Motorola Edge 40 Pro: ಮೋಟೊರೊಲಾ ಹೊಸದಾಗಿ ಬಿಡುಗಡೆ ಮಾಡಿದೆ ಸ್ಟೈಲಿಶ್ ಫೋನ್

|

Updated on: Apr 07, 2023 | 9:30 AM

ಮೊಬೈಲ್ ಫೋನ್ ಆರಂಭದ ದಿನಗಳಿಂದಲೂ ಇಂದಿನ ಸ್ಮಾರ್ಟ್ ಯುಗಕ್ಕೆ ಅನುಗುಣವಾಗಿ ಹೊಸ ಹೊಸ ಫೋನ್​ಗಳು ಗ್ಯಾಜೆಟ್ ಲೋಕವನ್ನು ಪ್ರವೇಶಿಸುತ್ತಿವೆ. ಈ ಬಾರಿ, ಮೋಟೊರೊಲಾ ಎಡ್ಜ್ 40 ಪ್ರೊ ಬಿಡುಗಡೆಯಾಗಿದ್ದು, ಯುರೋಪ್​ನಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಹೊಸ ಸ್ಮಾರ್ಟ್​ಫೋನ್ ವಿವರ ಇಲ್ಲಿದೆ.

ಚೀನಾ ಮೂಲದ ಲೆನೊವೊ ಕಂಪನಿ ಒಡೆತನದಲ್ಲಿರುವ ಮೋಟೊರೊಲಾ, ಹೊಸ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ವಿವಿಧ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿದೆ. ಭಾರತದ ಮಾರುಕಟ್ಟೆಯಲ್ಲೂ ಮೋಟೊ ಫೋನ್​ಗಳು ಬೇಡಿಕೆ ಉಳಿಸಿಕೊಂಡಿವೆ. ಮೊಬೈಲ್ ಫೋನ್ ಆರಂಭದ ದಿನಗಳಿಂದಲೂ ಇಂದಿನ ಸ್ಮಾರ್ಟ್ ಯುಗಕ್ಕೆ ಅನುಗುಣವಾಗಿ ಹೊಸ ಹೊಸ ಫೋನ್​ಗಳು ಗ್ಯಾಜೆಟ್ ಲೋಕವನ್ನು ಪ್ರವೇಶಿಸುತ್ತಿವೆ. ಈ ಬಾರಿ, ಮೋಟೊರೊಲಾ ಎಡ್ಜ್ 40 ಪ್ರೊ ಬಿಡುಗಡೆಯಾಗಿದ್ದು, ಯುರೋಪ್​ನಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಹೊಸ ಸ್ಮಾರ್ಟ್​ಫೋನ್ ವಿವರ ಇಲ್ಲಿದೆ. ಎಡ್ಜ್ ಸರಣಿಯಲ್ಲಿ ಹೊಸ ಫೋನ್ ಪರಿಚಯಿಸಿದ ಮೋಟೊರೊಲಾ ಕಂಪನಿಯಿಂದ, ಗ್ಯಾಜೆಟ್ ಮಾರುಕಟ್ಟೆಗೆ ಮೋಟೊರೊಲಾ ಎಡ್ಜ್ 40 ಪ್ರೊ ಬಿಡುಗಡೆಯಾಗಿದೆ. ಅದರಲ್ಲಿ ಸ್ನ್ಯಾಪ್​ಡ್ರ್ಯಾಗನ್ 8 ಜೆನ್. 2 ಪ್ರೊಸೆಸರ್ ಬೆಂಬಲವಿದ್ದು, 6.67 ಇಂಚಿನ HD+ (1,080×2,400 ಪಿಕ್ಸೆಲ್ಸ್) pOLED ಡಿಸ್​ಪ್ಲೇ ಹೊಂದಿದೆ.  125W ಫಾಸ್ಟ್ ಚಾರ್ಜಿಂಗ್ ಬೆಂಬಲ ಜತೆಗೆ 4,600mAh ಬ್ಯಾಟರಿ ಇದೆ. ಹಾಗೆಯೇ, 12GB RAM + 256GB ಮಾದರಿಯ ಒಂದೇ ಆವೃತ್ತಿ ಲಭ್ಯವಿದ್ದು, ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ.

Follow us on