Crime News: ಯುವತಿಗೆ ಡ್ರಾಪ್ ಕೊಡಲು ಬೈಕ್ ನಿಲ್ಲಿಸಿದ ಯುವಕ: ಆಮೇಲೆ ಆಗಿದ್ದೇ ಬೇರೆ!

Crime news in kannada: ದಿನಂಪ್ರತಿ ಗಜಪತಿ ನಗರಕ್ಕೆ ಭೇಟಿ ನೀಡುತ್ತಿದ್ದ. ಆ ದಿನ ಕೂಡ ಅದೇ ದಾರಿಯಲ್ಲಿ ಬೈಕ್​ನಲ್ಲಿ ಹೊರಟಿದ್ದ. ದಾರಿ ಮಧ್ಯೆ ಯುವತಿಯೊಬ್ಬಳು ಬೈಕ್​ಗೆ ಕೈ ತೋರಿಸಿದ್ದಾಳೆ.

Crime News: ಯುವತಿಗೆ ಡ್ರಾಪ್ ಕೊಡಲು ಬೈಕ್ ನಿಲ್ಲಿಸಿದ ಯುವಕ: ಆಮೇಲೆ ಆಗಿದ್ದೇ ಬೇರೆ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 10, 2021 | 10:28 PM

ದಾರಿ ಮಧ್ಯೆ ಪರಿಚಿತರು ಸಿಕ್ಕಾಗ ವಾಹನದಲ್ಲಿ ಡ್ರಾಪ್ ಕೊಡೋದು ಮಾಮೂಲು. ಆದರೆ ಕೆಲವರು ತುಂಬಾ ಉದಾರ ಮನೋಭಾವ ಹೊಂದಿರುತ್ತಾರೆ. ಯಾರೇ ಕೈ ತೋರಿಸಿದರೂ ವಾಹನ ನಿಲ್ಲಿಸಿ ಹತ್ತಿಸಿಕೊಳ್ಳುತ್ತಾರೆ. ಇನ್ನು ಕೆಲವರ ವಾಹನಗಳು ಹುಡುಗಿಯರು ಕಂಡೊಡನೆ ನಿಧಾನವಾಗುತ್ತೆ. ಅಂತದ್ರಲ್ಲಿ ಯುವತಿಯೊಬ್ಬಳು ಡ್ರಾಪ್ ಕೊಡಿ ಎಂದರೆ ಬಿಟ್ಟು ಬಿಡುತ್ತಾರಾ?. ಹೀಗೆ ಡ್ರಾಪ್ ಕೇಳಿದ ಯುವತಿಯೊಬ್ಬಳಿಗೆ ನೆರವು ನೀಡಲು ಹೋಗಿ ಯುವಕನೊಬ್ಬ ಸಂಕಷ್ಟಕ್ಕೆ ಸಿಲುಕಿದ ಘಟನೆ ಆಂಧ್ರ ಪ್ರದೇಶದ ವಿಜಯನಗರಂನಲ್ಲಿ ನಡೆದಿದೆ.

ಹೌದು, ಆತ ವಿಜಯನಗರಂನ ಹಣಕಾಸು ವ್ಯವಹಾರಸ್ಥ. ದಿನಂಪ್ರತಿ ಗಜಪತಿ ನಗರಕ್ಕೆ ಭೇಟಿ ನೀಡುತ್ತಿದ್ದ. ಆ ದಿನ ಕೂಡ ಅದೇ ದಾರಿಯಲ್ಲಿ ಬೈಕ್​ನಲ್ಲಿ ಹೊರಟಿದ್ದ. ದಾರಿ ಮಧ್ಯೆ ಯುವತಿಯೊಬ್ಬಳು ಬೈಕ್​ಗೆ ಕೈ ತೋರಿಸಿದ್ದಾಳೆ. ಹುಡುಗಿ ತಾನೆ ಅಂದುಕೊಂಡು ಬೈಕ್​ನಲ್ಲಿ ಕೂರಿಸಿಕೊಂಡಿದ್ದಾನೆ. ದವಳಪೇಟೆಯ ಸೇತುವೆ ಮೇಲೆ ತಲುಪುತ್ತಿದ್ದಂತೆ ಬೈಕ್ ನಿಲ್ಲಿಸುವಂತೆ ಯುವತಿ ಕೇಳಿಕೊಂಡಳು. ಆತ ನಿಲ್ಲಿಸಿದಾಗ ಸೇತುವೆ ಕೆಳಗೆ ಹೋಗೋಣ ಅಂದಿದ್ದಾಳೆ.

ಸರಿ ಎಂದು ಯುವಕ ಸೇತುವೆ ಕೆಳಗೆ ತೆರಳಿದ್ದಾನೆ. ನಿರ್ಜನ ಸೇತುವೆ ಭಾಗದಲ್ಲಿ ತಲುಪುತ್ತಿದ್ದಂತೆ ಯುವತಿ ಆತನನ್ನು ಬೆದರಿಸಿ ಚಿನ್ನದ ಸರ ಕಿತ್ತುಕೊಂಡಿದ್ದಾಳೆ. ಅಲ್ಲದೆ ಅತ್ಯಾಚಾರದ ಆರೋಪ ಮಾಡುವುದಾಗಿ ಬೆದರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಇದೇ ವೇಳೆ ಆ ಮಾರ್ಗದಲ್ಲಿ ಜನರು ಬರುತ್ತಿರುವುದನ್ನು ಗಮನಿಸಿ ಯುವಕ ಕಿರುಚಾಡಿಕೊಂಡನು. ಈ ವೇಳೆ ಓಡಿ ಹೋಗುತ್ತಿದ್ದ ಆಕೆಯನ್ನು ಗಮನಿಸಿದ ಜನರು ಹಿಡಿದಿದ್ದಾರೆ.

ತಕ್ಷಣವೇ ಆಕೆಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಸ್ಥಳೀಯರು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಆಕೆ ಸರಗಳ್ಳಿ ಎಂಬುದು ಗೊತ್ತಾಗಿದ್ದು, ಈ ಹಿಂದೆ ಕೂಡ ಹಲವು ಬಾರಿ ಇದೇ ಮಾದರಿಯಲ್ಲಿ ಅನೇಕರನ್ನು ಯಾಮಾರಿಸಿರುವುದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಬೈಕ್​ನಲ್ಲಿ ಡ್ರಾಪ್ ನೀಡಿದ ಯುವಕನ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದಳು. ಆತನ ಬಳಿ ಹಣ ಮತ್ತು ಚಿನ್ನದ ಸರ ಇರುವುದು ಗೊತ್ತಿದ್ದರಿಂದ ಯುವತಿ ಆತನನ್ನು ಡ್ರಾಪ್ ಕೇಳುವ ನೆಪದಲ್ಲಿ ಬಲೆಗೆ ಬೀಳಿಸಿದ್ದಳು. ಇತ್ತ ಸಹಾಯ ಮಾಡಲೋದ ಯುವಕ ಸಂಕಷ್ಟಕ್ಕೆ ಸಿಲುಕಿದರೂ ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿಸಿಕೊಂಡ ಎನ್ನಬಹುದು.

ಇದನ್ನೂ ಓದಿ: 16 ಸಿಕ್ಸರ್, 4 ಫೋರ್: ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಜಸ್ಕರನ್

ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್​ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ

ಇದನ್ನೂ ಓದಿ: BMW CE 02: 90 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದ BMW

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

(Vijayanagaram: The lift means the bike stopped..after that!)

ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ