AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IGI Aviation Services: ಏರ್​ಪೋರ್ಟ್​​ನಲ್ಲಿ ಕೆಲಸ ಪಡೆಯಲು ಇಲ್ಲಿದೆ ಸುವರ್ಣವಕಾಶ; 10th ಪಾಸಾಗಿದ್ರೆ ಕೂಡಲೇ ಅರ್ಜಿ ಸಲ್ಲಿಸಿ

ಐಜಿಐ ಏವಿಯೇಷನ್ ಸರ್ವೀಸಸ್ 1446 ಗ್ರೌಂಡ್ ಸ್ಟಾಫ್ ಮತ್ತು ಲೋಡರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಗ್ರೌಂಡ್ ಸ್ಟಾಫ್‌ಗೆ ಪಿಯುಸಿ ಮತ್ತು ಲೋಡರ್‌ಗೆ 10ನೇ ತರಗತಿ ಅರ್ಹತೆ ಅಗತ್ಯ. ವಯಸ್ಸಿನ ಮಿತಿ ಮತ್ತು ಸಂಬಳದ ವಿವರಗಳು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 21 ಕೊನೆಯ ದಿನಾಂಕ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

IGI Aviation Services: ಏರ್​ಪೋರ್ಟ್​​ನಲ್ಲಿ ಕೆಲಸ ಪಡೆಯಲು ಇಲ್ಲಿದೆ ಸುವರ್ಣವಕಾಶ; 10th ಪಾಸಾಗಿದ್ರೆ ಕೂಡಲೇ ಅರ್ಜಿ ಸಲ್ಲಿಸಿ
ಏರ್​​​ ಪೋರ್ಟ್​​ನಲ್ಲಿ ಕೆಲಸ
ಅಕ್ಷತಾ ವರ್ಕಾಡಿ
|

Updated on:Aug 07, 2025 | 2:20 PM

Share

ಐಜಿಐ ಏವಿಯೇಷನ್ ​​ಸರ್ವೀಸಸ್ ಏರ್​​​ ಪೋರ್ಟ್​​ನಲ್ಲಿ ಗ್ರೌಂಡ್ ಸ್ಟಾಫ್ ಮತ್ತು ಲೋಡರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ನೇಮಕಾತಿಯ ಮೂಲಕ ಒಟ್ಟು 1446 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 21ರ ವರೆಗೆ ಆನ್ಲೈನ್​​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಏರ್​​​ ಪೋರ್ಟ್​​ನಲ್ಲಿ ಕೆಲಸ ಪಡೆಯಬೇಕು ಎಂಬ ಕನಸು ನಿಮಗಿದ್ದರೆ ಕೂಡಲೇ ಅಧಿಕೃಯ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್​​ನಲ್ಲಿ ನಡೆಯುತ್ತಿದ್ದು, igiaviationdelhi.com ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು . ಇದರಲ್ಲಿ ವಿಮಾನ ನಿಲ್ದಾಣದ ಗ್ರೌಂಡ್ ಸ್ಟಾಫ್ 1017 ಹುದ್ದೆಗಳಿಗೆ ಮತ್ತು ಲೋಡರ್‌ 429 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆಗಳೇನು?

ಗ್ರೌಂಡ್ ಸ್ಟಾಫ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ ಪೂರ್ಣಗೊಳಿಸಿರಬೇಕು. ಜೊತೆಗೆ ಲೋಡರ್ ಹುದ್ದೆಗೆ, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕನಿಷ್ಠ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಎರಡೂ ಹುದ್ದೆಗಳಿಗೆ ಪ್ರತ್ಯೇಕವಾಗಿ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ. ಗ್ರೌಂಡ್ ಸ್ಟಾಫ್ ಹುದ್ದೆಗೆ 18 ರಿಂದ 30 ವರ್ಷಗಳು ಮತ್ತು ಲೋಡರ್ ಹುದ್ದೆಗೆ 20 ರಿಂದ 40 ವರ್ಷಗಳ ನಡುವೆ ವಯಸ್ಸು ಇರಬೇಕು ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಆಯ್ಕೆ ಹೇಗೆ ಮಾಡಲಾಗುತ್ತದೆ?

ಹುದ್ದೆಗಳಿಗೆ ಮೊದಲು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ. ಪರೀಕ್ಷೆಯು ಸಂಪೂರ್ಣವಾಗಿ 10 ನೇ ತರಗತಿ ಮಟ್ಟದ್ದಾಗಿದ್ದು, ಇದರಲ್ಲಿ ಅಭ್ಯರ್ಥಿಗಳಿಗೆ ಸಾಮಾನ್ಯ ಜ್ಞಾನ, ಗಣಿತ ಸಾಮರ್ಥ್ಯ, ಇಂಗ್ಲಿಷ್ ಮತ್ತು ವಾಯುಯಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು 100 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ, ಅದು 100 ಅಂಕಗಳಾಗಿರುತ್ತದೆ.

ಸಂಬಳ ಎಷ್ಟು ಸಿಗಲಿದೆ?

ನೇಮಕಾತಿಯ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಗ್ರೌಂಡ್ ಸ್ಟಾಫ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000 ರಿಂದ 35,000 ರೂ. ಮತ್ತು ಲೋಡರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,000 ರಿಂದ 25,000 ರೂ. ವೇತನ ದೊರೆಯಲಿದೆ.

ಇದನ್ನೂ ಓದಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,589 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ ಎಷ್ಟು?

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಣ್ಣ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಗ್ರೌಂಡ್ ಸ್ಟಾಫ್‌ಗೆ ಅರ್ಜಿ ಶುಲ್ಕ 350 ರೂ. ಮತ್ತು ಲೋಡರ್‌ಗೆ 250 ರೂ. ಈ ಶುಲ್ಕವನ್ನು ಆನ್‌ಲೈನ್‌ನಲ್ಲಿ ಠೇವಣಿ ಮಾಡಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಈ ನೇಮಕಾತಿಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ಗೆ (igiaviationdelhi.com) ಭೇಟಿ ನೀಡಿ ತಮ್ಮ ವಿವರಗಳನ್ನು ಭರ್ತಿ ಮಾಡಿ, ನಂತರ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿಯನ್ನು ಪೂರ್ಣಗೊಳಿಸಿ. ಕೊನೆಯದಾಗಿ ನಿಮ್ಮ ಅರ್ಜಿ ಸಲ್ಲಿಕೆಯ ಒಂದು ಪ್ರಿಂಟ್ಕಾಪಿ ತೆಗೆದಿಟ್ಟುಕೊಳ್ಳಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:15 pm, Thu, 7 August 25

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ