ಕಳೆದ ವರ್ಷ 2021 ರಲ್ಲಿ ಮಾರುಕಟ್ಟೆಗೆ ಅತಿ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು (Smartphone) ಪರಿಚಯಿಸಿದ್ದ ಪ್ರಸಿದ್ಧ ಮೋಟೋರೊಲಾ (Motorola) ಕಂಪನಿ ಈ ವರ್ಷ ಕೂಡ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಇರಾದೆ ಇಟ್ಟುಕೊಂಡಿದೆ. ಈಗಾಗಲೇ 200 ಮೆಗಾಫಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಅನ್ನು ತಯಾರು ಮಾಡುತ್ತಿದೆ. ಇದರ ನಡುವೆ ಇದೀಗ ತನ್ನ ಹೊಸ ಮಾದರಿಯ ಮೋಟೋ ಎಡ್ಜ್ ಎಕ್ಸ್30 (Moto Edge X30) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದೇ ತಿಂಗಳು ಈ ಫೋನ್ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ. ವಿಶೇಷ ಎಂದರೆ ಇದು ಅತ್ಯಂತ ಬಲಿಷ್ಠವಾದ ಹೊಸ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 9Gen 1 ಪ್ರೊಸೆಸರ್ ಬಲವನ್ನು ಪಡೆದುಕೊಂಡಿರಲಿದೆಯಂತೆ.
ಹೌದು ಮೋಟೋ ಎಡ್ಜ್ X30 ಸ್ಮಾರ್ಟ್‌ಫೋನ್ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, ಅತ್ಯುತ್ತಮ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಕೂಡಿದೆ. 2400×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ OLED ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 144Hz ನ ಹೆಚ್ಚಿನ ರಿಫ್ರೆಶ್ ರೇಟ್ ಮತ್ತು 576Hz ಟಚ್ ಸ್ಯಾಂಪ್ಲಿಂಗ್ ರೇಟ್ನಿಂದ ಕೂಡಿದೆ.
ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 Gen1 ಪ್ರೊಸೆಸರ್ ಅನ್ನು ಹೊಂದಿದೆ. ಇದು 12 OS ನಲ್ಲಿ MyUI 3.0 ಕ್ಲೀನ್ ಸ್ಟಾಕ್ UI ಜೊತೆಗೆ ರನ್ ಆಗುತ್ತದೆ. ಜೊತೆಗೆ 12GB RAM ಮತ್ತು 512GB ಇಂಟರ್ ಸ್ಟೋರೇಜ್ ಅನ್ನು ಪಡೆದುಕೊಂಡಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ ಡ್ಯುಯಲ್ 50MP OV50A40 ಸೆನ್ಸಾರ್, ಎರಡನೇ ಕ್ಯಾಮೆರಾ 5MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 60 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಮೋಟೋ ಎಡ್ಜ್ X30 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 68W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಚೀನಾದಲ್ಲಿ ಈ ಸ್ಮಾರ್ಟ್ಫೋನ್ನ 8GB RAM ಮತ್ತು 128GB ರೂಪಾಂತರಕ್ಕಾಗಿ RMB 3,199 ಅಂದರೆ ಭಾರತದಲ್ಲಿ ಸುಮಾರು 38,000 ರೂ. ಎನ್ನಬಹುದು. ಅಂತೆಯೆ 8GB RAM ಮತ್ತು 256GB ಮಾದರಿಗಾಗಿ RMB 3399 (ಅಂದಾಜು ರೂ 40,300) ಬೆಲೆಯನ್ನು ಹೊಂದಿದೆ.
Moto G31: ಹೊಸ ವರ್ಷಕ್ಕೆ ಬಿಗ್ ಶಾಕ್: ಈ ಎರಡು ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಬರೋಬ್ಬರಿ 3000 ರೂ. ಏರಿಕೆ
(Moto Edge X30 Qualcomm Snapdragon 8 Gen 1 SoC 68W fast charging support launch date in India has been tipped)