AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JIO: ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಎರಡು ಆಕರ್ಷಕ ಪ್ಲಾನ್ ದಿಢೀರ್ ಸ್ಥಗಿತ

Reliance Jio: ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭ ಬಳಕೆದಾರರಿಗೆ ನೆರವಾಗಲು ಜಿಯೋ ಈ ಪ್ಲಾನ್ ಅನ್ನು ಪರಿಚಯಿಸಿತ್ತು. ಇದರ ಜೊತೆಗೆ ಜಿಯೋಫೋನ್ ಗ್ರಾಹಕರಿಗೆ ರಿಲಯನ್ಸ್ ಜಿಯೋ '1 ಖರೀದಿಸಿ 1 ಉಚಿತ ಪಡೆಯಿರಿ' ಆಫರ್ ನಲ್ಲಿ ಈ ಎರಡು ಪ್ಲಾನ್‌ಗಳು ಲಭ್ಯ ಇರುವುದಿಲ್ಲ.

JIO: ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಎರಡು ಆಕರ್ಷಕ ಪ್ಲಾನ್ ದಿಢೀರ್ ಸ್ಥಗಿತ
Reliance JIO
TV9 Web
| Edited By: |

Updated on: Sep 11, 2021 | 3:13 PM

Share

ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್‌ ಜಿಯೋ (Reliance Jio) ಈಗಾಗಲೇ ಹಲವು ಆಕರ್ಷಕ ಆಫರ್​ಗಳಿಂದ ಗಮನ ಸೆಳೆದಿವೆ. ದಿನಕಳೆದಂತೆ ತನ್ನ ಗ್ರಾಹಕರ ಪಟ್ಟಿಯಲ್ಲಿ ಏರಿಸುತ್ತಿರುವ ಜಿಯೋ ಆಗಸದೆತ್ತರಕ್ಕೆ ಬೆಳೆಯುತ್ತಿದೆ. ಇದರ ನಡುವೆ ತನ್ನ ಬಳಕೆದಾರರಿಗೆ ಜಿಯೋ ಬಿಗ್ ಶಾಕಿಂಗ್ ನ್ಯೂಸ್ ನೀಡಿದೆ. ತನ್ನ ಎರಡು ಜನಪ್ರಿಯ ಪ್ರಿಪೇಯ್ಸ್ ಯೋಜನೆಗಳನ್ನು (Prepaid Plans) ಜಿಯೋ ದಿಢೀರ್ ಆಗಿ ಸ್ಥಗಿತಗೊಳಿಸಿದೆ. ಜಿಯೋ ತನ್ನ 39 ರೂ. ಮತ್ತು 69 ರೂ. ಗಳ ಎರಡು ಯೋಜನೆಗಳನ್ನು ನಿಲ್ಲಿಸಿ ಗ್ರಾಹಕರಿಗೆ ದೊಡ್ಡ ಅಚ್ಚರಿ ನೀಡಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭ ಬಳಕೆದಾರರಿಗೆ ನೆರವಾಗಲು ಜಿಯೋ ಈ ಪ್ಲಾನ್ ಅನ್ನು ಪರಿಚಯಿಸಿತ್ತು. ಇದರ ಜೊತೆಗೆ ಜಿಯೋಫೋನ್ ಗ್ರಾಹಕರಿಗೆ ರಿಲಯನ್ಸ್ ಜಿಯೋ ‘1 ಖರೀದಿಸಿ 1 ಉಚಿತ ಪಡೆಯಿರಿ’ ಆಫರ್ ನಲ್ಲಿ ಈ ಎರಡು ಪ್ಲಾನ್‌ಗಳು ಲಭ್ಯ ಇರುವುದಿಲ್ಲ.

ಜಿಯೋ 39 ರೂ. ರೀಚಾರ್ಜ್ ಪ್ಲಾನ್​ನಲ್ಲಿ ಅನಿಯಮಿತ ವಾಯ್ಸ್‌ ಕಾಲ್‌, ದಿನಕ್ಕೆ 100 MB ಡೇಟಾ ಮತ್ತು 14 ದಿನಗಳ ವ್ಯಾಲಿಡಿಟಿ ನೀಡಿತ್ತಿತ್ತು. ಜಿಯೋ 69 ರೂ. ಪ್ರಿಪೇಯ್ಡ್ ಪ್ಲಾನ್ ಅನಿಯಮಿತ ಧ್ವನಿ ಕರೆ, ದಿನಕ್ಕೆ 0.5GB ಡೇಟಾ ಮತ್ತು 14 ದಿನಗಳ ವ್ಯಾಲಿಡಿಟಿಯೊಂದಿಗೆ ಇರುತ್ತಿತ್ತು.

ಇನ್ನೂ ಜಿಯೋ 75 ರೂ. ಪ್ರಿಪೇಯ್ಡ್ ಪ್ಲಾನ್ ಅನಿಯಮಿತ ಧ್ವನಿ ಕರೆ 3GB ಡೇಟಾವನ್ನು ನೀಡುತ್ತದೆ ಮತ್ತು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಒಂದನ್ನು ಖರೀದಿಸಿ, ಒಂದು ಆಫರ್ ಪಡೆಯಿರಿ, ನಿಮಗೆ 6GB ಡೇಟಾ ಸಿಗುತ್ತದೆ.

ಅಂತೆಯೆ ಜಿಯೋದ 155 ರೂ. ಪ್ರಿಪೇಯ್ಡ್ ಪ್ಲಾನ್ ಅನಿಯಮಿತ ಧ್ವನಿ ಕರೆ, ದಿನಕ್ಕೆ 1GB ಡೇಟಾ ಮತ್ತು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ನೀವು ಪ್ಲಾನ್ ಅನ್ನು ಖರೀದಿಸಿದರೆ, ಒಂದು ಖರೀದಿಯಿಂದಾಗಿ ನೀವು ದಿನಕ್ಕೆ 2GB ಡೇಟಾವನ್ನು ಪಡೆಯುತ್ತೀರಿ.

WhatsApp: ಗೌಪ್ಯತೆಗಾಗಿ ಮತ್ತೊಂದು ಹೊಸ ಫೀಚರ್ ಪರಿಚಯಿಸಲು ಮುಂದಾದ ವಾಟ್ಸ್​ಆ್ಯಪ್

Vivo X70 Pro: ಚೀನಾ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಈ ಸ್ಮಾರ್ಟ್​ಫೋನ್ ತಿಂಗಳಾಂತ್ಯಕ್ಕೆ ಭಾರತದಲ್ಲಿ ಬಿಡುಗಡೆ

(Reliance Jio has discontinued two affordable prepaid plans check details)

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು