ಮಾರುಕಟ್ಟೆಗೆ ಬಂತು ಹೊಸ ಮೋಟೋ G Stylus 5G 2024 ಸ್ಮಾರ್ಟ್​ಫೋನ್: ಬೆಲೆ ಎಷ್ಟು?

|

Updated on: May 12, 2024 | 11:29 AM

Moto G Stylus 5G (2024) Launched: ಬಹುನಿರೀಕ್ಷಿತ ಮೊಟೊ G Stylus 5G (2024) ಸ್ಮಾರ್ಟ್​ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಯುಎಸ್ ಮಾರುಕಟ್ಟೆಯಲ್ಲಿ ಮಾತ್ರ ರಿಲೀಸ್ ಆಗಿದೆ. ಮುಂದಿನ ದಿನಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆ. ಈ ಹ್ಯಾಂಡ್ಸೆಟ್ ಸ್ನಾಪ್​ಡ್ರಾಗನ್ 6 Gen 1 SoC, 15W ವೈರ್ಲೆಸ್ ಚಾರ್ಜಿಂಗ್ ಬೆಂಬಲ ಮತ್ತು Android 14 OS ನೊಂದಿಗೆ ಬರುತ್ತದೆ.

ಮಾರುಕಟ್ಟೆಗೆ ಬಂತು ಹೊಸ ಮೋಟೋ G Stylus 5G 2024 ಸ್ಮಾರ್ಟ್​ಫೋನ್: ಬೆಲೆ ಎಷ್ಟು?
Moto G Stylus 5G (2024)
Follow us on

ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುವ ಪ್ರಸಿದ್ಧ ಮೊಟೊರೊಲಾ ಕಂಪನಿ ಇದೀಗ ನೂತನ ಫೋನ್​ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಬಹುನಿರೀಕ್ಷಿತ ಮೊಟೊ G Stylus 5G (2024) (Moto G Stylus 5G (2024)) ಸ್ಮಾರ್ಟ್​ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಇದು ಹೊಸ G- ಸರಣಿಯ ಕೊಡುಗೆಯಾಗಿ ಮತ್ತು ಮೊಟೊ G Stylus (2023) ಆವೃತ್ತಿಯ ಉತ್ತರಾಧಿಕಾರಿಯಾಗಿ ಅನಾವರಣಗೊಂಡಿದೆ. ಈ ಹ್ಯಾಂಡ್ಸೆಟ್ ಸ್ನಾಪ್​ಡ್ರಾಗನ್ 6 Gen 1 SoC, 15W ವೈರ್ಲೆಸ್ ಚಾರ್ಜಿಂಗ್ ಬೆಂಬಲ ಮತ್ತು Android 14 OS ನೊಂದಿಗೆ ಬರುತ್ತದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೊಟೊ G Stylus 5G (2024) ಬೆಲೆ

Moto G ಸ್ಟೈಲಸ್ 5G (2024) ಸದ್ಯಕ್ಕೆ ಯುಎಸ್ ಮಾರುಕಟ್ಟೆಯಲ್ಲಿ ಮಾತ್ರ ರಿಲೀಸ್ ಆಗಿದೆ. ಮುಂದಿನ ದಿನಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆ. ಯುಎಸ್​ನಲ್ಲಿ ಇದರ ಬೆಲೆ $399.99, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು ರೂ. 33,400 ಎನ್ನಬಹುದು. ಈ ಹ್ಯಾಂಡ್ಸೆಟ್ ಕ್ಯಾರಮೆಲ್ ಲ್ಯಾಟೆ ಮತ್ತು ಸ್ಕಾರ್ಲೆಟ್ ವೇವ್ ಬಣ್ಣಗಳಲ್ಲಿ ಬರುತ್ತದೆ.

120W ಫಾಸ್ಟ್ ಚಾರ್ಜಿಂಗ್: ಮಾರುಕಟ್ಟೆಗೆ ಬಂತು ರಿಯಲ್ ಮಿ GT ನಿಯೋ 6 ಸ್ಮಾರ್ಟ್​ಫೋನ್

ಮೊಟೊ G Stylus 5G (2024) ಫೀಚರ್ಸ್

ಮೊಟೊ G Stylus 5G (2024) 2400 x 1080 ಪಿಕ್ಸೆಲ್‌ಗಳೊಂದಿಗೆ 6.7-ಇಂಚಿನ FHD+ ಪೋಲೆಡ್ ಡಿಸ್​ಪ್ಲೇ, 120Hz ರಿಫ್ರೆಶ್ ರೇಟ್, 2.5D ಕರ್ವ್ಡ್ ಗ್ಲಾಸ್, 1200nits ಪೀಕ್ ಬ್ರೈಟ್‌ನೆಸ್, 240Hz ಮಾದರಿ 20 ಡಿಸ್​ಪ್ಲೇ ಹೊಂದಿದೆ. ಈ ಫೋನ್ Adreno GPU ಜೊತೆಗೆ ಕ್ವಾಲ್ಕಂ ಸ್ನಾಪ್​ಡ್ರಾಗನ್ 6 Gen 1 4nm ಮೊಬೈಲ್ ಪ್ಲಾಟ್‌ಫಾರ್ಮ್‌ನಿಂದ ಚಾಲಿತವಾಗಿದೆ.

ಚಿಪ್‌ಸೆಟ್ ಅನ್ನು 8GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ, ಇದನ್ನು ಮೈಕ್ರೋ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದಾಗಿದೆ. ಆಂಡ್ರಾಯ್ಡ್ 14 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್​ನಲ್ಲಿ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಡಾಲ್ಬಿ ಅಟ್ಮಾಸ್‌ ಇದೆ.

ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ: ಈ ಎರಡು ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ

ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, f/1.8 ದ್ಯುತಿರಂಧ್ರ ಮತ್ತು OIS ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ. ಹಾಗೆಯೆ f/2.2 ದ್ಯುತಿರಂಧ್ರದೊಂದಿಗೆ 13MP ಅಲ್ಟ್ರಾ-ವೈಡ್ ಕ್ಯಾಮೆರಾ ಇದೆ. ದ್ವಿತೀಯ ಸಂವೇದಕವು ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. 32MP ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. ಇದು f/2.4 ಅಪರ್ಚರ್​ನಿಂದ ಕೂಡಿದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, 4G VoLTE, Wi-Fi 802.11 ac, ಬ್ಲೂಟೂತ್ 5.1, GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಹ್ಯಾಂಡ್‌ಸೆಟ್ 30W ವೇಗದ ಚಾರ್ಜಿಂಗ್ ಬೆಂಬಲ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ