WhatsApp: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಹೊಸ ಫೀಚರ್: ಸ್ಥಳೀಯ ವ್ಯವಹಾರಗಳು ಮತ್ತಷ್ಟು ಸುಲಭ

ಇದರ ಬಗ್ಗೆ ವಾಟ್ಸ್​ಆ್ಯಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾವು ವಾಟ್ಸ್​ಆ್ಯಪ್​​ನಲ್ಲಿ ಸ್ಥಳೀಯ ವ್ಯಾಪಾರ ಡೈರೆಕ್ಟರಿಯನ್ನು ಪ್ರಾಯೋಗಿಕವಾಗಿ ಆರಂಭಿಸುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

WhatsApp: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಹೊಸ ಫೀಚರ್: ಸ್ಥಳೀಯ ವ್ಯವಹಾರಗಳು ಮತ್ತಷ್ಟು ಸುಲಭ
WhatsApp
Follow us
TV9 Web
| Updated By: Vinay Bhat

Updated on: Sep 16, 2021 | 1:41 PM

ಬಳಕೆದಾರರಿಗೆ ಸದಾ ಒಂದಲ್ಲಾ ಒಂದು ಹೊಸ ಹೊಸ ಫೀಚರ್​ಗಳನ್ನು ನೀಡುತ್ತಿರುವ ಫೇಸ್​ಬುಕ್ (Facebook) ಒಡೆತನದ ವಾಟ್ಸ್​ಆ್ಯಪ್ (WhatsApp)​ ಮುಂದಿನ ದಿನಗಳಲ್ಲಿ ಸಾಲು ಸಾಲು ಅಪ್ಡೇಟ್​ಗಳನ್ನು ನೀಡುತ್ತಿದೆ. ವಾಟ್ಸ್​ಆ್ಯಪ್​ನಲ್ಲೇ ಫೋಟೋ ಎಡಿಟಿಂಗ್, ವಾಯ್ಸ್ ಮೆಸೇಜ್ ಕಳುಹಿಸುವ ಮುನ್ನ ಕೇಳುವ ಆಯ್ಕೆ, ಲಾಗೌಟ್ ಫೀಚರ್, ಸ್ಟೇಟಸ್​ನಂತೆ ಪ್ರೊಫೈಲ್ ಪೋಟೋ ಕೂಡ ಕೆಲವರಿಗೆ ಮಾತ್ರ ಕಾಣಿಸುವಂತಹ ಆಯ್ಕೆ ಹೀಗೆ ಅನೇಕ ಹೊಸ ಹೊಸ ಫೀಚರ್​ಗಳು ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಎಲ್ಲ ಬಳಕೆದಾರರಿಗೆ ಸಿಗಲಿದೆ. ಇದರ ನಡುವೆ ಸದ್ಯ ಸಣ್ಣ ಮತ್ತು ದೊಡ್ಡ ಪ್ರಮಾಣದ ವ್ಯಾಪಾರಿಗಳಿಗೆ ಅನುಕೂಲವಾಗುವ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ವಾಟ್ಸ್​ಆ್ಯಪ್​ನ ಈ ಫೀಚರ್ಸ್‌ ಬಳಸಿ ನಿಮಗೆ ಬೇಕಾದ ಉತ್ಪನ್ನಗಳು ಎಲ್ಲಿ ಸಿಗುತ್ತವೆ, ನೀವು ಬಯಸುವ ಸ್ಟೋರ್‌ ಎಲ್ಲಿದೆ ಎಂದು ಸರ್ಚ್‌ ಮಾಡುವುದಕ್ಕೆ ಸಹಾಯ ಮಾಡಲಿದೆ.

ಇದರ ಬಗ್ಗೆ ವಾಟ್ಸ್​ಆ್ಯಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾವು ವಾಟ್ಸ್​ಆ್ಯಪ್​​ನಲ್ಲಿ ಸ್ಥಳೀಯ ವ್ಯಾಪಾರ ಡೈರೆಕ್ಟರಿಯನ್ನು ಪ್ರಾಯೋಗಿಕವಾಗಿ ಆರಂಭಿಸುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಇದು ನಿಮ್ಮ ನೆರೆಹೊರೆಯ ಕಾಫಿ ಶಾಪ್, ಸೇರಿದಂತೆ ಇತರೆ ಸ್ಥಳೀಯ ವ್ಯವಹಾರಗಳನ್ನು ಸರ್ಚ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ಈ ಹೊಸ ಫೀಚರ್ಸ್‌ ಮೂಲಕ ವಾಟ್ಸ್​ಆ್ಯಪ್​​ನಲ್ಲಿ ಜನರು ವಾಣಿಜ್ಯ ಪ್ರಕ್ರಿಯೆಯನ್ನು ಆರಂಭಿಸುವುದಕ್ಕೆ ಸಹಾಯವಾಗಲಿದೆ. ಇದರಿಂದ ಸಣ್ಣ ಪ್ರಮಾಣದ ವ್ಯವಹಾರಗಳು ಬೆಳೆಯಲು ಸಹಾಯ ಮಾಡಲಿದೆ. ಸದ್ಯ ಈ ಫೀಚರ್ಸ್‌ ಬ್ರೇಜಿಲ್‌ನಲ್ಲಿ ಪರಿಚಯಿಸುವ ಸಾಧ್ಯತೆ ಇದೆ. ಭಾರತೀಯ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ವ್ಯಾಪಾರಗಳು ಆಹಾರ, ಚಿಲ್ಲರೆ ವ್ಯಾಪಾರ ಮತ್ತು ಸ್ಥಳೀಯ ಸೇವೆಗಳಂತಹ ಕೆಲವು ಸಾವೊ ಪಾಲೊ ನೆರೆಹೊರೆಗಳಲ್ಲಿ ಒಳಗೊಂಡಿರುತ್ತವೆ ಎಂದು ವಾಟ್ಸ್​ಆ್ಯಪ್​​ ಬಹಿರಂಗಪಡಿಸಿದೆ.

ಇನ್ನೂ ವಾಟ್ಸ್ಆ್ಯಪ್ ಭಾರತದಲ್ಲಿ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಫೀಚರ್ ಪರಿಚಯಿಸುವ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. ವಾಬೇಟಾ ಇನ್ಫೋ ವರದಿ ಪ್ರಕಾರ, ವಾಟ್ಸ್ಆ್ಯಪ್ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಟ್ರಾನ್ಸ್​ಕ್ರಿಪ್ಶನ್ ಎಂಬ ಫೀಚರ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹೊಸ ವೈಶಿಷ್ಟ್ಯವು ಹೊಸತನದಿಂದ ಕೂಡಿದೆ ಎಂದಿದೆ.

ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಫೀಚರ್​ನಲ್ಲಿ ಬಳಕೆದಾರರಿಗೆ ಧ್ವನಿ ಸಂದೇಶದ ವಿಷಯವನ್ನು ಓದಬಲ್ಲ ರೂಪದಲ್ಲಿ ನೀಡುತ್ತದೆ. ಅಂದರೆ ಇದು ಇದು ಪಠ್ಯ ರೂಪದಲ್ಲಿ ಸಿಗಲಿದೆ. ಈ ಫೀಚರ್ ಅನ್ನು ಆಯ್ಕೆಯ ಆಧಾರ ಮೇಲೆ ನೀಡಲಾಗುತ್ತದೆ. ಅಂದರೆ ಈ ಫೀಚರ್ ಟ್ರಾನ್ಸ್​ಕ್ರಿಪ್ಶನ್ ಮಾಡಲು ಅನುಮತಿಸಿದಾಗ ಮಾತ್ರ ಸೇವೆ ಸಿಗಲಿದೆ. ವಾಟ್ಸ್ಆ್ಯಪ್ ಕ್ಯಾಮೆರಾ, ಮೈಕ್ರೋಫೋನ್​ಗೆ ಅನುಮತಿ ನೀಡಿದಂತೆ ಇದಕ್ಕೂ ಅನುಮತಿ ಕೇಳುತ್ತದೆ.

Google Pixel 6: ಆಲೂ ಚಿಪ್ಸ್ ಮಾರಾಟ ಮಾಡುತ್ತಿರುವ ಗೂಗಲ್: ಏತಕ್ಕಾಗಿ ಗೊತ್ತೇ?

Jio: 3GB ಡೇಟಾ ಸಿಗುವ ಅತೀ ಕಡಿಮೆ ಬೆಲೆಯ ರಿಚಾರ್ಜ್​ ಪ್ಲ್ಯಾನ್​ ಪರಿಚಯಿಸಿದ ಜಿಯೋ

(WhatsApps This new feature will help small and large-scale businesses bloom)

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​