
ಬಹಳ ಆಘಾತಕಾರಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸುತ್ತಿರುವುದನ್ನು ಕಾಣಬಹುದು. ಅದೇ ಕ್ಷಣದಲ್ಲಿ, ಆಕೆಯ ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುತ್ತದೆ. ಈ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ ಎಂದು ಹೇಳಲಾಗುತ್ತದೆ. ಮಹಿಳೆಯ ಹಿಂದಿನ ಜೇಬಿನಲ್ಲಿ ಇಟ್ಟಿದ್ದ ಮೊಟೊರೊಲಾ E32 ಫೋನ್ ಸ್ಫೋಟಗೊಂಡು ಆಕೆಯ ಜೀನ್ಸ್‌ಗೆ ಬೆಂಕಿ ಹತ್ತಿಕೊಂಡಿದೆ. ಆ ಮಹಿಳೆಗೆ ಗಂಭೀರವಾಗಿ ಗಾಯವಾಗಿದೆ ಎನ್ನಲಾಗಿದೆ. ಹಾಗಾದರೆ ಈ ರೀತಿ ಮೊಬೈಲ್ ಫೋನ್‌ಗಳು ಏಕೆ ಸ್ಫೋಟಗೊಳ್ಳುತ್ತವೆ?, ಇದರ ಹಿಂದಿನ ಕಾರಣ ಏನು?.
ಬ್ಯಾಟರಿಗಳಿಂದ ಬ್ಲಾಸ್ಟ್ ಸಂಭವಿಸುತ್ತದೆ:
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಲಿಥಿಯಂ-ಐಯಾನ್ ಬ್ಯಾಟರಿಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಬ್ಯಾಟರಿಯೊಳಗೆ ವಿದ್ಯುದ್ವಾರಗಳಿವೆ. ಚಾರ್ಜಿಂಗ್ ಸಮಯದಲ್ಲಿ ಇವು ಸಮತೋಲನದಲ್ಲಿರುತ್ತವೆ. ಇದು ಫೋನ್ ಅನ್ನು ಸರಿಯಾಗಿ ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ ಇವುಗಳಲ್ಲಿ ಕೆಲವು ತಪ್ಪಾದಾಗ ಅಂದರೆ ಬ್ಯಾಟರಿಯೊಳಗಿನ ರಾಸಾಯನಿಕ ಸಮತೋಲನವು ತೊಂದರೆಗೆ ಒಳಗಾದಾಗ ಫೋನ್ ಸ್ಫೋಟಗೊಳ್ಳಲು ಕಾರಣವಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ಬ್ಯಾಟರಿ ವೈಫಲ್ಯದಿಂದಾಗಿ ಫೋನ್ ಸ್ಫೋಟ ಅಥವಾ ಬೆಂಕಿ ಸಂಭವಿಸುತ್ತದೆ.
Cell phone explodes in back pocket of woman in Anápolis, Brazil, on Saturday as she shopped for groceries.
She was rushed to the hospital after suffering second and third-degree burns.
The phone was reportedly a Motorola Moto E32 that was less than a year old. pic.twitter.com/7YqVwElgZM
— Paul A. Szypula 🇺🇸 (@Bubblebathgirl) February 12, 2025
ಅಧಿಕ ಬಿಸಿಯಾಗದಂತೆ ರಕ್ಷಿಸಿ:
ಎರಡನೆಯ ಕಾರಣವೆಂದರೆ ಫೋನ್ ಬಿಸಿಯಾಗುವುದು. ಫೋನ್ ಬಿದ್ದು ಒಡೆದರೆ ಅಂತಹ ಪರಿಸ್ಥಿತಿಯಲ್ಲಿ ಬ್ಯಾಟರಿಯ ಒಳಗಿನ ರಚನೆಯು ಹಾನಿಗೊಳಗಾಗಬಹುದು. ಇದು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಹುದು. ಇದಲ್ಲದೆ, ಫೋನ್ ಅನ್ನು ದೀರ್ಘಕಾಲದವರೆಗೆ ಸೂರ್ಯನ ಬೆಳಕಿನಲ್ಲಿ ಇರಿಸಿದರೆ ಅಥವಾ ಯಾವುದೇ ಮಾಲ್‌ವೇರ್‌ನಿಂದಾಗಿ ಪ್ರೊಸೆಸರ್ ಮೇಲೆ ಅತಿಯಾದ ಒತ್ತಡ ಹೇರಿದರೆ, ಅದು ಬ್ಯಾಟರಿಗೆ ಹಾನಿಯನ್ನುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಫೋನ್ ಸ್ಫೋಟಗೊಳ್ಳುತ್ತದೆ. ಹೆಚ್ಚಿನ ಮೊಬೈಲ್ ಫೋನುಗಳು ಸಾಮಾನ್ಯವಾಗಿ ಸಹಿಸಿಕೊಳ್ಳುವುದು ಕೇವಲ 0 ಯಿಂದ 45 ಡಿಗ್ರಿ ಸೆಂಟಿಗ್ರೇಡ್ ನ ತಾಪವನ್ನು ಮಾತ್ರ.
Sell Old Phone: ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಮಾರಾಟ ಮಾಡಲು ಬಯಸುವಿರಾ?: ಹಾಗಾದ್ರೆ ಈ ತಪ್ಪು ಆಗದಿರಲಿ
ನಿಮ್ಮ ಫೋನ್‌ನಲ್ಲಿ ನೀಡಿರುವ ಚಾರ್ಜರ್ ಬಿಟ್ಟು ಇತರೆ ಚಾರ್ಜರ್ ಬಳಕೆ ಮಾಡಿದರೆ ಸ್ಮಾರ್ಟ್‌ಪೋನ್‌ಗಳು ಸ್ಪೋಟಗೊಳ್ಳುವ ಅವಕಾಶಗಳೇ ಹೆಚ್ಚು. ಒಂದು ಫೋನ್‌ಗೂ ಮತ್ತು ಇನ್ನೊಂದು ಫೋನ್ ಚಾರ್ಜಿಂಗ್ ಸ್ಟ್ರೆಂತ್ ಬದಲಾಗಿರುತ್ತದೆ. ಹೆಚ್ಚು ಚಾರ್ಜ್ ಪ್ರವಹಿಸುವ ಚಾರ್ಜರ್‌ನಿಂದ ಫೋನ್ ಸ್ಪೋಟಗೊಳ್ಳುವ ಸಾಧ್ಯತೆಯಿರುತ್ತದೆ. ಹಾಗೆಯೆ ಅತೀ ಹೆಚ್ಚು ಘಂಟೆಗಳ ಕಾಲ ಮೊಬೈಲ್ ಅನ್ನು ಚಾರ್ಜ್ಗೆ ಹಾಕಿಡುವ ಅಭ್ಯಾಸ ಇದ್ದರೆ ಇಂದಿನಿಂದಲೇ ಬಿಟ್ಟುಬಿಡಿ. ನಿಮ್ಮ ಫೋನ್ ಶೇಕಡಾ 90ರಷ್ಟು ಚಾರ್ಜ್ ಆದ ಕೂಡಲೇ ಅನ್ ಪ್ಲಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ಈ ಕ್ರಮಗಳನ್ನು ಅನುಸರಿಸಿ:
ಇದಲ್ಲದೆ, ಕಾಲಾನಂತರದಲ್ಲಿ ಫೋನ್‌ನ ಬ್ಯಾಟರಿ ಹಾಳಾಗುವುದು ಸಹ ಒಂದು ಸಾಮಾನ್ಯ ಕಾರಣವಾಗಿದೆ. ಬ್ಯಾಟರಿ ಹಳೆಯದಾಗುತ್ತಿದ್ದಂತೆ ಅದರೊಳಗಿನ ಘಟಕಗಳು ದುರ್ಬಲವಾಗಿರಬಹುದು. ಇದು ಬ್ಯಾಟರಿ ಊದಿಕೊಳ್ಳಲು ಕಾರಣವಾಗಬಹುದು. ಫೋನ್‌ನ ಬ್ಯಾಟರಿ ಹಲವಾರು ವರ್ಷ ಹಳೆಯದಾಗಿದ್ದರೆ, ಸ್ಫೋಟದ ಅಪಾಯ ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಸಲಹೆಗಳನ್ನು ಅನುಸರಿಸಬಹುದು. ಇದರಿಂದ ನಿಮ್ಮ ಫೋನ್ ಸ್ಫೋಟಗೊಳ್ಳುವುದಿಲ್ಲ. ಫೋನ್ ಅನ್ನು ಹೆಚ್ಚು ಹೊತ್ತು ಬಿಸಿಲಿನಲ್ಲಿ ಇಡಬೇಡಿ. ಬ್ಯಾಟರಿಯನ್ನು ಹೆಚ್ಚು ಚಾರ್ಜ್ ಮಾಡುವುದನ್ನು ತಪ್ಪಿಸಿ. ಹಳೆಯ ಬ್ಯಾಟರಿಗಳನ್ನು ಬದಲಾಯಿಸುವುದು ಉತ್ತಮ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ