iPhone 13: ಹೊಸ ಐಫೋನ್ 13 ಮೊದಲ ಸೇಲ್​ ಮುನ್ನವೇ ಆಫರ್​ಗಳು ಬಿಡುಗಡೆ: ಕಂಪೆನಿಯಿಂದ ಬಂಪರ್ ಡಿಸ್ಕೌಂಟ್

Apple iPhone 13 Series: ಸೆಪ್ಟೆಂಬರ್ 17 ರಿಂದ ಐಫೋನ್ 13 ಸರಣಿಯ ಫೋನುಗಳು ಪ್ರೀ ಆರ್ಡರ್​ಗೆ ಲಭ್ಯವಾಗಲಿದೆ. ಮೂಲಗಳ ಪ್ರಕಾರ ಸೆಪ್ಟೆಂಬರ್ 24 ರಿಂದ ಸೇಲ್ ಕಾಣಲಿದೆ ಎನ್ನಲಾಗಿದೆ.

iPhone 13: ಹೊಸ ಐಫೋನ್ 13 ಮೊದಲ ಸೇಲ್​ ಮುನ್ನವೇ ಆಫರ್​ಗಳು ಬಿಡುಗಡೆ: ಕಂಪೆನಿಯಿಂದ ಬಂಪರ್ ಡಿಸ್ಕೌಂಟ್
Apple iPhone 13
Follow us
TV9 Web
| Updated By: Vinay Bhat

Updated on: Sep 16, 2021 | 2:41 PM

ಬಹುನಿರೀಕ್ಷಿತ ಆ್ಯಪಲ್ ಐಫೋನ್ 13 (iPhone 13) ಸರಣಿಯ ಫೋನುಗಳು ಸೆಪ್ಟೆಂಬರ್ 14 ರಂದು ಅನಾವರಣಗೊಂಡಿದ್ದು, ಮೊದಲ ಸೇಲ್​ಗಾಗಿ ಜನರು ಕಾಯುತ್ತಿದ್ದಾರೆ. ಐಫೋನ್ 13 ಸರಣಿಯು ಒಟ್ಟು ನಾಲ್ಕು ಐಫೋನ್‌ ಮಾಡೆಲ್‌ಗಳನ್ನು ಒಳಗೊಂಡಿದೆ. ಐಫೋನ್ 13, ಐಫೋನ್ 13 ಪ್ರೊ (iPhone 13 Pro), ಐಫೋನ್ 13 ಪ್ರೊ ಮ್ಯಾಕ್ಸ್‌ (iPhone 13 Pro Max) ಮತ್ತು ಐಫೋನ್ 13 ಮಿನಿ (iPhone 13 Mini) ಸ್ಮಾರ್ಟ್‌ಫೋನ್‌ಗಳನ್ನು ಆ್ಯಪಲ್ ಸಂಸ್ಥೆ ಬಿಡುಗಡೆ ಮಾಡಿದೆ. ಹೊಸ ಐಫೋನ್‌ 13 ಸರಣಿಯು ಸಾಕಷ್ಟು ಅಪಗ್ರೇಡ್‌ ಫೀಚರ್​ಗಳೊಂದಿಗೆ ಲಗ್ಗೆ ಹಾಕಿದ್ದು, ಡಿಸೈನ್, ಕ್ಯಾಮೆರಾ, ಬ್ಯಾಟರಿ ಆಯ್ಕೆಗಳು ಆಕರ್ಷಕ ಆಗಿ ಕಾಣಿಸಿಕೊಂಡಿವೆ. ಕೆಲವೇ ದಿನಗಳಲ್ಲಿ ಈ ಫೋನ್ ಮೊದಲ ಸೇಲ್ ಕಾಣಲಿದೆ. ಆದರೆ, ಇದಕ್ಕೂ ಮುನ್ನ ಖರೀದಿದಾರರಿಗೆ ಐಫೋನ್ 13 ಮೇಲಿನ ಆಫರ್​ಗಳು ಬಹಿರಂಗಗೊಂಡಿದೆ.

ಸೆಪ್ಟೆಂಬರ್ 17 ರಿಂದ ಐಫೋನ್ 13 ಸರಣಿಯ ಫೋನುಗಳು ಪ್ರೀ ಆರ್ಡರ್​ಗೆ ಲಭ್ಯವಾಗಲಿದೆ. ಮೂಲಗಳ ಪ್ರಕಾರ ಸೆಪ್ಟೆಂಬರ್ 24 ರಿಂದ ಸೇಲ್ ಕಾಣಲಿದೆ ಎನ್ನಲಾಗಿದೆ. ಭಾರತದಲ್ಲಿ ಐಫೋನ್ 13 ಮಿನಿ 128GB ವೇರಿಯಂಟ್ ಬೆಲೆ 69,900 ರೂ. ಗಳಾದರೆ, 256GB ವೇರಿಯಂಟ್ ಬೆಲೆ 79.900 ರೂ, ಮತ್ತು 512GB ವೇರಿಯಂಟ್ ಬೆಲೆ 99,900 ರೂ.ಗಳಾಗಿವೆ. ಹಾಗೆಯೇ ಐಫೋನ್ 13 ಫೋನಿನ ಬೆಲೆಗಳು ಕ್ರಮವಾಗಿ 79,900 ರೂ, 89,900 ರೂ ಮತ್ತು 99,900 ರೂ ಗಳಾಗಿವೆ. ಇನ್ನು ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಎರಡೂ 1TB ವರೆಗೆ ಸ್ಟೋರೇಜ್ ಆಯ್ಕೆ ಪಡೆದಿವೆ. ಐಫೋನ್ 13 ಪ್ರೊ ಬೆಲೆ 128GBಗೆ 1,19,900 ರೂ., 256GBಗೆ 1,29,900 ರೂ., ರೂ. 512GBಗೆ 1,49,900 ರೂ. 1TBಗೆ 1,69,900 ಗಳಾಗಿವೆ. ಅಗ್ರ ಶ್ರೇಣಿಯ ಐಫೋನ್ 13 ಪ್ರೊ ಮ್ಯಾಕ್ಸ್ ಬೆಲೆ 1,29,900 ರೂ, 1,39,900 ರೂ, 1,59,900 ರೂ., ಮತ್ತು 1,79,900 ರೂ. ಆಗಿವೆ

ಈ ಪೈಕಿ ಐಫೋನ್ 13 ಮತ್ತು ಐಫೋನ್ 13 ಮಿನಿ ಮೇಲೆ ಹೆಚ್​ಡಿಎಫ್​ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುದಾರರಿಗೆ 6,000 ಕ್ಯಾಶ್​ಬ್ಯಾಕ್ ಆಫರ್ ನೀಡಲಾಗಿದೆ. ಇನ್ನೂ ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಮೇಲೆ ಹೆಚ್​ಡಿಎಫ್​ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುದಾರರು 5,000 ರೂ. ವರೆಗೆ ಕ್ಯಾಶ್​ಬ್ಯಾಕ್ ಪಡೆಯಬಹುದು. ಐಫೋನ್ 13 ಸರಣಿಗಳ ಪ್ರೀ ಬುಕ್ಕಿಂಗ್ ಸೆಪ್ಟೆಂಬರ್ 17 ಸಂಜೆ 5:30 ರಿಂದ ಶುರುವಾಗಲಿದೆ.

ಏನು ವಿಶೇಷತೆ?:

ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ.

ಐಫೋನ್ 13 ಮಿನಿ ಫೋನ್‌ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್‌ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್‌ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ.

ಐಫೋನ್ 13 ಪ್ರೊ ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದುದೆ.

ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತಮ ರೆಸಲ್ಯೂಶನ್ ಪಡೆದಿದೆ. ಈ ಫೋನ್ ಸಹ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ.

WhatsApp: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಹೊಸ ಫೀಚರ್: ಸ್ಥಳೀಯ ವ್ಯವಹಾರಗಳು ಮತ್ತಷ್ಟು ಸುಲಭ

Google Pixel 6: ಆಲೂ ಚಿಪ್ಸ್ ಮಾರಾಟ ಮಾಡುತ್ತಿರುವ ಗೂಗಲ್: ಏತಕ್ಕಾಗಿ ಗೊತ್ತೇ?

(iPhone 13 iPhone 13 mini iPhone 13 Pro and iPhone 13 Pro Max go on sale in India with huge discount)

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ