ಅಂಡ್ರಾಯ್ಡ್ ಬಳಕೆದಾರರೇ ಎಚ್ಚರ! 19 ಸಾವಿರಕ್ಕೂ ಹೆಚ್ಚು ಆ್ಯಪ್ಗಳಲ್ಲಿದೆ ನ್ಯೂನತೆ
Alert for android users: ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ, ಬಳಕೆದಾರರ ವಿಮರ್ಶೆಗಳನ್ನು ಓದಿ. ನಿಮ್ಮ ಮೊಬೈಲ್ ಫೋನ್‌ನಲ್ಲಿ ಉತ್ತಮ ಮತ್ತು ವಿಶ್ವಾಸಾರ್ಹ ಅ್ಯಂಟಿ-ವೈರಸ್ ಸಾಫ್ಟ್‌ವೇರ್ ಬಳಸಿ ಎಂದು ಡಿಜಿಟಲ್ ಸೆಕ್ಯುರಿಟಿ ಕಂಪನಿ ಅವಾಸ್ಟ್ ತಿಳಿಸಿದೆ.
ಗೂಗಲ್ ಪ್ಲೇ ಸ್ಟೋರ್ (Google Play Store) ಅಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಅತ್ಯಂತ ಸುರಕ್ಷಿತ ಮೂಲವೆಂದು ಪರಿಗಣಿಸಲಾಗಿದೆ. ಆದರೆ ನಿಮ್ಮ ಮೊಬೈಲ್ ಭದ್ರತೆಯನ್ನು ಅಪಾಯಕ್ಕೆ ತಳ್ಳುವಂತಹ ಹಲವು ಆ್ಯಪ್‌ಗಳು ಪ್ಲೇ ಸ್ಟೋರ್ನಲ್ಲೇ ಇದೆ ಎಂಬ ವಿಚಾರ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಗೂಗಲ್ ತನ್ನ ಆ್ಯಪ್ ಸ್ಟೋರ್ ಅನ್ನು ಪರಿಶೀಲಿಸಲು ಕ್ರಮಕೈಗೊಳ್ಳುತ್ತಿದೆ. ಇತ್ತೀಚೆಗಷ್ಟೇ ಪ್ಲೇ ಸ್ಟೋರ್‌ನಲ್ಲಿರುವ ಕೆಲವು ಅಪಾಯಕಾರಿ ಆ್ಯಪ್‌ಗಳನ್ನು ಗೂಗಲ್ ನಿಷೇಧಿಸಿತ್ತು. ಬಳಕೆದಾರರನ್ನು ಬಲೆಗೆ ಬೀಳಿಸಲು ಮತ್ತು ವೈಯಕ್ತಿಕ ವಿವರಗಳನ್ನು ಕದಿಯಲು ಈ ಆ್ಯಪ್‌ಗಳನ್ನು ಹ್ಯಾಕರ್‌ಗಳು ಬಳಸುತ್ತಿದ್ದರು. ಅಂತಹ ಆ್ಯಪ್‌ಗಳನ್ನು ಗೂಗಲ್ ಡಿಲೀಟ್ ಮಾಡಿದರೂ, ಮತ್ತಷ್ಟು ಅಪಾಯಕಾರಿ ಆ್ಯಪ್‌ಗಳು ಪ್ಲೇ ಸ್ಟೋರ್ನಲ್ಲಿದೆ ಎಂದು ಡಿಜಿಟಲ್ ಸೆಕ್ಯುರಿಟಿ ಕಂಪನಿ ಅವಾಸ್ಟ್ ಎಚ್ಚರಿಸಿದೆ.
ಡಿಜಿಟಲ್ ಸೆಕ್ಯುರಿಟಿ ಕಂಪನಿ ಅವಾಸ್ಟ್, ಇತ್ತೀಚೆಗೆ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವಂತಹ ಸಮಸ್ಯೆಗಳಿರುವ 19,000 ಆ್ಯಪ್‌ಗಳನ್ನು ಪ್ಲೇಸ್ಟೋರ್ನಲ್ಲಿ ಪತ್ತೆ ಹಚ್ಚಿದೆ. ಈ ಆ್ಯಪ್ಗಳಲ್ಲಿ ಹಲವು ನ್ಯೂನತೆಗಳಿದ್ದು, ಇದರಿಂದ ಹ್ಯಾಕರುಗಳು ಸುಲಭವಾಗಿ ಬಳಕೆದಾರರ ಮಾಹಿತಿ ಕಲೆಹಾಕಬಹುದು ಎಂದು ತಿಳಿಸಿದೆ.
ಬಳಕೆದಾರರ ಡೇಟಾದ ಫೈರ್‌ಬೇಸ್ ತಪ್ಪಾದ ಕಾನ್ಫಿಗರೇಶನ್‌ನಿಂದಾಗಿ 19,300 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಹ್ಯಾಕರುಗಳು ಸುಲಭವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬಹುದು. ಹೀಗಾಗಿ ಅಂಡ್ರಾಯ್ಡ್ ಆ್ಯಪ್ ಬಳಕೆದಾರರು ಎಚ್ಚರದಿಂದ ಇರುವಂತೆ ಅವಾಸ್ಟ್ ತಿಳಿಸಿದೆ.
ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿಡಿ … >> ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಪರಿಶೀಲಿಸದೆ ಡೌನ್‌ಲೋಡ್ ಮಾಡಬೇಡಿ. ಅಪ್ಲಿಕೇಶನ್‌ಗಳಲ್ಲಿ ನೀಡಿರುವ ವಿವರಗಳನ್ನು ಎಚ್ಚರಿಕೆಯಿಂದ ಓದಿ.
>> ಅಸುರಕ್ಷಿತ ಅಪ್ಲಿಕೇಶನ್‌ಗಳು ಒಂದು ಅಥವಾ ಎರಡು ಕಾಗುಣಿತ ತಪ್ಪುಗಳನ್ನು ಹೊಂದಿರಬಹುದು.
>> ಆಫರ್‌ಗಳು ಅಥವಾ ಬಹುಮಾನಗಳನ್ನು ನೀಡುವ ಅಪ್ಲಿಕೇಶನ್‌ಗಳನ್ನು ನಂಬಬೇಡಿ.
>> ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ, ಬಳಕೆದಾರರ ವಿಮರ್ಶೆಗಳನ್ನು ಓದಿ. ನಿಮ್ಮ ಮೊಬೈಲ್ ಫೋನ್‌ನಲ್ಲಿ ಉತ್ತಮ ಮತ್ತು ವಿಶ್ವಾಸಾರ್ಹ ಅ್ಯಂಟಿ-ವೈರಸ್ ಸಾಫ್ಟ್‌ವೇರ್ ಬಳಸಿ ಎಂದು ಡಿಜಿಟಲ್ ಸೆಕ್ಯುರಿಟಿ ಕಂಪನಿ ಅವಾಸ್ಟ್ ತಿಳಿಸಿದೆ.
ಇದನ್ನೂ ಓದಿ: 16 ಸಿಕ್ಸರ್, 4 ಫೋರ್: ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಜಸ್ಕರನ್
ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ
ಇದನ್ನೂ ಓದಿ: Crime News: ಯುವತಿಗೆ ಡ್ರಾಪ್ ಕೊಡಲು ಬೈಕ್ ನಿಲ್ಲಿಸಿದ ಯುವಕ: ಆಮೇಲೆ ಆಗಿದ್ದೇ ಬೇರೆ!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
(Alert for android users more than 19 thousand apps found with vulnerablities)