರೆಯಲಿದೆ. ಆದರೆ ಸೇಲ್ ಅವಧಿಯಲ್ಲಿ ನೀವು ನಿರೀಕ್ಷಿಸಬಹುದಾದ ಡೀಲ್‌ಗಳ ಬಗ್ಗೆ ಯಾವುದೇ ಮಾಹಿತಿಯನ್ನು ಫ್ಲಿಪ್‌ಕಾರ್ಟ್ ಇನ್ನೂ ಹಂಚಿಕೊಂಡಿಲ್ಲ.
ಆದರೂ ಕೂಡ ಈ ಬಾರಿಯ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಮೇಲೆ 80% ರಿಯಾಯಿತಿ ಲಭ್ಯವಿರೋದು ಪಕ್ಕಾ ಆಗಿದೆ. ಇದರ ಜೊತೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ ಕೂಡ 80% ರಿಯಾಯಿತಿ ಲಭ್ಯವಾಗಲಿದೆ. ಇನ್ನು ಟಿವಿಗಳು ಮತ್ತು ಇತರೆ ಉಪಕರಣಗಳ ಮೇಲೆ 75% ವರೆಗೆ ರಿಯಾಯಿತಿಯನ್ನು ನಿರೀಕ್ಷಿಸಬಹುದಾಗಿದೆ.
ಇನ್ನು ಫ್ಲಿಪ್‌ಕಾರ್ಟ್ ವೆಬ್‌ಪೇಜ್‌ನಲ್ಲಿ ಕ್ರೇಜಿ ಡೀಲ್ಸ್ ಎಂಬ ವರ್ಗವನ್ನು ಉಲ್ಲೇಖಿಸಿದೆ. ಇದು ಮಾರಾಟದ ದಿನಗಳಲ್ಲಿ ಬೆಳಿಗ್ಗೆ 12, 8 ಮತ್ತು ಸಂಜೆ 4 ಕ್ಕೆ ಹೊಸ ಡೀಲ್‌ಗಳನ್ನು ತೋರಿಸುತ್ತದೆ. ಮತ್ತೊಂದು ಟೈಮ್ ಬಾಂಬ್ ಡೀಲ್ ವಿಭಾಗವು ಈ ದಿನಗಳಲ್ಲಿ ಪ್ರತಿ ಗಂಟೆಗೆ ಸಂಜೆ 6 ರಿಂದ ಬೆಳಿಗ್ಗೆ 12 ರವರೆಗೆ ಒಂದು ಹೊಸ ಡೀಲ್ ಅನ್ನು ತೋರಿಸಲಿದೆ. ಸದ್ಯ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಡೀಲ್‌ಗಳ ಕುರಿತು ಹೆಚ್ಚಿನ ವಿವರಗಳನ್ನು ನೋಡಬೇಕಾಗಿದೆ.
ಇತ್ತ ಮತ್ತೊಂದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈ ತಿಂಗಳು ಪೂರ್ತಿ ನಡೆಯಲಿದೆ. ಹೀಗಾಗಿ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಇನ್ನಷ್ಟು ಡಿಲ್ಸ್‌ಗಳನ್ನು ನೀಡುವ ಸಾದ್ಯತೆ ಇದೆ. ಒಟ್ಟಾರೆ ದೀಪಾವಳಿ ಸಮಯದಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಭರ್ಜರಿ ಡಿಸ್ಕೌಂಟ್‌ಗಳನ್ನು ಹೊತ್ತು ತಂದಿದ್ದು ಆನ್ಲೈನ್ ಪ್ರಿಯರಿಗೆ ಹಬ್ಬವೋ ಹಬ್ಬ.
WhatsApp Backups: ಗೂಗಲ್ನಿಂದ ವಾಟ್ಸ್ಆ್ಯಪ್ ಬಳಕೆದಾರರಿಗೆ ಶಾಕ್: ಇನ್ನುಂದೆ ಈ ಸೇವೆ ಸ್ಥಗಿತ
(Flipkart Big Diwali Sale kicks off on October 17 upto 80 per discount on smartphones and other products)