Jio: 3GB ಡೇಟಾ ಸಿಗುವ ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದ ಜಿಯೋ
Jio Cheapest Recharge Plan: JioPhone ಬಳಕೆದಾರರು Jio TV, Jio Cinema, Jio News, JioSecurity ಮತ್ತು JioCloud ನಂತಹ ಆ್ಯಪ್‌ಗಳ ಉಚಿತ ಪ್ರವೇಶವನ್ನು ಪಡೆಯಲಿದ್ದಾರೆ.
Updated on: Sep 15, 2021 | 9:28 PM

Jio network down on twitter check in kannada news

ಜಿಯೋ 75 ರೂ. ಪ್ಲ್ಯಾನ್: ಈ ಪ್ಲ್ಯಾನ್ನಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರತಿದಿನ 50 ಉಚಿತ SMS ಸಿಗಲಿದೆ. ಇನ್ನು ಈ ಪ್ಲ್ಯಾನ್ನಲ್ಲಿ 200MB ಬೂಸ್ಟರ್ ಜೊತೆಗೆ 3GB ಡೇಟಾ ಸಿಗಲಿದೆ.

ಈ ಪ್ಲ್ಯಾನ್ ವಾಲಿಟಿಡಿ 28 ದಿನಗಳಾಗಿದ್ದು, ಇದರೊಂದಿಗೆ JioPhone ಬಳಕೆದಾರರು Jio TV, Jio Cinema, Jio News, JioSecurity ಮತ್ತು JioCloud ನಂತಹ ಆ್ಯಪ್‌ಗಳ ಉಚಿತ ಪ್ರವೇಶವನ್ನು ಪಡೆಯಲಿದ್ದಾರೆ. ಇದಲ್ಲದೆ ಮತ್ತೆರಡು ಪ್ರಿ ಪೇಯ್ಡ್ ಪ್ಲ್ಯಾನ್ಗಳು ಕೂಡ ಇದ್ದು, ಇದು ಜಿಯೋ ಎಲ್ಲಾ ಗ್ರಾಹಕರಿಗೆ ಲಭ್ಯವಿದೆ.

ಜಿಯೋ 199 ರೂ. ಪ್ಲ್ಯಾನ್: ಜಿಯೋ ಪರಿಚಯಿಸಿರುವ 199 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5 ಜಿಬಿ ಡೇಟಾ ಸಿಗಲಿದೆ. ಅದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಂಎಸ್ ದೊರೆಯಲಿದೆ. ಇನ್ನು ಜಿಯೋ ಆ್ಯಪ್‌ಗಳ ಚಂದಾದಾರಿಕೆ ಕೂಡ ಸಿಗಲಿದೆ. ಈ ಪ್ಲ್ಯಾನ್ನ ವಾಲಿಟಿಡಿ 28 ದಿನಗಳು ಮಾತ್ರ.

ಜಿಯೋ 399 ರೂ. ಪ್ಲ್ಯಾನ್: ಜಿಯೋ 399 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಅನ್ನು ಸಹ ಪರಿಚಯಿಸಿದ್ದು, ಈ ಪ್ಲ್ಯಾನ್ನಲ್ಲೂ 1.5 ಜಿಬಿ ದೈನಂದಿನ ಡೇಟಾ ದೊರೆಯಲಿದೆ. ಅದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಜಿಯೋ ಆಪ್‌ಗಳ ಚಂದಾದಾರಿಕೆ ದೊರೆಯಲಿದೆ. ಈ ಪ್ಲ್ಯಾನ್ನ ವಾಲಿಡಿಟಿ 56 ದಿನಗಳು.



















