WhatsApp: ವಾವ್… ವಾಟ್ಸ್​ಆ್ಯಪ್​ನಲ್ಲಿ ಸದ್ಯದಲ್ಲೇ ಬರಲಿದೆ ಊಹಿಸಲಾಗದ ವಿಶೇಷ ಫೀಚರ್

ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಫೀಚರ್​ನಲ್ಲಿ ಬಳಕೆದಾರರಿಗೆ ಧ್ವನಿ ಸಂದೇಶದ ವಿಷಯವನ್ನು ಓದಬಲ್ಲ ರೂಪದಲ್ಲಿ ನೀಡುತ್ತದೆ.

WhatsApp: ವಾವ್… ವಾಟ್ಸ್​ಆ್ಯಪ್​ನಲ್ಲಿ ಸದ್ಯದಲ್ಲೇ ಬರಲಿದೆ ಊಹಿಸಲಾಗದ ವಿಶೇಷ ಫೀಚರ್
WhatsApp
Follow us
TV9 Web
| Updated By: Vinay Bhat

Updated on: Sep 12, 2021 | 11:46 AM

ಬಳಕೆದಾರರಿಗೆ ಸದಾ ಒಂದಲ್ಲಾ ಒಂದು ಹೊಸ ಹೊಸ ಫೀಚರ್​ಗಳನ್ನು ನೀಡುತ್ತಿರುವ ಫೇಸ್​ಬುಕ್ (Facebook) ಒಡೆತನದ ವಾಟ್ಸ್​ಆ್ಯಪ್ (WhatsApp)​ ಮುಂದಿನ ದಿನಗಳಲ್ಲಿ ಸಾಲು ಸಾಲು ಅಪ್ಡೇಟ್​ಗಳನ್ನು ನೀಡುತ್ತಿದೆ. ವಾಟ್ಸ್​ಆ್ಯಪ್​ನಲ್ಲೇ ಫೋಟೋ ಎಡಿಟಿಂಗ್, ವಾಯ್ಸ್ ಮೆಸೇಜ್ ಕಳುಹಿಸುವ ಮುನ್ನ ಕೇಳುವ ಆಯ್ಕೆ, ಲಾಗೌಟ್ ಫೀಚರ್, ಸ್ಟೇಟಸ್​ನಂತೆ ಪ್ರೊಫೈಲ್ ಪೋಟೋ ಕೂಡ ಕೆಲವರಿಗೆ ಮಾತ್ರ ಕಾಣಿಸುವಂತಹ ಆಯ್ಕೆ ಹೀಗೆ ಅನೇಕ ಹೊಸ ಹೊಸ ಫೀಚರ್​ಗಳು ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಎಲ್ಲ ಬಳಕೆದಾರರಿಗೆ ಸಿಗಲಿದೆ. ಇದರ ನಡುವೆ ಸದ್ಯ ವಾಟ್ಸ್​ಆ್ಯಪ್ ಮತ್ತೊಂದು ಹೊಸ ಅಪ್ಡೇಟ್ (Update) ನೀಡಲು ಮುಂದಾಗಿದೆ. ಅದುವೇ ವಾಯ್ಸ್ ಟ್ರಾನ್ಸ್​​ಕ್ರಿಪ್ಶನ್ ಫೀಚರ್.

ಹೌದು, ಇದೀಗ ವಾಟ್ಸ್ಆ್ಯಪ್ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಫೀಚರ್ ಪರಿಚಯಿಸುವ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. ವಾಬೇಟಾ ಇನ್ಫೋ ವರದಿ ಪ್ರಕಾರ, ವಾಟ್ಸ್ಆ್ಯಪ್ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಟ್ರಾನ್ಸ್​ಕ್ರಿಪ್ಶನ್ ಎಂಬ ಫೀಚರ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹೊಸ ವೈಶಿಷ್ಟ್ಯವು ಹೊಸತನದಿಂದ ಕೂಡಿದೆ ಎಂದಿದೆ.

ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಫೀಚರ್​ನಲ್ಲಿ ಬಳಕೆದಾರರಿಗೆ ಧ್ವನಿ ಸಂದೇಶದ ವಿಷಯವನ್ನು ಓದಬಲ್ಲ ರೂಪದಲ್ಲಿ ನೀಡುತ್ತದೆ. ಅಂದರೆ ಇದು ಇದು ಪಠ್ಯ ರೂಪದಲ್ಲಿ ಸಿಗಲಿದೆ. ಈ ಫೀಚರ್ ಅನ್ನು ಆಯ್ಕೆಯ ಆಧಾರ ಮೇಲೆ ನೀಡಲಾಗುತ್ತದೆ. ಅಂದರೆ ಈ ಫೀಚರ್ ಟ್ರಾನ್ಸ್​ಕ್ರಿಪ್ಶನ್ ಮಾಡಲು ಅನುಮತಿಸಿದಾಗ ಮಾತ್ರ ಸೇವೆ ಸಿಗಲಿದೆ. ವಾಟ್ಸ್ಆ್ಯಪ್ ಕ್ಯಾಮೆರಾ, ಮೈಕ್ರೋಫೋನ್​ಗೆ ಅನುಮತಿ ನೀಡಿದಂತೆ ಇದಕ್ಕೂ ಅನುಮತಿ ಕೇಳುತ್ತದೆ.

ಮಾಹಿತಿ ಪ್ರಕಾರ ವಾಟ್ಸ್ಆ್ಯಪ್ ಬಳಕೆದಾರರ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಅನ್ನು ಫೇಸ್​ಬುಕ್ ಸರ್ವರ್​ಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ. ಕೇವಲ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವಲ್ಲದೆ ಐಫೊನ್ ಬಳಕೆದಾರರಿಗೂ ಈ ಸೇವೆ ಸಿಗಲಿದೆ. ಧ್ವನಿ ಸಂದೇಶ ಲಿಪ್ಯಾಂತರ ಮಾಡುವುದು, ಭಾಷಣವನ್ನು ಗುರುತಿಸುವ ಸೇವೆಯನ್ನು ಒದಗಿಸಲಿದೆ. ಇದು ಬಳಕೆದಾರರಿಗೆ ಹೆಚ್ಚು ಸಹಾಯಕವಾಗಲಿದೆ.

ಸದ್ಯಕ್ಕೆ iOS ಆಧಾರಿತ ಆ್ಯಪ್ ಗಾಗಿ ಈ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಪಠ್ಯ ನವೀಕರಣದೊಂದಿಗೆ ಬೀಟಾ ಪರೀಕ್ಷಕರಿಗೆ ಸಿಗಲಿದೆ. ಆಂಡ್ರಾಯ್ಡ್ ಆ್ಯಪ್​ಗೆ ವಾಟ್ಸ್ಆ್ಯಪ್​ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಫೀಚರ್ ಯಾವಾಗ ಲಭ್ಯವಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಸದ್ಯದಲ್ಲೇ ಈ ಫೀಚರ್ ನೀಡಲಿದೆ ಎಂದು ಹೇಳಲಾಗಿದೆ.

ಇನ್ನೂ ಖಾಸಗಿತನ ಅಥವಾ ಗೌಪ್ಯತೆ ಹಾಗೂ ಭದ್ರತೆಗೆ ಹೆಚ್ಚಿನ ಮಹತ್ವ ನೀಡುವ ವಾಟ್ಸ್​ಆ್ಯಪ್ ಇದಕ್ಕೆ ಸಂಬಂಧ ಪಟ್ಟಂತೆ ತನ್ನ ಚಾಟ್ ಬ್ಯಾಕಪ್‌ಗಳಿಗೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಸೇರಿಸಲು ಮುಂದಾಗಿದೆ. ವಾಟ್ಸ್​ಆ್ಯಪ್ ಈಗಾಗಲೇ ಎಲ್ಲಾ ಸಂದೇಶಗಳು ಮತ್ತು ಕರೆಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ. ಆದರೆ, ಗೂಗಲ್ ಡ್ರೈವ್‌ಗೆ ಮಾಡಿದ ಬ್ಯಾಕಪ್‌ಗಳಿಗೆ ಎನ್‌ಕ್ರಿಪ್ಟ್ ಇರಲಿಲ್ಲ. ಇದರಿಂದ, ಆ ಸಂದೇಶಗಳನ್ನು ಗೂಗಲ್ ಮತ್ತು ಆ ಕಂಪನಿಯ ಉದ್ಯೋಗಿಗಳು ನೋಡಬಹುದಾಗಿತ್ತು. ಸದ್ಯ ಇದನ್ನು ಬದಲಾಯಿಸಲು, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ (E2EE) ಬ್ಯಾಕಪ್‌ಗಳನ್ನು ರಚಿಸುವ ಆಯ್ಕೆಯನ್ನು ಸೇರಿಸುವುದಾಗಿ ಘೋಷಣೆ ಮಾಡಿದೆ.

Jio: IPL​ ಗಾಗಿ ಉಚಿತ ಹಾಟ್​ಸ್ಟಾರ್ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ ಜಿಯೋ

ಅಂಡ್ರಾಯ್ಡ್ ಬಳಕೆದಾರರೇ ಎಚ್ಚರ! 19 ಸಾವಿರಕ್ಕೂ ಹೆಚ್ಚು ಆ್ಯಪ್​ಗಳಲ್ಲಿದೆ ನ್ಯೂನತೆ

(WhatsApp New Update WhatsApp is working on a host of new voice transcription feature)