WhatsApp Scam: ವಾಟ್ಸ್​ಆ್ಯಪ್​ನಲ್ಲಿ ನಡೆಯುತ್ತಿದೆ ಬಹುದೊಡ್ಡ ವಂಚನೆ: ತಪ್ಪಿಯೂ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ

Electricity Bill Scam: ವಾಟ್ಸ್​ಆ್ಯಪ್​​​ನಲ್ಲಿ ತಮ್ಮ ವಿದ್ಯುತ್ ಬಿಲ್​ಗಳನ್ನು ಪಾವತಿಸಲು ನೆನಪಿಸುವ ಸಂದೇಶಗಳು ಹರಿದಾಡುತ್ತಿದೆ. ಇಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಿ ಮುಂದುವರೆದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವುದು ಖಚಿತ.

WhatsApp Scam: ವಾಟ್ಸ್​ಆ್ಯಪ್​ನಲ್ಲಿ ನಡೆಯುತ್ತಿದೆ ಬಹುದೊಡ್ಡ ವಂಚನೆ: ತಪ್ಪಿಯೂ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
WhatsApp Scam
Follow us
TV9 Web
| Updated By: Vinay Bhat

Updated on: Oct 10, 2022 | 1:57 PM

ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ದಾಖಲಾಗುತ್ತಲೇ ಇದೆ. ಮುಖ್ಯವಾಗಿ ವಿಶ್ವದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಟಾ (Facebook) ಮಾಲೀಕತ್ವದ ವಾಟ್ಸ್ಆ್ಯಪ್​ ಸ್ಕ್ಯಾಮ್ (WhatsApp Scam) ಮೆಸೇಜ್‌ಗಳ ತಾಣವಾಗಿ ಬಿಟ್ಟಿದೆ. ದಿನಕ್ಕೊಂದರಂತೆ ವಂಚನೆ ಮೆಸೇಜ್‌ಗಳು ವಾಟ್ಸ್ಆ್ಯಪ್​​ನಲ್ಲಿ ಹರಿದಾಡುತ್ತಿರುತ್ತದೆ. ಇದರ ಮೂಲಕ ಅವರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣವನ್ನು ಕದಿಯುತ್ತಿದ್ದಾರೆ. ಇದೀಗ ಇದಕ್ಕೆ ಉದಾಹರಣೆ ಎಂಬಂತೆ ಆನ್‌ಲೈನ್ ವಂಚನೆ ದೇಶದ ಕೆಲವು ಕಡೆಗಳಲ್ಲಿ ವರದಿಯಾಗಿದೆ. ವಾಟ್ಸ್​ಆ್ಯಪ್​​​ನಲ್ಲಿ ತಮ್ಮ ವಿದ್ಯುತ್ ಬಿಲ್​ಗಳನ್ನು (Electricity Bill) ಪಾವತಿಸಲು ನೆನಪಿಸುವ ಸಂದೇಶಗಳು ಹರಿದಾಡುತ್ತಿದೆ. ಇಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಿ ಮುಂದುವರೆದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವುದು ಖಚಿತ.

ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಾಟ್ಸ್​ಆ್ಯಪ್ ಮೂಲಕ ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್ ಹರಿದಾಡುತ್ತಿದೆ. “ಪ್ರಿಯ ಗ್ರಾಹಕರೇ, ನಿಮ್ಮ ಹಿಂದಿನ ತಿಂಗಳ ಬಿಲ್ ಅಪ್ಡೇಟ್ ಆಗದ ಕಾರಣ ಇಂದು ರಾತ್ರಿ 9.30 ಕ್ಕೆ ವಿದ್ಯುತ್ ಕಚೇರಿಯಿಂದ ನಿಮ್ಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ದಯವಿಟ್ಟು ತಕ್ಷಣವೇ ನಮ್ಮ ವಿದ್ಯುತ್ ಅಧಿಕಾರಿಯನ್ನು ಸಂಪರ್ಕಿಸಿ 8260303942 ಧನ್ಯವಾದಗಳು”, ಎಂದು ಸಂದೇಶದಲ್ಲಿ ಬರೆಯಲಾಗಿರುತ್ತದೆ. ಈ ಸಂದೇಶವು ಅಧಿಕೃತ ಮೂಲದಿಂದ ಬರದಿದ್ದರೂ, ಬಹಳಷ್ಟು ಜನರು ಈ ಸಂಖ್ಯೆಗೆ ಕರೆ ಮಾಡಿ ಮೋಸ ಹೋಗುತ್ತಿದ್ದಾರೆ.

ಇಂತಹ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ?

ಇದನ್ನೂ ಓದಿ
Image
Galaxy F13: ಆಫರ್ ಅಂದ್ರೆ ಇದು: 6000mAh ಬ್ಯಾಟರಿಯ ಗ್ಯಾಲಕ್ಸಿ F13 ಈಗ ಕೇವಲ 9499 ರೂ. ಗೆ ಲಭ್ಯ
Image
Tech Tips: ನಿಮಗೆ ಬಂದ ವಾಟ್ಸ್​ಆ್ಯಪ್ ಸಂದೇಶವನ್ನು ಕಳುಹಿಸಿದವರಿಗೆ ತಿಳಿಯದಂತೆ ಸೀಕ್ರೆಟ್ ಆಗಿ ಓದುವುದು ಹೇಗೆ?: ಇಲ್ಲಿದೆ ಟ್ರಿಕ್ಸ್
Image
Google Pixel 6a: ಫ್ಲಿಪ್​ಕಾರ್ಟ್​ನಿಂದ ಧಮಾಕ ಆಫರ್: ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್ ಬೆಲೆ ಕೇಳಿದ್ರೆ ದಂಗಾಗ್ತೀರಾ
Image
WhatsApp: ನಿಮ್ಮನ್ನು ಹೈಡ್ ಮಾಡಿ ಯಾರೇ ಸ್ಟೇಟಸ್ ಹಾಕಿದ್ದರೂ ಈ ಟ್ರಿಕ್ ಮೂಲಕ ನೋಡಿ

ವಾಟ್ಸ್​ಆ್ಯಪ್​ ಮೂಲಕ ಹೆಚ್ಚುತ್ತಿರುವ ಸೈಬರ್ ವಂಚನೆ ಘಟನೆಗಳನ್ನು ಗಮನಿಸಿದರೆ, ಅಂತಹ ವಂಚನೆಗಳನ್ನು ಗುರುತಿಸುವುದು ತುಂಬಾ ಕಷ್ಟ. ಆದರೆ ಅಂತಹ ವಂಚನೆಗಳನ್ನು ನೀವು ಗುರುತಿಸಬಹುದಾದ ಕೆಲವು ತಂತ್ರಗಳಿವೆ. ಅಪರಿಚಿತ ವ್ಯಕ್ತಿ ಅಥವಾ ಸಂಖ್ಯೆಯಿಂದ ಸ್ವೀಕರಿಸಿದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬಾರದು. ಲಿಂಕ್ ಅಧಿಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಹಾಗೆ ಮಾಡಲು, url ಅನ್ನು ಸರಿಯಾಗಿ ಪರಿಶೀಲಿಸಿ. ಅಧಿಕೃತ ವೆಬ್‌ಸೈಟ್‌ಗಳಾಗಿರುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ. ಹಣದ ಲಾಭವನ್ನು ಪಡೆದುಕೊಳ್ಳುವ ಲಿಂಕ್‌ಗಳು ಅಥವಾ ಸಂದೇಶಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ. ಇಂತಹ ಸಂದೇಶಗಳನ್ನು ಹೆಚ್ಚಾಗಿ ಸ್ಕ್ಯಾಮರ್‌ಗಳು ಕಳುಹಿಸುತ್ತಾರೆ. ಅಧಿಕೃತ ನ್ಯೂಸ್‌ ಮೆಸೇಜ್‌ಗಳು ಯಾವುದೇ ಅಕ್ಷರ ದೋಷ ಹೊಂದಿರುವುದಿಲ್ಲ. ಆದರೆ ವಾಟ್ಸ್ಆ್ಯಪ್​ನಲ್ಲಿ ಹೆಚ್ಚು ಫಾರ್ವರ್ಡ್ ಮಾಡಲಾದ ಫೇಕ್‌ ಮೆಸೇಜ್‌ಗಳು ಹೆಚ್ಚು ಅಕ್ಷರ ದೋಷಗಳು, ಸ್ಪೆಲ್ಲಿಂಗ್‌ ತಪ್ಪುಗಳನ್ನು ಹೊಂದಿರುತ್ತವೆ. ಆದ್ದರಿಂದ ಎಚ್ಚರ ವಹಿಸಿ ಓದಿ.

ಅಂತೆಯೆ ಅಧಿಕೃತವಾಗಿ ಪ್ರಕಟಿಸಲಾದ ಮೆಸೇಜ್ ಸಾಮಾನ್ಯವಾಗಿ ಲಿಂಕ್‌ ಹೊಂದಿರುವುದಿಲ್ಲ. ಆದರೆ ಫೇಕ್‌ ಮೆಸೇಜ್‌ಗಳು ಲಿಂಕ್‌ ಅನ್ನು ಹೊಂದಿರುತ್ತವೆ. ಉದಾಹರಣೆ ಬಿಎಸ್‌ಎನ್‌ಎಲ್‌ ಕುರಿತ ಅನ್‌ಲಿಮಿಟೆಡ್ ಡೇಟಾ ಮತ್ತು ವಾಯ್ಸ್ ಕರೆ ಕುರಿತ ಫೇಕ್‌ ಮೆಸೇಜ್‌ http://www.bsni.in/ ಲಿಂಕ್‌ ಅನ್ನು ಹೊಂದಿದೆ. ಯುಆರ್‌ಎಲ್‌ ಗಮನಿಸಿ. ಇಂತಹ ತಪ್ಪು ಯುಆರ್‌ಎಲ್‌ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಿರಿ ಹಾಗೂ ಫಾರ್ವರ್ಡ್‌ ಸಹ ಮಾಡದಿರಿ. ಕೆಲವು ಮೆಸೇಜ್‌ಗಳು ಉಚಿತ ರೀಚಾರ್ಜ್‌, ಅನ್‌ಲಿಮಿಟೆಡ್, ಹಣ ಬಹುಮಾನ ಬಂದಿರುವ ಬಗ್ಗೆ ಭರವಸೆ ನೀಡಿ, ಮೆಸೇಜ್‌ ಅನ್ನು 10 ಜನರಿಗೆ ಫಾರ್ವರ್ಡ್ ಮಾಡಿ ಎಂದು ಹೇಳುತ್ತವೆ. ಆದ್ದರಿಂದ ಮೆಸೇಜ್‌ಗಳನ್ನು ಓದುವ ಬದಲು ಅದನ್ನು ಕಡೆಗಣಿಸಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ