Flipkart Year End sale: ಇಂದೇ ಕೊನೆಯ ದಿನ: ವರ್ಷಾಂತ್ಯಕ್ಕೆ ಈ ಸ್ಮಾರ್ಟ್​ಫೋನ್ ಮೇಲೆ ಬಿಗ್ ಡಿಸ್ಕೌಂಟ್

Year End Sale 2021: ಫ್ಲಿಪ್‌ಕಾರ್ಟ್‌ (Flipkart) ಪ್ಲಾಟ್‌ಫಾರ್ಮ್‌ನಲ್ಲಿ ಸ್ಮಾರ್ಟ್‌ಫೋನ್ ಇಯರ್ ಎಂಡ್ ಸೇಲ್ (Flipkart Smartphone Year End sale) ಡಿಸೆಂಬರ್ 31ಕ್ಕೆ ಕೊನೆ ಕಾಣಲಿದೆ. ಇದರಲ್ಲಿ ಬ್ಯಾಂಕ್ ಆಫರ್‌ಗಳ ಜೊತೆಗೆ ಹಲವಾರು ಫೋನ್‌ಗಳ ಬೆಲೆಗಳಲ್ಲಿ ಸಾಕಷ್ಟು ಕಡಿತವನ್ನು ಪಡೆದುಕೊಂಡಿವೆ.

Flipkart Year End sale: ಇಂದೇ ಕೊನೆಯ ದಿನ: ವರ್ಷಾಂತ್ಯಕ್ಕೆ ಈ ಸ್ಮಾರ್ಟ್​ಫೋನ್ ಮೇಲೆ ಬಿಗ್ ಡಿಸ್ಕೌಂಟ್
Flipkart Year End Sale
Follow us
TV9 Web
| Updated By: Vinay Bhat

Updated on: Dec 31, 2021 | 2:40 PM

ಹೊಸ ವರ್ಷದ ಸಂಭ್ರಮ ಹತ್ತಿರವಾಗುತ್ತಿದ್ದ ಹಾಗೇ ಆನ್‌ಲೈನ್‌ ಶಾಪಿಂಗ್‌ ತಾಣಗಳು ವಿಶೇಷ ಇಯರ್‌ ಎಂಡ್‌ ಸೇಲ್‌ (Year End Sale 2021) ಆಯೋಜಿಸುತ್ತಿದ್ದು ಇಂದು ಕೊನೆಯ ದಿನವಾಗಿದೆ. ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ (Flipkart) ಪ್ಲಾಟ್‌ಫಾರ್ಮ್‌ನಲ್ಲಿ ಸ್ಮಾರ್ಟ್‌ಫೋನ್ ಇಯರ್ ಎಂಡ್ ಸೇಲ್ (Flipkart Smartphone Year End sale) ಡಿಸೆಂಬರ್ 31ಕ್ಕೆ ಕೊನೆ ಕಾಣಲಿದೆ. ಇದರಲ್ಲಿ ಬ್ಯಾಂಕ್ ಆಫರ್‌ಗಳ ಜೊತೆಗೆ ಹಲವಾರು ಫೋನ್‌ಗಳ ಬೆಲೆಗಳಲ್ಲಿ ಸಾಕಷ್ಟು ಕಡಿತವನ್ನು ಪಡೆದುಕೊಂಡಿವೆ. ಸ್ಮಾರ್ಟ್‌ಫೋನ್‌ಗಳ ಮೇಲೆ 22% ತನಕ ಡಿಸ್ಕೌಂಟ್‌ ನೀಡುತ್ತಿದ್ದು, ಫೋನ್‌ ಖರೀದಿಸಲು ಇದೇ ಬೆಸ್ಟ್‌ ಟೈಂ ಎನಿಸಿದೆ. ಅಲ್ಲದೆ ಕಂಪನಿಯು ಎಕ್ಸ್‌ಚೇಂಜ್ ಆಫರ್‌ಗಳು, ನೋ-ಕಾಸ್ಟ್ ಇಎಂಐ, ಫ್ಲಿಪ್‌ಕಾರ್ಟ್ ಸ್ಮಾರ್ಟ್ ಅಪ್‌ಗ್ರೇಡ್ ವಿಶೇಷತೆಗಳನ್ನು ಸಹ ನೀಡುತ್ತಿದೆ. ಫ್ಲಿಪ್‌ಕಾರ್ಟ್‌ ಇಯರ್‌ ಎಂಡ್‌ ಸೇಲ್‌ನಲ್ಲಿ ಅತಿ ಹೆಚ್ಚು ಡಿಸ್ಕೌಂಟ್ ಪಡೆದಿರುವ ಅತ್ಯುತ್ತಮ ಫೋನ್ ಯಾವುದು ಎಂಬುದನ್ನು ನೋಡುವುದಾದರೆ…

ಮೊಟೊರೊಲಾ ಎಡ್ಜ್ 20 ಫ್ಯೂಷನ್ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 16% ಡಿಸ್ಕೌಂಟ್‌ ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಇದೀಗ 20,999 ರೂ. ಗಳಿಗೆ ಲಭ್ಯವಿದೆ. ಅಲ್ಲದೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಶೇಕಡಾ 5 ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ ನಿಮ್ಮ ಹಳೆಯ ಫೋನ್ ಅನ್ನು ಎಕ್ಸ್‌ಚೇಂಜ್ ಆಫರ್‌ನ ಅಡಿಯಲ್ಲಿ ವಿನಿಮಯ ಮಾಡಿಕೊಂಡರೆ 15,450 ರೂ. ವರೆಗೆ ರಿಯಾಯಿತಿ ಪಡೆಯಬಹುದು.

ಮೊಟೊರೊಲಾ ಎಡ್ಜ್ 20 ಫ್ಯೂಷನ್ ಸ್ಮಾರ್ಟ್‌ಫೋನ್‌ 6.7-ಇಂಚಿನ ಫುಲ್‌ ಹೆಚ್‌ಡಿ+ ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 800U 5G SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ, ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಟರ್ಬೊಪವರ್ 30 ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.

ಇನ್ನು ಫ್ಲಿಪ್‌ಕಾರ್ಟ್‌ ಇಯರ್‌ ಎಂಡ್‌ ಸೇಲ್‌ನಲ್ಲಿ ಆ್ಯಪಲ್‌ ಕಂಪನಿಯ ಐಫೋನ್‌ 12 ಮಿನಿ ವಿಶೇಷ ಡಿಸ್ಕೌಂಟ್‌ ಪಡೆದಿದೆ. ಇದರ ಬೇಸ್ ಮಾಡೆಲ್‌ 64GB ಆಯ್ಕೆಗೆ 41,119 ರೂ.ಗಳಿಗೆ ದೊರೆಯಲಿದೆ. ಇನ್ನು ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, A14 ಬಯೋನಿಕ್ ಎಸ್‌ಒಸಿ ಪ್ರೊಸೆಸರ್‌ ಬಲವನ್ನು ಪಡೆದಿದೆ. ಕ್ಯಾಮೆರಾ ಅದ್ಭುತವಾಗಿದೆ.

ಮೊಟೊರೊಲಾ ಎಡ್ಜ್ 20 ಪ್ರೊ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ ಫ್ಲಿಪ್‌ಕಾರ್ಟ್‌ನಲ್ಲಿ 23% ರಿಯಾಯಿತಿ ಪಡೆದಿದ್ದು, 34,999ರೂ.ಗಳಿಗೆ ಲಭ್ಯವಾಗಲಿದೆ. ಅಲ್ಲದೆ ನಿಮ್ಮ ಹಳೆಯ ಫೋನ್ ಅನ್ನು ಎಕ್ಸ್‌ಚೇಂಜ್ ಆಫರ್‌ನ ಅಡಿಯಲ್ಲಿ ವಿನಿಮಯ ಮಾಡಿಕೊಂಡರೆ 15,450ರೂ. ವರೆಗೆ ರಿಯಾಯಿತಿ ದೊರೆಯಲಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಹೊಂದಿದೆ. ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ f/1.9 ಲೆನ್ಸ್ ಹೊಂದಿದೆ.

ವಿವೋ ಕಂಪನಿಯ ವಿವೋ X70 ಪ್ರೊ ಫ್ಲಿಪ್‌ಕಾರ್ಟ್‌ ಇಯರ್‌ ಎಂಡ್‌ ಸೇಲ್‌ನಲ್ಲಿ 128GB ಸ್ಟೋರೇಜ್ ಆಯ್ಕೆ 46,990 ರೂ.ಗಳಿಗೆ ಸೇಲ್‌ ಆಗುತ್ತಿದೆ. ಅಂತೆಯೆ ರಿಯಲ್‌ಮಿ GT ಮಾಸ್ಟರ್ ಆವೃತ್ತಿ ಸ್ಮಾರ್ಟ್‌ಫೋನ್‌ ಇದೀಗ 25,999ರೂ.ಗಳಿಗೆ ಲಭ್ಯವಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 1,000 ರೂ. ಗಳ ತನಕ ಇಳಿಕೆಯಾಗಿದೆ.

Telegram Update: ವಾಟ್ಸ್​ಆ್ಯಪ್​ಗಿಂತ ಮೊದಲೇ ಟೆಲಿಗ್ರಾಂನಲ್ಲಿ ಬಂತು ಈ ಅಚ್ಚರಿಯ ಫೀಚರ್

Year Ender 2021: ಭಾರತೀಯ ಮಾರುಕಟ್ಟೆಗೆ 2022 ರಲ್ಲಿ ಅಪ್ಪಳಿಸಲಿದೆ ಈ ಬಹುನಿರೀಕ್ಷಿತ ಸ್ಮಾರ್ಟ್​ಫೋನ್​ಗಳು

(Year End Sale 2021 Flipkart is providing attractive discounts on smartphones from various brands)