WhatsApp: ಐಒಎಸ್ ಬಳಕೆದಾರರಿಗೆ ಗುಡ್ ನ್ಯೂಸ್: ವಾಟ್ಸ್ಆ್ಯಪ್ ಪರಿಚಯಿಸಿದೆ ಹೊಸ ಫೀಚರ್
ಮ್ಯೂಟ್ ವಿಡಿಯೋಸ್ ಫೀಚರ್ಸ್ ಅನ್ನು ಆಂಡ್ರಾಯ್ಡ್‌ನಲ್ಲಿ ಅನೇಕ ಮಂದಿ ಉಪಯೋಗಿಸುತ್ತಿದ್ದು ಸಾಕಷ್ಟು ಉಪಕಾರಿಯಾಗಿದೆ. ಸದ್ಯ ಈ ಫೀಚರ್ಸ್ ಐಒಎಸ್ (iOs) ಬಳಕೆದಾರರಿಗೆ ಪರಿಚಯಿಸಿದೆ.
ಫೇಸ್ಬುಕ್ (Facebook) ಒಡೆತನದ ವಾಟ್ಸ್ಆ್ಯಪ್ (WhatsApp) ಬಳಕೆದಾರರಿಗೆ ಸದಾ ಒಂದಲ್ಲಾ ಒಂದು ಹೊಸ ಹೊಸ ಫೀಚರ್ಗಳನ್ನು ನೀಡುತ್ತಿದೆ. ಈಗಾಗಲೇ ಸಾಲು ಸಾಲು ಅಪ್ಡೇಟ್ಗಳು ಪರೀಕ್ಷಾ ಹಂತದಲ್ಲಿದೆ. ಇದರ ನಡುವೆ ಐಒಎಸ್ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ವಾಟ್ಸ್ಆ್ಯಪ್ ಈ ಹಿಂದೆ ಆಂಡ್ರಾಯ್ಡ್ ಬಳಕೆದಾರರಿಗೆ ಪರಿಚಯಿಸಿದ್ದ ಮ್ಯೂಟ್ ವಿಡಿಯೋ (Mute Video) ಫೀಚರ್ಸ್ ಅನ್ನು ಸದ್ಯ ಐಒಎಸ್ (iOs) ಬಳಕೆದಾರರಿಗೆ ಪರಿಚಯಿಸಿದೆ. ಮಾಹಿತಿ ಪ್ರಕಾರ ವಿಡಿಯೋಗಳನ್ನು ಮ್ಯೂಟ್ ಮಾಡುವ ಸಾಮರ್ಥ್ಯವನ್ನು ಐಒಎಸ್ ಬೀಟಾ ಬಳಕೆದಾರರಿಗೆ ಪರಿಚಯಿಸಿದೆ. ಆಂಡ್ರಾಯ್ಡ್ (Android) ಬಳಕೆದಾರರಿಗೆ ಈ ವೈಶಿಷ್ಟ್ಯವು ಲಭ್ಯವಾದ ಸುಮಾರು ಏಳು ತಿಂಗಳ ನಂತರ ಐಒಎಸ್‌ಗೆ ಈ ಫೀಚರ್ಸ್ ಅನ್ನು ಪರಿಚಯಿಸಲಾಗಿದೆ.
ಮ್ಯೂಟ್ ವಿಡಿಯೋಸ್ ಫೀಚರ್ಸ್ ಅನ್ನು ಆಂಡ್ರಾಯ್ಡ್‌ನಲ್ಲಿ ಅನೇಕ ಮಂದಿ ಉಪಯೋಗಿಸುತ್ತಿದ್ದು ಸಾಕಷ್ಟು ಉಪಕಾರಿಯಾಗಿದೆ. ವಾಟ್ಸ್ಆ್ಯಪ್ನಈ ವಿಡಿಯೋ ಮ್ಯೂಟ್ ಅನ್ನು ಬಳಕೆ ಮಾಡುವುದು ತುಂಬಾನೆ ಸುಲಭ. ಮ್ಯೂಟ್ ವಿಡಿಯೋ ಫೀಚರ್ ಅನ್ನು ಬಳಸಲು, ವಿಡಿಯೋವನ್ನು ರೆಕಾರ್ಡ್ ಮಾಡಿ. ನೀವು ರೆಕಾರ್ಡಿಂಗ್ ಮಾಡಿದ ನಂತರ, ಎಡಭಾಗದಲ್ಲಿ ನೀವು ವಾಲ್ಯೂಮ್ ಐಕಾನ್ ಅನ್ನು ಕಾಣುತ್ತಿರಿ. ವಿಡಿಯೋವನ್ನು ಮ್ಯೂಟ್ ಮಾಡಲು ಅದರ ಮೇಲೆ ಟ್ಯಾಪ್ ಮಾಡಿ. ಆ ನಂತರ ವಾಯಿಸ್/ಧ್ವನಿ ರಹಿತ ವಿಡಿಯೋ ಕಳುಹಿಸಲು ಸಿದ್ಧವಾಗುತ್ತದೆ.
ಇನ್ನು ಈಗಾಗಲೇ ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ಸ್ಕ್ರೀನ್‌ಶಾಟ್ ಪ್ರಕಾರ, ಬಳಕೆದಾರರು ಅಂತಿಮವಾಗಿ ಮ್ಯೂಟ್ ವಿಡಿಯೋ ಆಯ್ಕೆಯನ್ನು ಮರುವಿನ್ಯಾಸಗೊಳಿಸಿದ ಟಾಗಲ್‌ನಲ್ಲಿ ಜಿಫ್‌ಗೆ ಪರಿವರ್ತಿಸುವ ಆಯ್ಕೆಯಲ್ಲಿ ಕಾಣಬಹುದಾಗಿದೆ. ಪ್ರತಿ ಬಾರಿ ನೀವು ವಿಡಿಯೋವನ್ನು ಎಡಿಟ್ ಮಾಡಲು ಪ್ರಯತ್ನಿಸಿದಾಗ, ಅದರ ಗಾತ್ರವನ್ನು ತಕ್ಷಣವೇ ಅಪ್‌ಡೇಟ್ ಮಾಡಲಾಗುತ್ತದೆ. ಐಒಎಸ್ ಬೀಟಾ ಪರೀಕ್ಷಕರಿಗೆ ಈ ಫೀಚರ್ಸ್ ಇಂದಿನಿಂದಲೇ ಲಭ್ಯವಿದೆ.
ಇನ್ನೂ ವಾಟ್ಸ್ಆ್ಯಪ್ ಭಾರತದಲ್ಲಿ ವಾಯ್ಸ್ ಟ್ರಾನ್ಸ್ಕ್ರಿಪ್ಶನ್ ಫೀಚರ್ ಪರಿಚಯಿಸುವ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. ವಾಬೇಟಾ ಇನ್ಫೋ ವರದಿ ಪ್ರಕಾರ, ವಾಟ್ಸ್ಆ್ಯಪ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಟ್ರಾನ್ಸ್ಕ್ರಿಪ್ಶನ್ ಎಂಬ ಫೀಚರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹೊಸ ವೈಶಿಷ್ಟ್ಯವು ಹೊಸತನದಿಂದ ಕೂಡಿದೆ ಎಂದಿದೆ.
ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ವಾಯ್ಸ್ ಟ್ರಾನ್ಸ್ಕ್ರಿಪ್ಶನ್ ಫೀಚರ್ನಲ್ಲಿ ಬಳಕೆದಾರರಿಗೆ ಧ್ವನಿ ಸಂದೇಶದ ವಿಷಯವನ್ನು ಓದಬಲ್ಲ ರೂಪದಲ್ಲಿ ನೀಡುತ್ತದೆ. ಅಂದರೆ ಇದು ಇದು ಪಠ್ಯ ರೂಪದಲ್ಲಿ ಸಿಗಲಿದೆ. ಈ ಫೀಚರ್ ಅನ್ನು ಆಯ್ಕೆಯ ಆಧಾರ ಮೇಲೆ ನೀಡಲಾಗುತ್ತದೆ. ಅಂದರೆ ಈ ಫೀಚರ್ ಟ್ರಾನ್ಸ್ಕ್ರಿಪ್ಶನ್ ಮಾಡಲು ಅನುಮತಿಸಿದಾಗ ಮಾತ್ರ ಸೇವೆ ಸಿಗಲಿದೆ. ವಾಟ್ಸ್ಆ್ಯಪ್ ಕ್ಯಾಮೆರಾ, ಮೈಕ್ರೋಫೋನ್ಗೆ ಅನುಮತಿ ನೀಡಿದಂತೆ ಇದಕ್ಕೂ ಅನುಮತಿ ಕೇಳುತ್ತದೆ.
Vivo X70 series: ವಿದೇಶದಲ್ಲಿ ಸಂಚಲನ ಸೃಷ್ಟಿಸಿದ ವಿವೋ X70 ಸರಣಿ ಸೆ. 30ಕ್ಕೆ ಭಾರತದಲ್ಲಿ ಬಿಡುಗಡೆ
Realme C25Y: ಬರೋಬ್ಬರಿ 48 ದಿನಗಳ ಸ್ಟ್ಯಾಂಡ್‌ಬೈ ಟೈಂ: ಭಾರತದಲ್ಲಿ ರಿಯಲ್‌ಮಿ C25Y ಸ್ಮಾರ್ಟ್ಫೋನ್ ಬಿಡುಗಡೆ
(WhatsApp mute videos feature is rolling out to the iOS users with a new design)