ನಾಲ್ಕು ದಿನ ಬಾಕಿ: ಮೋಟೋರೊಲದಿಂದ ಬರುತ್ತಿದೆ ಅತಿ ಕಡಿಮೆ ಬೆಲೆಯ ಹೊಸ ಸ್ಮಾರ್ಟ್​ಫೋನ್

|

Updated on: Feb 11, 2024 | 1:15 PM

Moto G04 Launch Date: ಮೋಟೋರೊಲದ ಈ ಹೊಸ ಫೋನ್ 4GB+64GB ಮತ್ತು 8GB+128GB ಸ್ಟೋರೇಜ್ ರೂಪಾಂತರಗಳಲ್ಲಿ ಬರಲಿದೆ. ಈಗಾಗಲೇ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಮೋಟೋ G04 ಬೆಲೆ ಅತಿ ಕಡಿಮೆ ಆಗಿದೆ.

ನಾಲ್ಕು ದಿನ ಬಾಕಿ: ಮೋಟೋರೊಲದಿಂದ ಬರುತ್ತಿದೆ ಅತಿ ಕಡಿಮೆ ಬೆಲೆಯ ಹೊಸ ಸ್ಮಾರ್ಟ್​ಫೋನ್
Moto G04
Follow us on

ಪ್ರಸಿದ್ಧ ಮೋಟೋರೊಲ ಕಂಪನಿ ಭಾರತದಲ್ಲಿ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಫೆಬ್ರವರಿ 15 ರಂದು ದೇಶದಲ್ಲಿ ಹೊಸ ಮೋಟೋ G04 (Moto G04) ಫೋನ್ ಅನಾವರಣಗೊಳ್ಳಲಿದೆ. ಈ ಬಗ್ಗೆ ಕಂಪನಿಯು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ಬಹಿರಂಗಪಡಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮೀಸಲಾದ ಮೈಕ್ರೋಸೈಟ್ ಕೂಡ ಹೊಸ ಮೋಟೋರೊಲಾ ಜಿ-ಸರಣಿ ಸ್ಮಾರ್ಟ್‌ಫೋನ್ ಆಗಮನವನ್ನು ಖಚಿತ ಪಡಿಸಿದೆ. ಈ ಫೋನ್ 90Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ.

ಮೋಟೋರೊಲದ ಈ ಹೊಸ ಫೋನ್ 4GB+64GB ಮತ್ತು 8GB+128GB ಸ್ಟೋರೇಜ್ ರೂಪಾಂತರಗಳಲ್ಲಿ ಬರಲಿದೆ. ಈಗಾಗಲೇ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಮೋಟೋ G04 ಬೆಲೆ ಅತಿ ಕಡಿಮೆ ಆಗಿದ್ದರೂ ಇದರಲ್ಲಿ 5,000mAh ಬ್ಯಾಟರಿ, UNISOC T606 ಆಕ್ಟಾ-ಕೋರ್ ಪ್ರೊಸೆಸರ್ ಸೇರಿದಂತೆ ಆಕರ್ಷಕ ಫೀಚರ್ಸ್ ಇರಲಿದೆಯಂತೆ.

ಸೈಬರ್ ಸ್ಕ್ಯಾಮ್ ಬಗ್ಗೆ ದೂರು ನೀಡುವುದು ಹೇಗೆ?: 24 ಗಂಟೆಗಳ ಕಾಲ ತೆರೆದಿರುತ್ತೆ ಈ ಪೋರ್ಟಲ್

ಡಿಸ್​ಪ್ಲೇ: ಮೋಟೋ G04 90Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ HD+ ಡಿಸ್​ಪ್ಲೇಯನ್ನು ಹೊಂದಿರುತ್ತದೆ.

ಚಿಪ್‌ಸೆಟ್: ಮುಂಬರುವ ಮೋಟೋರೊಲಾ ಫೋನ್ ಯುನಿಸೊಕ್ ಟಿ606 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ.

ಹಿಂಬದಿಯ ಕ್ಯಾಮೆರಾ: ಮೋಟೋ G04 ಫೋನ್ 16MP AI ಕ್ಯಾಮೆರಾವನ್ನು ಹೊಂದಿರುತ್ತದೆ, ಇದರಲ್ಲಿ ಪೋರ್ಟ್ರೇಟ್ ಮೋಡ್ ಆಯ್ಕೆ ಕೂಡ ಇದೆ.

ಸಂಗ್ರಹಣೆ: ಈ ಫೋನ್ 4GB+64GB ಮತ್ತು 8GB+128GB ಸ್ಟೋರೇಜ್ ಮಾದರಿಗಳನ್ನು ನೀಡುತ್ತದೆ. ಆದಾಗ್ಯೂ, ಮೈಕ್ರೋಸೈಟ್​ನಲ್ಲಿ ಈ ಫೋನ್ 15GB ವರೆಗೆ RAM ವರ್ಧಕವನ್ನು ಬೆಂಬಲಿಸುತ್ತದೆ ಎಂದು ಬಹಿರಂಗಪಡಿಸುತ್ತದೆ.

OS: ಮೋಟೋ G04 ಇತ್ತೀಚಿನ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕೇಂದ್ರದಿಂದ ಸರ್ಜಿಕಲ್ ಸ್ಟ್ರೈಕ್: 1.4 ಲಕ್ಷ ಮೊಬೈಲ್ ಸಂಖ್ಯೆ ನಿರ್ಬಂಧ, 3 ಲಕ್ಷ ಸಿಮ್ ಬ್ಲಾಕ್, 500 ಮಂದಿ ಬಂಧನ

ಬ್ಯಾಟರಿ : ಇದು 5,000mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ. 10W ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಆದರೆ ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಭಾರತೀಯ ರೂಪಾಂತರದಲ್ಲಿ ಚಾರ್ಜಿಂಗ್ ವೇಗವನ್ನು ಬಹಿರಂಗಪಡಿಸಿಲ್ಲ.

ಇತರೆ ವೈಶಿಷ್ಟ್ಯಗಳು: ಮೋಟೋ G04 3.5mm ಆಡಿಯೋ ಜ್ಯಾಕ್, Dolby Atmos ಸೇರಿದಂತೆ ಅನೇಕ ಫೀಚರ್​ಗಳೊಂದಿಗೆ ರಿಲೀಸ್ ಆಗಲಿದೆ.

ಮೋಟೋ G04 ಬೆಲೆ ಎಷ್ಟಿರಬಹುದು?:

ಮೋಟೋ G04 ನ ಭಾರತದ ಬೆಲೆ ಇನ್ನೂ ತಿಳಿದಿಲ್ಲ, ಆದರೆ ಈ ಫೋನ್ ಅನ್ನು ಇತ್ತೀಚೆಗೆ ಯುರೋಪ್‌ನಲ್ಲಿ EUR 119 ಗೆ ರಿಲೀಸ್ ಮಾಡಲಾಗಿತ್ತು. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 10,751 ರೂ. ಇರಬಹುದು. ದೇಶದಲ್ಲಿ ಇರು ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆ ಆಗುವ ನಿರೀಕ್ಷೆಯಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ