ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ: ಈ ಎರಡು ಆ್ಯಪ್ ಇನ್ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
ಹೊಸ ಮಾಲ್‌ವೇರ್ ಕೆಲವು ಅಪ್ಲಿಕೇಶನ್‌ಗಳ ಮೂಲಕ ನಿಮ್ಮ ಫೋನ್‌ಗಳಿಗೆ ಪ್ರವೇಶಿಸಿರುವ ಸಾಧ್ಯತೆ ಇದೆ. ಇದರ ಮೂಲಕ ಹ್ಯಾಕರ್‌ಗಳು ನಿಮ್ಮ ಫೋನ್‌ನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸುತ್ತಾರೆ. ಇದು ಮೈಕ್ರೋಸಾಫ್ಟ್ ತಂಡವು ನೀಡಿದ ಭದ್ರತಾ ಎಚ್ಚರಿಕೆಯಾಗಿದೆ.
ಹೆಚ್ಚುತ್ತಿರುವ ತಂತ್ರಜ್ಞಾನ ಮನುಷ್ಯನಿಗೆ ಎಷ್ಟು ನೆಮ್ಮದಿ ನೀಡುತ್ತಿದೆಯೋ.. ಅದೇ ಮಟ್ಟದಲ್ಲಿ ಭದ್ರತೆಯನ್ನು ಪ್ರಶ್ನಿಸುತ್ತಿದೆ. ಭದ್ರತೆಯ ವಿಷಯದಲ್ಲಿ ಎಷ್ಟೇ ಮುಂಜಾಗ್ರತೆ ವಹಿಸಿದರೂ ಸೈಬರ್ ದಾಳಿ (Cyber Crime) ಎಗ್ಗಿಲ್ಲದೆ ನಡೆಯುತ್ತಿದೆ. ಅಪರಾಧಿಗಳು ಅಮಾಯಕರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮತ್ತು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಮಾಲ್ವೇರ್ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಕಂಟಕವಾಗಿ ಪರಿಣಮಿಸಿದೆ. ಒಂದು ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಈ ಮಾಲ್‌ವೇರ್ ಅನ್ನು ಇನ್ಸ್ಟಾಲ್ ಮಾಡಿದ್ದಾರೆ.
ಹೊಸ ಮಾಲ್‌ವೇರ್ ಕೆಲವು ಅಪ್ಲಿಕೇಶನ್‌ಗಳ ಮೂಲಕ ನಿಮ್ಮ ಫೋನ್‌ಗಳಿಗೆ ಪ್ರವೇಶಿಸಿರುವ ಸಾಧ್ಯತೆ ಇದೆ. ಇದರ ಮೂಲಕ ಹ್ಯಾಕರ್‌ಗಳು ನಿಮ್ಮ ಫೋನ್‌ನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸುತ್ತಾರೆ. ಇದು ಮೈಕ್ರೋಸಾಫ್ಟ್ ತಂಡವು ನೀಡಿದ ಭದ್ರತಾ ಎಚ್ಚರಿಕೆಯಾಗಿದೆ. ಈ ಮಾಲ್‌ವೇರ್‌ನ ಹೆಸರು ಡರ್ಟಿ ಸ್ಟ್ರೀಮ್. ಮೈಕ್ರೋಸಾಫ್ಟ್ ತಂಡ ಇದು ತುಂಬಾ ಅಪಾಯಕಾರಿ ಎಂದು ಹೇಳಿದೆ. ಇದು ಆ್ಯಂಡ್ರಾಯ್ಡ್ ಫೋನ್ ಒಳಗೆ ನುಸುಳಿ ಫೋನ್ ಅನ್ನು ಹ್ಯಾಕ್ ಮಾಡುತ್ತದೆ.
ಭಾರತದಲ್ಲಿ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 8a ಫೋನ್ ಬಿಡುಗಡೆ: ಬೆಲೆ ಎಷ್ಟು, ಏನಿದೆ ಫೀಚರ್ಸ್?
ಇದು ನಿಮ್ಮ ಫೋನಿನ ಮೇಲೆ ಹ್ಯಾಕರ್‌ಗೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ. ಇದು ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ವೈಯಕ್ತಿಕ ಡೇಟಾ ಕದಿಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಮಾಲ್ವೇರ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿದ ಹಲವು ಅಪ್ಲಿಕೇಶನ್‌ಗಳಿಗೆ ಸೇರಿಕೊಂಡಿದೆ ಎಂದು ಮೈಕ್ರೋಸಾಫ್ಟ್ ಹೇಳಿಕೆಯಲ್ಲಿ ತಿಳಿಸಿದೆ. ಇದು ಈಗಾಗಲೇ 4 ಬಿಲಿಯನ್ ಇನ್‌ಸ್ಟಾಲ್‌ಗಳನ್ನು ಹೊಂದಿದೆ.
ಒಂದು ಬಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಲ್‌ಗಳನ್ನು ಹೊಂದಿರುವ Xiaomi ಫೈಲ್ ಮ್ಯಾನೇಜರ್, WPS ಆಫೀಸ್ 500 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದೆ. ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನಲ್ಲಿದ್ದರೆ, ಅವುಗಳನ್ನು ತಕ್ಷಣವೇ ಡಿಲೀಟ್ ಮಾಡಲು ತಜ್ಞರು ಹೇಳಿದ್ದಾರೆ.
ಡ್ಯುಯಲ್ ಸಿಮ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್: ಏನದು ನೋಡಿ
ನಿಮ್ಮ ಫೋನ್‌ನಲ್ಲಿ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು, ಸರಿಯಾಗಿ ಪರಿಶೀಲಿಸಿ. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗಬಹುದು. ನಮ್ಮ ಮೊಬೈಲ್ನ ನಿರ್ವಹಣೆಗೆ ಬೇಕಾದ ಸೆಕ್ಯುರಿಟಿ ಆ್ಯಪ್ಗಳ ರೂಪದಲ್ಲಿಯೇ ಫೇಕ್ ಆ್ಯಪ್ ಗಳ ಕೂಡ ಸೇರಿಕೊಳ್ಳುತ್ತವೆ. ಆ್ಯಂಟಿ ವೈರಸ್ ರೀತಿಯಲ್ಲಿ, ಕ್ಯಾಚೆ ಕ್ಲಿಯರಿಂಗ್ ರೂಪದಲ್ಲಿ. ಅಥವಾ ಗ್ಯಾಲರಿಯಾಗಿ ಫೇಕ್ ಆ್ಯಪ್ಗಳು ಮೊಬೈಲ್ ಬಳಕೆದಾರರನ್ನು ವಂಚಿಸುತ್ತವೆ. ಇಂತಹ ವೈರಸ್ ಆ್ಯಪ್ ಗೇಮ್ಸ್ ಮತ್ತು ಶೈಕ್ಷಣಿಕ ರೂಪದಲ್ಲಿಯೂ ತಲೆಮರೆಸಿಕೊಂಡು ಕುಳಿತಿರುತ್ತವೆ.
ಹೆಚ್ಚಿನ ನಕಲಿ ಆ್ಯಪ್ ತಯಾರಕರು ತಮ್ಮ ಆ್ಯಪ್ ಅನ್ನು ಜಾಹಿತಾರುಗೊಳಿಸಿರುತ್ತಾರೆ. ಜಾಹಿರಾತು ಮೂಲಕ ಅಥವಾ ಪಾಪ್ ಅಪ್ ವಿಂಡೋಗಳ ಮೂಲಕ ಬೇರೆಯೇ ಹಲವು ಆ್ಯಪ್ಗಳನ್ನು ಇನ್ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಪ್ರಚೋದಿಸುತ್ತಲೇ ಇರುತ್ತವೆ. ಇಂತಹುಗಳು ಬಹುತೇಕ ದುರುದ್ದೇಶಪೂರಿತ ಕಿರು ತಂತ್ರಾಂಶಗಳೇ ಆಗಿರುತ್ತವೆ.
ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ