AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple iPhone 13: ಇಂದಿನಿಂದ ಐಫೋನ್ 13 ಪ್ರೀ ಬುಕ್ಕಿಂಗ್ ಆರಂಭ: ಬೆಲೆ, ಆಫರ್ ಕುರಿತ ಎಲ್ಲ ಮಾಹಿತಿ ಇಲ್ಲಿದೆ

Apple iPhone 13 Series Pre-Orders: ಸೆಪ್ಟೆಂಬರ್ 17 ಇಂದಿನಿಂದ ಐಫೋನ್ 13 ಸರಣಿಯ ಫೋನುಗಳು ಪ್ರೀ ಆರ್ಡರ್​ಗೆ ಲಭ್ಯವಾಗಲಿದೆ. ಸೆಪ್ಟೆಂಬರ್ 24 ರಿಂದ ಈ ಫೋನ್ ಸೇಲ್ ಕಾಣಲಿದೆ.

Apple iPhone 13: ಇಂದಿನಿಂದ ಐಫೋನ್ 13 ಪ್ರೀ ಬುಕ್ಕಿಂಗ್ ಆರಂಭ: ಬೆಲೆ, ಆಫರ್ ಕುರಿತ ಎಲ್ಲ ಮಾಹಿತಿ ಇಲ್ಲಿದೆ
Apple iPhone 13
Follow us
TV9 Web
| Updated By: Vinay Bhat

Updated on: Sep 17, 2021 | 12:50 PM

ಬಹುನಿರೀಕ್ಷಿತ ಆ್ಯಪಲ್ ಐಫೋನ್ 13 (iPhone 13) ಸರಣಿಯ ಫೋನುಗಳು ಸೆಪ್ಟೆಂಬರ್ 14 ರಂದು ಅನಾವರಣಗೊಂಡಿದ್ದು, ಮೊದಲ ಸೇಲ್​ಗಾಗಿ ಜನರು ಕಾಯುತ್ತಿದ್ದಾರೆ. ಐಫೋನ್ 13 ಸರಣಿಯು ಒಟ್ಟು ನಾಲ್ಕು ಐಫೋನ್‌ ಮಾಡೆಲ್‌ಗಳನ್ನು ಒಳಗೊಂಡಿದೆ. ಐಫೋನ್ 13, ಐಫೋನ್ 13 ಪ್ರೊ (iPhone 13 Pro), ಐಫೋನ್ 13 ಪ್ರೊ ಮ್ಯಾಕ್ಸ್‌ (iPhone 13 Pro Max) ಮತ್ತು ಐಫೋನ್ 13 ಮಿನಿ (iPhone 13 Mini) ಸ್ಮಾರ್ಟ್‌ಫೋನ್‌ಗಳನ್ನು ಆ್ಯಪಲ್ ಸಂಸ್ಥೆ ಬಿಡುಗಡೆ ಮಾಡಿದೆ. ಹೊಸ ಐಫೋನ್‌ 13 ಸರಣಿಯು ಸಾಕಷ್ಟು ಅಪಗ್ರೇಡ್‌ ಫೀಚರ್​ಗಳೊಂದಿಗೆ ಲಗ್ಗೆ ಹಾಕಿದ್ದು, ಡಿಸೈನ್, ಕ್ಯಾಮೆರಾ, ಬ್ಯಾಟರಿ ಆಯ್ಕೆಗಳು ಆಕರ್ಷಕ ಆಗಿ ಕಾಣಿಸಿಕೊಂಡಿವೆ. ಇಂದು ಈ ಫೋನಿನ ಪ್ರೀ ಬುಕ್ಕಿಂಗ್ (pre-order) ಆರಂಭವಾಗಲಿದೆ.

ಹೌದು, ಸೆಪ್ಟೆಂಬರ್ 17 ಇಂದಿನಿಂದ ಐಫೋನ್ 13 ಸರಣಿಯ ಫೋನುಗಳು ಪ್ರೀ ಆರ್ಡರ್​ಗೆ ಲಭ್ಯವಾಗಲಿದೆ. ಸೆಪ್ಟೆಂಬರ್ 24 ರಿಂದ ಈ ಫೋನ್ ಸೇಲ್ ಕಾಣಲಿದೆ. ಭಾರತದಲ್ಲಿ ಐಫೋನ್ 13 ಮಿನಿ 128GB ವೇರಿಯಂಟ್ ಬೆಲೆ 69,900 ರೂ. ಗಳಾದರೆ, 256GB ವೇರಿಯಂಟ್ ಬೆಲೆ 79.900 ರೂ, ಮತ್ತು 512GB ವೇರಿಯಂಟ್ ಬೆಲೆ 99,900 ರೂ.ಗಳಾಗಿವೆ. ಹಾಗೆಯೇ ಐಫೋನ್ 13 ಫೋನಿನ ಬೆಲೆಗಳು ಕ್ರಮವಾಗಿ 79,900 ರೂ, 89,900 ರೂ ಮತ್ತು 99,900 ರೂ ಗಳಾಗಿವೆ. ಇನ್ನು ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಎರಡೂ 1TB ವರೆಗೆ ಸ್ಟೋರೇಜ್ ಆಯ್ಕೆ ಪಡೆದಿವೆ. ಐಫೋನ್ 13 ಪ್ರೊ ಬೆಲೆ 128GBಗೆ 1,19,900 ರೂ., 256GBಗೆ 1,29,900 ರೂ., ರೂ. 512GBಗೆ 1,49,900 ರೂ. 1TBಗೆ 1,69,900 ಗಳಾಗಿವೆ. ಅಗ್ರ ಶ್ರೇಣಿಯ ಐಫೋನ್ 13 ಪ್ರೊ ಮ್ಯಾಕ್ಸ್ ಬೆಲೆ 1,29,900 ರೂ, 1,39,900 ರೂ, 1,59,900 ರೂ., ಮತ್ತು 1,79,900 ರೂ. ಆಗಿವೆ

ಈ ಪೈಕಿ ಐಫೋನ್ 13 ಮತ್ತು ಐಫೋನ್ 13 ಮಿನಿ ಮೇಲೆ ಹೆಚ್​ಡಿಎಫ್​ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುದಾರರಿಗೆ 6,000 ಕ್ಯಾಶ್​ಬ್ಯಾಕ್ ಆಫರ್ ನೀಡಲಾಗಿದೆ. ಇನ್ನೂ ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಮೇಲೆ ಹೆಚ್​ಡಿಎಫ್​ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುದಾರರು 5,000 ರೂ. ವರೆಗೆ ಕ್ಯಾಶ್​ಬ್ಯಾಕ್ ಪಡೆಯಬಹುದು. ಐಫೋನ್ 13 ಸರಣಿಗಳ ಪ್ರೀ ಬುಕ್ಕಿಂಗ್ ಇಂದು ಸಂಜೆ ಸಂಜೆ 5:30 ರಿಂದ ಶುರುವಾಗಲಿದೆ. ಆ್ಯಪಲ್ ಕಂಪೆನಿಯ ಅಧಿಕೃತ ವೆಬ್​ಸೈಟ್ ಸೇರಿದಂತೆ ಇ ಕಾಮರ್ಸ್ ತಾಣ ಮತ್ತು ಆಯ್ದ ರಿಟೇಲ್ ಸ್ಟೋರ್​ಗಳಲ್ಲು ಬುಕ್ ಮಾಡಬಹುದು.

ಏನು ವಿಶೇಷತೆ?:

ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ.

ಐಫೋನ್ 13 ಮಿನಿ ಫೋನ್‌ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್‌ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್‌ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ.

ಐಫೋನ್ 13 ಪ್ರೊ ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದುದೆ.

ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತಮ ರೆಸಲ್ಯೂಶನ್ ಪಡೆದಿದೆ. ಈ ಫೋನ್ ಸಹ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ.

Amazon Quiz: ಅಮೆಜಾನ್​ನ ಈ 5 ಪ್ರಶ್ನೆಗಳಿಗೆ ಉತ್ತರಿಸಿದ್ರೆ ಸಿಗುತ್ತೆ 20 ಸಾವಿರ ರೂ.

Samsung Galaxy M52 5G: ಸ್ಯಾಮ್​ಸಂಗ್​ನಿಂದ ಬರೋಬ್ಬರಿ 7000mAh ಬ್ಯಾಟರಿಯ ಮತ್ತೊಂದು ಸ್ಮಾರ್ಟ್​ಫೋನ್

(Apple iPhone 13 iPhone 13 Mini iPhone 13 Pro and iPhone 13 Pro Max go on pre-orders in India today)

ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?