Youtube: ಇನ್ಮುಂದೆ ಯಾವುದೇ ಭಾಷೆಯ ಕಮೆಂಟ್ಗಳನ್ನು ಕನ್ನಡದಲ್ಲೇ ಓದಿ: ಯೂಟ್ಯೂಬ್ನಿಂದ ಹೊಸ ಫೀಚರ್
ಯೂಟ್ಯೂಬ್ ಬಳಕೆದಾರರು ಈ ಆಯ್ಕೆಯ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ 100 ಕ್ಕೂ ಹೆಚ್ಚು ವಿವಿಧ ಭಾಷೆಗಳ ಕಾಮೆಂಟ್‌ಗಳನ್ನು ಭಾಷಾಂತರಿಸಲು ಅನುಮತಿಸುತ್ತದೆ. ಇದರಲ್ಲಿ ಕನ್ನಡ ಭಾಷೆ ಕೂಡ ಲಭ್ಯವಿದೆ.
ಗೂಗಲ್ (Google) ಮಾಲೀಕತ್ವದ ಜನಪ್ರಿಯ ವಿಡಿಯೋ ಪ್ಲಾಟ್‌ಫಾರ್ಮ್ ತಾಣವಾಗಿರುವ ಯೂಟ್ಯೂಬ್ (Youtube) ತನ್ನ ಬಳಕೆದಾರರಿಗೆ ಇದೀಗ ಹೊಸದೊಂದು ಫೀಚರ್ಸ್ ಅಳವಡಿಸಿದೆ. ಇತ್ತೀಚಿಗಷ್ಟೆ ವಿಡಿಯೋ ಸರ್ಚ್ ಫೀಚರ್ ಪರಿಚಯಿಸಿರುವ ವಿಡಿಯೋ ಸ್ಟ್ರೀಮಿಂಗ್ ದೈತ್ಯ ಯೂಟ್ಯೂಬ್ ಇದೀಗ ಹೊಸದಾಗಿ ಭಾಷೆ ‘‘ಅನುವಾದ’’ ಎಂಬ ಹೊಸ ವೈಶಿಷ್ಟ್ಯವನ್ನು ಹೊರ ತಂದಿದ್ದು, ಆ್ಯಂಡ್ರಾಯ್ಡ್ (Android) ಮತ್ತು ಐಒಎಸ್ (IoS) ಬಳಕೆದಾರರಿಗೆ ಇದು ಸಿಗಲಿದೆ.
ಬಳಕೆದಾರರು ಈ ಆಯ್ಕೆಯ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ 100 ಕ್ಕೂ ಹೆಚ್ಚು ವಿವಿಧ ಭಾಷೆಗಳ ಕಾಮೆಂಟ್‌ಗಳನ್ನು ಭಾಷಾಂತರಿಸಲು ಅನುಮತಿಸುತ್ತದೆ. ಇದರಲ್ಲಿ ಕನ್ನಡ ಭಾಷೆ ಕೂಡ ಲಭ್ಯವಿದೆ. ಇನ್ನು ಈ ವಿಶೇಷ ಫೀಚರ್ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಯೂಟ್ಯೂಬ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈಗ, ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೋಗಳನ್ನು ಬ್ರೌಸ್ ಮಾಡುವಾಗ ನೀವು ಬಯಸಿದ ಭಾಷೆಯಲ್ಲದೇ ಬೇರೆ ಭಾಷೆಯಲ್ಲಿರುವ ಒಂದು ಕಾಮೆಂಟ್ ನಿಮಗೆ ಬಂದರೆ, ಯೂಟ್ಯೂಬ್ ಈಗ ಆ ಕಾಮೆಂಟ್‌ಗಾಗಿ ಹೊಸ (Translate to [your language]) ನಿಮ್ಮ ಭಾಷೆಗೆ ಭಾಷಾಂತರಿಸಿ ಬಟನ್ ಆಯ್ಕೆ ಅನ್ನು ತೋರಿಸಲಿದೆ.
ಯುಟ್ಯೂಬ್ಲ್ಲಿ ಯಾವುದಾದದರು ವಿಡಿಯೋ ವೀಕ್ಷಿಸಿದ ಮೇಲೆ ತಮಗನಿಸಿದನ್ನು ಕಾಮೆಂಟ್ ಬಾಕ್ಸ್ನಲ್ಲಿ ಬರೆಯಬಹುದಾಗಿದೆ. ಬೇರೆ ಬೇರೆ ದೇಶದ ಜನರು ಇಲ್ಲಿ ಕಾಮೆಂಟ್ ಬರೆಯುತ್ತಾರೆ. ತಮಗನಿಸಿದ್ದನ್ನು ಹೇಳಿಬಿಡುತ್ತಾರೆ. ಆದರೀಗ ಬೇರೆ ಭಾಷೆಯನ್ನು ಸುಲಭವಾಗಿ ಓದಬಹುದಾಗಿದೆ. ಯುಟ್ಯೂಬ್ ಅನುವಾದ ವೈಶಿಷ್ಯವನ್ನು ಅದಕ್ಕಾಗಿಯೇ ಪರಿಚಯಿಸಿದ್ದು, ಆಯ್ಕೆ ಅಥವಾ ನಿಮ್ಮ ನೆಚ್ಚಿನ ಭಾಷೆಗೆ ಅನುವಾದ ಮಾಡಬಹುದಾದ ಆಯ್ಕೆಯನ್ನು ನೀಡಿದೆ.
ಲೈಕ್ಸ್, ಡಿಸ್ಲೈಕ್ ಮತ್ತು ರಿಪ್ಲೈ ಆಯ್ಕೆಯ ಅಡಿಯಲ್ಲಿ ಅನುವಾದ ಬಟನ್ ಅನ್ನು ಒದಗಿಸಲಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡುವುದರಿಂದ ಕಾಮೆಂಟ್ ಅನ್ನು ನಿಮ್ಮ ಭಾಷೆಯ ಅನುವಾದಿಬಹುದಾಗಿದೆ.
ಹಾಗೆಯೇ ಈಗಾಗಲೇ ಯೂಟ್ಯೂಬ್ ಕೆಲವು ಕುತೂಹಲಕರ ಫೀಚರ್ಸ್‌ಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಯೂಟ್ಯೂಬ್‌ನಲ್ಲಿ ಕೀ ವರ್ಡ್ ಎಂಟ್ರಿ ಮಾಡಿ ಸರ್ಚ್ ಮಾಡುವಾಗ ಎಂಟ್ರಿ ಮಾಡಿರುವ ಕೀ ವರ್ಡ್ / ಹುಡುಕಾಡಿದ ಪದಗಳು ಮತ್ತೆ ಕಾಣಿಸಬಾರದು ಎಂದು ನೀವು ಬಯಸದಿದ್ದರೆ ಅದಕ್ಕೆ ಈ ಆಯ್ಕೆ ಪೂರಕವಾಗಿದೆ. ಈ ಆಯ್ಕೆ ಬಳಸಿ ಗೌಪ್ಯ ಸರ್ಚ್ ಮಾಡಬಹುದಾಗಿದೆ. ಪ್ರೊಫೈಲ್ ಫೋಟೊ ಕ್ಲಿಕ್ ಮಾಡಿ ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ incognito mode ಆಯ್ಕೆ ಮಾಡಿಕೊಳ್ಳಬಹುದು.
Apple iPhone 13: ಇಂದಿನಿಂದ ಐಫೋನ್ 13 ಪ್ರೀ ಬುಕ್ಕಿಂಗ್ ಆರಂಭ: ಬೆಲೆ, ಆಫರ್ ಕುರಿತ ಎಲ್ಲ ಮಾಹಿತಿ ಇಲ್ಲಿದೆ
Samsung Galaxy M52 5G: ಸ್ಯಾಮ್ಸಂಗ್ನಿಂದ ಬರೋಬ್ಬರಿ 7000mAh ಬ್ಯಾಟರಿಯ ಮತ್ತೊಂದು ಸ್ಮಾರ್ಟ್ಫೋನ್
(YouTube Now you can translate YouTube comments in over 100 languages include Kannada)