Realme GT Neo 2 5G: ಭಾರತದಲ್ಲಿ ಬಿಡುಗಡೆಯಾದ ರಿಯಲ್ ಮಿ ಜಿಟಿ ನಿಯೋ 2 5ಜಿ ಸ್ಮಾರ್ಟ್​ಫೋನ್​; ಇಲ್ಲಿದೆ ಸಂಪೂರ್ಣ ಡಿಟೇಲ್ಸ್

ರಿಯಲ್ ಮಿ ಜಿಟಿ ನಿಯೋ 2 5ಜಿ: ಸ್ಮಾರ್ಟ್ ಫೋನ್ ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಮುಂಬರುವ ಅಕ್ಟೋಬರ್ 17ರ ಮಧ್ಯರಾತ್ರಿಯಿಂದ ಮಾರಾಟವು ಆರಂಭಗೊಳ್ಳುತ್ತದೆ.

Realme GT Neo 2 5G: ಭಾರತದಲ್ಲಿ ಬಿಡುಗಡೆಯಾದ ರಿಯಲ್ ಮಿ ಜಿಟಿ ನಿಯೋ 2 5ಜಿ ಸ್ಮಾರ್ಟ್​ಫೋನ್​; ಇಲ್ಲಿದೆ ಸಂಪೂರ್ಣ ಡಿಟೇಲ್ಸ್
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on:Oct 13, 2021 | 2:14 PM

ಮೊಬೈಲ್ ಪ್ರಿಯರು ಕಾದು ಕುಳಿತಿದ್ದ ರಿಯಲ್ ಮಿ ಜಿಟಿ ನಿಯೋ 2 5ಜಿ (Realme GT Neo 2 5G) ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ ಫೋನ್ ಟ್ರಿಪಲ್ ಕ್ಯಾಮರಾ ಸೆಟಪ್​ನೊಂದಿಗೆ ಬರುತ್ತದೆ. ಜತೆಗೆ ರಿಯಲ್ ಮಿ 4ಕೆ ಸ್ಮಾರ್ಟ್ ಟಿವಿ ಗೂಗಲ್ ಸ್ಟಿಕ್, ಬ್ಲೂಟುತ್ ಸ್ಪೀಕರ್ ಮತ್ತು ಗೇಮಿಂಗ್ ಆಕ್ಸೆಸರೀಸ್ಅನ್ನು ಇದೇ ಲಾಂಚ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ.

8GM RAM ಮತ್ತು 128GM ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನ್ಅನ್ನು 31,999ರೂಪಾಯಿ ಹಾಗೂ 12GM RAM ಮತ್ತು 256GB UFS 3.1 ರೂಪಾಂತರದ ಫೋನ್​ಅನ್ನು 35,999 ರೂಪಾಯಿಗೆ ಬಿಡುಗಡೆ ಮಾಡಲಾಗಿದೆ. ಹಬ್ಬದ ಸೀಸನ್​ಗಳಲ್ಲಿ ರಿಯಲ್ ಮಿ 8GB RAM ರೂಪಾಂತರದ ಪೋನ್ಅನ್ನು 24,999 ರೂಪಾಯಿಗೆ ಖರೀದಿಸಬಹುದು. ಜತೆಗೆ 12GM RAM ಹೊಂದಿರುವ ಫೋನ್ಅನ್ನು 28,999 ರೂಪಾಯಿಗೆ ಗ್ರಾಹಕರು ಖರೀದಿಸಬಹುದು.

ಸ್ಮಾರ್ಟ್ ಫೋನ್ ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಮುಂಬರುವ ಅಕ್ಟೋಬರ್ 17ರ ಮಧ್ಯರಾತ್ರಿಯಿಂದ ಮಾರಾಟವು ಆರಂಭಗೊಳ್ಳುತ್ತದೆ. ಫ್ಲಿಪ್​ ಕಾರ್ಟ್​ ಪ್ಲಸ್ ಸದಸ್ಯರು ಈ ಸ್ಮಾರ್ಟ್ ಫೋನ್ಅನ್ನು ಅಕ್ಟೋಬರ್ 16ರ ಮಧ್ಯಾಹ್ನವೇ ಪಡೆಯಬಹುದು. ರಿಯಲ್ ಮಿ ಜಿಟಿ ನಿಯೋ 2 5ಜಿ 6.62 ಇಂಚು ಹಾಗೂ 120 Hz E4 ಡಿಸ್​ಪ್ಲೇಯನ್ನು ಹೊಂದಿದೆ. ಇದು ಟ್ರಿಪಲ್ ಕ್ಯಾಮರಾ ಸೆಟಪ್​ನೊಂದಿಗೆ ಬರುತ್ತದೆ. 64MP ಪ್ರಾಥಮಿಕ ಲೆನ್ಸ್, ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಜೊತೆಗೆ ಮ್ಯಾಕ್ರೋ ಲೆನ್ಸ್ ಒಳಗೊಂಡಿದೆ.

ಇದು ಪೂರ್ಣ ಎಚ್​ಡಿ + ರೆಸೆಲ್ಯೂಷನ್, 120 Hz ರಿಫ್ರೆಶ್ ದರ ಮತ್ತು 1,300 ಗರಿಷ್ಠ ಹೊಳಪನ್ನು ಹೊಂದಿರುತ್ತದೆ. ಇದು 65W ಚಾರ್ಚ್ಅನ್ನು ಹೊಂದಿದೆ. ಕೇವಲ 36 ನಿಮಿಷಗಳಲ್ಲಿ ಶೇ.100ರಷ್ಟು ಚಾರ್ಜ್ ಮಾಡಬಹುದು. ಜತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ:

Realme C25Y: ಬರೋಬ್ಬರಿ 48 ದಿನಗಳ ಸ್ಟ್ಯಾಂಡ್‌ಬೈ ಟೈಂ: ಭಾರತದಲ್ಲಿ ರಿಯಲ್‌ಮಿ C25Y ಸ್ಮಾರ್ಟ್​ಫೋನ್ ಬಿಡುಗಡೆ

Realme Narzo 30: ರಿಯಲ್ ಮಿಯಿಂದ ಬಂಪರ್ ಕೊಡುಗೆ: ನಾರ್ಜೊ 30 5G ಈಗ ಹೊಸ ವೇರಿಯೆಂಟ್​ನಲ್ಲಿ ಲಭ್ಯ

Published On - 2:10 pm, Wed, 13 October 21