Realme C25Y: ಬರೋಬ್ಬರಿ 48 ದಿನಗಳ ಸ್ಟ್ಯಾಂಡ್‌ಬೈ ಟೈಂ: ಭಾರತದಲ್ಲಿ ರಿಯಲ್‌ಮಿ C25Y ಸ್ಮಾರ್ಟ್‌ಫೋನ್ ಬಿಡುಗಡೆ
ಭಾರತದಲ್ಲಿ ರಿಯಲ್‌ಮಿ C25Y ಸ್ಮಾರ್ಟ್‌ಫೋನ್ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ 10,999 ರೂ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಆಕರ್ಷಕ ಫೀಚರ್ಗಳ ಫೋನನ್ನು ಪರಿಚಯಿಸುತ್ತಿರುವ ರಿಯಲ್‌ಮಿ ಕಂಪೆನಿ ಇದೀಗ ಭಾರತದಲ್ಲಿ ರಿಯಲ್‌ಮಿ ಸಿ25ವೈ (Realme C25Y) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ವಿಶೇಷವಾಗಿ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ವಾಟರ್‌ಡ್ರಾಪ್-ಶೈಲಿಯ ನಾಚ್ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 48 ದಿನಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ.
ಭಾರತದಲ್ಲಿ ರಿಯಲ್‌ಮಿ C25Y ಸ್ಮಾರ್ಟ್‌ಫೋನ್ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ 10,999 ರೂ. ಹಾಗೂ 4GB RAM ಮತ್ತು 128 GB ಸ್ಟೋರೇಜ್ ರೂಪಾಂತರಕ್ಕೆ 11,999 ರೂ. ನಿಗದಿ ಮಾಡಲಾಗಿದೆ. ಇನ್ನು ಈ ಎರಡೂ ಮಾದರಿಗಳು ಗ್ಲೇಸಿಯರ್ ಬ್ಲೂ ಮತ್ತು ಮೆಟಲ್ ಗ್ರೇ ಕಲರ್ ಆಯ್ಕೆಗಳಲ್ಲಿ ಬರುತ್ತವೆ. ಈ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 20 ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮತ್ತು ರಿಯಲ್ ಮಿ. ಕಾಮ್ನಲ್ಲಿ ಪ್ರಿ-ಆರ್ಡರ್ ಆರಂಭವಾಗಲಿದೆ. ಇದು ಸೆಪ್ಟೆಂಬರ್ 27ರಂದು ಸೇಲ್ ಆಗಲಿದೆ.
Introducing the powerful #realmeC25Y with:
✅5000mAh Mega Battery ✅50MP AI Triple Camera ✅Unisoc T610 Powerful Processor & much more!
Starting from ₹10,999.
First Sale at 12 PM, 27th September.
Pre-booking starts at 12 PM on 20th September.https://t.co/dADbWnJfGh pic.twitter.com/ynP9tWC9tF
— realme (@realmeIndia) September 16, 2021
ರಿಯಲ್‌ಮಿ C25Y ಸ್ಮಾರ್ಟ್‌ಫೋನ್ 720×1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಯುನಿಸೋಕ್ T610 SoC ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ರಿಯಲ್‌ಮಿ ಆರ್ ಎಡಿಷನ್ ಇಂಟರ್ಫೇಸ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ರಿಯರ್ ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI ಬ್ಯೂಟಿ, HDR ಮೋಡ್, ಪನೋರಮಿಕ್ ವ್ಯೂ, ಪೋರ್ಟ್ರೇಟ್, ಫೀಚರ್ಸ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಬರೋಬ್ಬರಿ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಬ್ಯಾಟರಿ 48 ದಿನಗಳ ಸ್ಟ್ಯಾಂಡ್‌ಬೈ ನೀಡಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11 b/g/n, ಬ್ಲೂಟೂತ್ v5, GPS/A-GPS, ಮೈಕ್ರೋ- USB, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿದಂತೆ ಇತ್ತೀಚೆಗಿನ ಪ್ರಮುಖ ಆಯ್ಕೆಯನ್ನು ನೀಡಲಾಗಿದೆ.
Youtube: ಇನ್ಮುಂದೆ ಯಾವುದೇ ಭಾಷೆಯ ಕಮೆಂಟ್ಗಳನ್ನು ಕನ್ನಡದಲ್ಲೇ ಓದಿ: ಯೂಟ್ಯೂಬ್ನಿಂದ ಹೊಸ ಫೀಚರ್
Apple iPhone 13: ಇಂದಿನಿಂದ ಐಫೋನ್ 13 ಪ್ರೀ ಬುಕ್ಕಿಂಗ್ ಆರಂಭ: ಬೆಲೆ, ಆಫರ್ ಕುರಿತ ಎಲ್ಲ ಮಾಹಿತಿ ಇಲ್ಲಿದೆ
(Realme C25Y With 50MP Camera 48 days of standby time Launched in India Flipkart)