Sign In

By signing in or creating an account, you agree with Associated Broadcasting Company's Terms & Conditions and Privacy Policy.

Telegram Update: ವಾಟ್ಸ್​ಆ್ಯಪ್​ಗಿಂತ ಮೊದಲೇ ಟೆಲಿಗ್ರಾಂನಲ್ಲಿ ಬಂತು ಈ ಅಚ್ಚರಿಯ ಫೀಚರ್

Telegram New Feature: ಟೆಲಿಗ್ರಾಂ ಬಳಕೆದಾರರು ಈಗ ಸಂದೇಶಗಳಿಗೆ ಎಮೋಜಿಗಳ ಮೂಲಕ ರಿಯಾಕ್ಟ್‌ ಮಾಡಲು ಅವಕಾಶ ನೀಡಲಾಗಿದೆ. ವಿಶೇಷ ಎಂದರೆ ಟೆಲಿಗ್ರಾಂ ಬಿಡುಗಡೆ ಮಾಡಿರುವ ಈ ಫೀಚರ್ ಅನ್ನು ವಾಟ್ಸ್​ಆ್ಯಪ್​ ಈಗಷ್ಟೆ ಪರೀಕ್ಷೆಗೆ ಒಳಪಡಿಸಿದೆ.

Telegram Update: ವಾಟ್ಸ್​ಆ್ಯಪ್​ಗಿಂತ ಮೊದಲೇ ಟೆಲಿಗ್ರಾಂನಲ್ಲಿ ಬಂತು ಈ ಅಚ್ಚರಿಯ ಫೀಚರ್
telegram new features
Follow us
TV9 Web
| Updated By: Vinay Bhat

Updated on: Dec 31, 2021 | 2:05 PM

ವಿಶ್ವದ ಜನಪ್ರಿಯ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಟೆಲಿಗ್ರಾಂ ಆ್ಯಪ್ (Telegram App) ಕೂಡ ಒಂದು. ಅನೇಕರು ಈ ಆ್ಯಪ್ ಅನ್ನು ಬಳಸುತ್ತಿದ್ದಾರೆ. ಸಂದೇಶ ರವಾನಿಸುದರಿಂದ ಹಿಡಿದು ವಿಡಿಯೋ ಕರೆ (Video Call), ಧ್ವನಿ ಸಂದೇಶ ಮಾತ್ರವಲ್ಲದೆ ಸಿನಿಮಾಗಳನ್ನು ಕೂಡ ಡೌನ್​ಲೋಡ್​​ ಮಾಡುತ್ತಾರೆ. ಅಂದರೆ ಎಂಬಿ, ಜಿಬಿ ಗಾತ್ರದ ಫೈಲ್​ಗಳನ್ನು ಟೆಲಿಗ್ರಾಂ (Telegram) ಮೂಲಕ ಸುಲಭವಾಗಿ ಕಳುಹಿಸಬಹುದಾಗಿದೆ. ಈಗಾಗಲೇ ಬಳಕೆದಾರರಿಗೆ ಹಲವು ಹೊಸ ಮಾದರಿಯ ಫೀಚರ್ ಗಳನ್ನು ಪರಿಚಯಿಸಿರುವ ಟೆಲಿಗ್ರಾಂ ಇದೀಗ ಹೊಸ ಅಪ್ಡೇಟ್‌ (Telegram Update) ಅನ್ನು ಘೋಷಿಸಿದೆ. ವಿಶೇಷ ಎಂದರೆ ಟೆಲಿಗ್ರಾಂ ಬಿಡುಗಡೆ ಮಾಡಿರುವ ಈ ಫೀಚರ್ ಅನ್ನು ವಾಟ್ಸ್​ಆ್ಯಪ್​ (WhatsApp) ಈಗಷ್ಟೆ ಪರೀಕ್ಷೆಗೆ ಒಳಪಡಿಸಿದೆ.

ಹೌದು, ಟೆಲಿಗ್ರಾಂ ಬಳಕೆದಾರರು ಈಗ ಸಂದೇಶಗಳಿಗೆ ಎಮೋಜಿಗಳ ಮೂಲಕ ರಿಯಾಕ್ಟ್‌ ಮಾಡಲು ಅವಕಾಶ ನೀಡಲಾಗಿದೆ. ಈ ಫೀಚರ್ಸ್‌ ಈಗಾಗಲೇ ಐಮೆಸೇಜ್‌, ಫೇಸ್‌ಬುಕ್‌ ಮೆಸೆಂಜರ್‌, ಇನ್‌ಸ್ಟಾಗ್ರಾಮ್‌ನಲ್ಲಿ ಲಭ್ಯವಿದೆ. ಇದೀಗ ಟೆಲಿಗ್ರಾಂ ಕೂಡ ತನ್ನ ಬಳಕೆದಾರರಿಗೆ ರಿಯಾಕ್ಟ್‌ ಎಮೋಜಿ ಫೀಚರ್ಸ್‌ ಪರಿಚಯಿಸಿದೆ. ಈ ಮೂಲಕ ಟೆಲಿಗ್ರಾಮ್ ಅನಿಮೇಟೆಡ್ ಮತ್ತು ಇಂಟರ್‌ ಆಕ್ಟಿವ್‌ ಎಮೋಜಿಗಳನ್ನು ಪರಿಚಯಿಸಿರುವ ಮೊದಲ ಮೆಸೇಜಿಂಗ್‌ ಅಪ್ಲಿಕೇಶನ್ ಎನಿಸಿಕೊಂಡಿದೆ.

ಇದರ ಜೊತೆಗೆ ಸ್ಪಾಯ್ಲರ್‌ ಎಂಬ ಹೊಸ ಅಪ್ಡೇಟ್ ನೀಡಿದೆ. ಈ ಫೀಚರ್ಸ್‌ ಬಳಸಿಕೊಂಡು ಬಳಕೆದಾರರು ಟೈಪ್‌ ಮಾಡುವಾಗ ಯಾವುದೇ ಟೆಕ್ಸ್ಟ್‌ ಭಾಗವನ್ನು ಹೈಡ್‌ ಮಾಡುವ ಆಯ್ಕೆ ನೀಡಲಾಗಿದೆ. ಅಂದರೆ ಇದರಲ್ಲಿ ನೀವು ಹೊಸ ‘ಸ್ಪಾಯ್ಲರ್’ ಫಾರ್ಮ್ಯಾಟಿಂಗ್ ಅನ್ನು ಆಯ್ಕೆ ಮಾಡಬಹುದು. ನೀವು ಸ್ಪಾಯ್ಲರ್ ಆಯ್ಕೆಯನ್ನು ಆರಿಸಿದಾಗ, ಸಂದೇಶದ ಆಯ್ದ ಭಾಗವನ್ನು ಚಾಟ್‌ನಲ್ಲಿ, ಹಾಗೆಯೇ ಚಾಟ್ ಪಟ್ಟಿ ಮತ್ತು ಅಧಿಸೂಚನೆಗಳಲ್ಲಿ ಹೈಡ್‌ ಮಾಡಬಹುದು.

ಇನ್ನು ಟೆಲಿಗ್ರಾಮ್‌ ಪ್ಲಾಟ್‌ಫಾರ್ಮ್‌ ಸೇರಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಮೆಸೇಜ್‌ ಟ್ರಾನ್ಸಲೇಶನ್‌ ಕೂಡ ಒಂದಾಗಿದೆ. ಇದರ ಮೂಲಕ ನೀವು ಯಾವುದೇ ಸಂದೇಶವನ್ನು ಟೆಲಿಗ್ರಾಂನಲ್ಲಿ ಬೇರೆ ಭಾಷೆಗೆ ಅನುವಾದ ಮಾಡಬಹುದು. ಇದರಿಂದ ನಿಮಗೆ ತಿಳಿದಿಲ್ಲದ ಭಾಷೆಯ ಸಂದೇಶವನ್ನು ನಿಮ್ಮ ಭಾಷೆಯಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ.

ಇದಕ್ಕಾಗಿ ನೀವು ಟೆಲಿಗ್ರಾಮ್‌ ಸೆಟ್ಟಿಂಗ್ಸ್‌>ಭಾಷೆಗಳಲ್ಲಿ ಅನುವಾದವನ್ನು ಸಕ್ರಿಯಗೊಳಿಸಬಹುದು. ಸಂದೇಶವನ್ನು ಆಯ್ಕೆಮಾಡುವಾಗ ಸಂದರ್ಭ ಮೆನುಗೆ ಹೊಸ ಅನುವಾದ ಬಟನ್ ಅನ್ನು ಸೇರಿಸಲಾಗುತ್ತದೆ. ಬಳಕೆದಾರರು ನಿರಾಳವಾಗಿ ಮಾತನಾಡುವ ಯಾವುದೇ ಭಾಷೆಗಳನ್ನು ಸಹ ಹೊರಗಿಡಬಹುದು ಅದು ಆ ಸಂದೇಶಗಳಿಗೆ ಅನುವಾದ ಬಟನ್ ಅನ್ನು ಹೈಡ್‌ಮಾಡುತ್ತದೆ. ಟೆಲಿಗ್ರಾಂ ಅನ್ನು ಬೆಂಬಲಿಸುವ ಎಲ್ಲಾ ಆಂಡ್ರಾಯ್ಡ್‌ ಸಾಧನಗಳಲ್ಲಿ ಅನುವಾದ ಲಭ್ಯವಿದೆ. ಲಭ್ಯವಿರುವ ಭಾಷೆಗಳ ಪಟ್ಟಿಯು ನಿಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅನ್ನು ಅವಲಂಬಿಸಿರುತ್ತದೆ.

ಇತ್ತೀಚೆಗಷ್ಟೆ ಅಡ್ಮಿನ್‌ ಪ್ರಿವ್ಯೂ ಆಯ್ಕೆಯನ್ನು ಕೂಡ ಸೇರಿಸಿತ್ತು. ಇದರಿಂದ ನೀವು ಟೆಲಿಗ್ರಾಂ ಗ್ರೂಪ್‌ನಲ್ಲಿ ಶೇರ್‌ ಆಡಿದ ಚಾಟ್‌ ಅನ್ನು ಅಡ್ಮಿನ್‌ ಪರಿಶೀಲಿಸಬಹುದು. ಬಳಕೆದಾರರು ಇನ್ವೈಟ್‌ ಲಿಂಕ್ ಅನ್ನು ತೆರೆದಾಗ, ಚಾಟ್‌ನ ಮೇಲ್ಭಾಗದಲ್ಲಿರುವ ಹೊಸ ಬಾರ್‌ನಿಂದ ಅಡ್ಮಿನ್‌ ಮ್ಯಾನೇಜ್‌ ಮಾಡಬಹುದಾದ ಇನ್ವೈಟ್‌ ಲಿಂಕ್‌ ಬಟನ್‌ ಕಾಣಲಿದೆ ನೋಡುತ್ತಾರೆ. ಇದರೊಂದಿಗೆ, ಟೆಲಿಗ್ರಾಂ ಗ್ರೂಪ್ ಅಡ್ಮಿನ್‌ಗಳು ರಿಕ್ವೆಸ್ಟ್‌ ಕಳುಹಿಸುವವರ ಪಬ್ಲಿಕ್‌ ಪ್ರೊಫೈಲ್ ಚಿತ್ರಗಳನ್ನು ಮತ್ತು ಅವರ ರಿಕ್ವೆಸ್ಟ್‌ ಅನ್ನು ಅನುಮೋದಿಸುವ ಅಥವಾ ವಜಾಗೊಳಿಸುವ ಆಯ್ಕೆಯನ್ನು ಸಹ ಪಡೆಯಲಿದ್ದಾರೆ.

Year Ender 2021: ಭಾರತೀಯ ಮಾರುಕಟ್ಟೆಗೆ 2022 ರಲ್ಲಿ ಅಪ್ಪಳಿಸಲಿದೆ ಈ ಬಹುನಿರೀಕ್ಷಿತ ಸ್ಮಾರ್ಟ್​ಫೋನ್​ಗಳು

Oppo A16K: ಮುಂದಿನ ತಿಂಗಳು ಭಾರತಕ್ಕೆ ಎಂಟ್ರಿ ಕೊಡಲಿದೆ ಅತಿ ಕಡಿಮೆ ಬೆಲೆಯ ಈ ಒಪ್ಪೋ ಸ್ಮಾರ್ಟ್​ಫೋನ್

(Telegram has rolled out iMessage-like Message Reactions Spoiler and Message Translation features)

ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?