ಮೋಟೋರೊಲಾ ತನ್ನ ಪ್ರೀಮಿಯಂ ಸ್ಮಾರ್ಟ್ಫೋನ್ ಮೋಟೋರೊಲಾ ರೇಜರ್ 40 ಸರಣಿಯನ್ನು ಪರಿಚಯಿಸಿದ ನಂತರ ಇದೀಗ ಭಾರತದಲ್ಲಿ ಮೋಟೋ ಜಿ84 5ಜಿ (Moto G84 5G) ಫೋನನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹೆಸರೇ ಸೂಚಿಸುವಂತೆ, ಇದೊಂದು 5G ಸಂಪರ್ಕ ಹೊಂದಿರುವ ಮೊಬೈಲ್ ಆಗಿದ್ದು, ಸೆಪ್ಟೆಂಬರ್ 1 ರಂದು ದೇಶದಲ್ಲಿ ಅನಾವರಣಗೊಳ್ಳಲಿದೆ. ಮೋಟೋ G84 5G ಮಿಡ್‌ನೈಟ್ ಬ್ಲೂ, ವಿವಾ ಮೆಜೆಂಟಾ ಮತ್ತು ಮಾರ್ಷ್‌ಮ್ಯಾಲೋ ಬ್ಲೂ ಹೀಗೆ ತನ್ನ ಮೂರು ಬಣ್ಣಗಳಲ್ಲಿ ರಿಲೀಸ್ ಆಗಲಿದೆ ಎಂದು ಕಂಪನಿ ಹೇಳಿದೆ. ಡ್ಯುಯಲ್ ಕ್ಯಾಮೆರಾಗಳನ್ನು ಒಳಗೊಂಡಿದ್ದು, ಸೆಲ್ಫಿ ಕ್ಯಾಮೆರಾವನ್ನು ಹೋಲ್-ಪಂಚ್ ಕಟೌಟ್‌ನಲ್ಲಿ ಪ್ಯಾಕ್ ಮಾಡಲಾಗಿದೆ.
ಬಿಡುಗಡೆಗೆ ಮುಂಚಿತವಾಗಿ, ಮೋಟೋ G84 5G ಯ ಕೆಲ ಮಾಹಿತಿ ಸೋರಿಕೆ ಆಗಿದೆ. ಅದರ ಪ್ರಕಾರ ಈ ಫೋನ್ 120Hz 6.5-ಇಂಚಿನ pOLED ಡಿಸ್ ಪ್ಲೇಯನ್ನು ಹೊಂದಿದೆ. ಕಂಪನಿ ಇತ್ತೀಚಿನ ಫ್ಲಿಪ್ ಫೋನ್ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ pOLED ಪ್ಯಾನೆಲ್‌ಗಳನ್ನು ಬಳಸಿದೆ. ಇದು ಹಲವಾರು ಸ್ಮಾರ್ಟ್‌ಫೋನ್‌ಗಳಲ್ಲಿ AMOLED ಪ್ಯಾನೆಲ್‌ಗಳಂತೆಯೇ ಆಳವಾದ ಕಪ್ಪು ಮತ್ತು ಕಾಂಟ್ರಾಸ್ಟ್ ಅನ್ನು ನೀಡುತ್ತದೆ. ಡಿಸ್ ಪ್ಲೇ 1300 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಮತ್ತು HRD10 ಬೆಂಬಲವನ್ನು ಪಡೆದಿದೆ.
ಸ್ಮಾರ್ಟ್ಫೋನ್ನ ಬ್ಯಾಕ್ ಕವರ್ನಲ್ಲಿ ಹಣ, ಎಟಿಎಂ ಕಾರ್ಡ್ ಇಡುತ್ತೀರಾ?: ಹಾಗಿದ್ರೆ ತಪ್ಪದೆ ಈ ಸ್ಟೋರಿ ಓದಿ
ಮೋಟೋ G84 5G 256GB ವರೆಗೆ ಆಂತರಿಕ ಸಂಗ್ರಹಣೆ ಮತ್ತು 12GB RAM ಅನ್ನು ಒಳಗೊಂಡಿದೆ. ಹಿಂದಿನ ಕ್ಯಾಮರಾ ಸೆಟಪ್ OIS ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಇದೆ. ಇತರ ಮೊಟೊರೊಲಾ ಫೋನ್‌ಗಳಂತೆಯೇ ಇದರಲ್ಲಿ ಕೂಡ ಸ್ಪೀಕರ್‌ಗಳು ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಹೊಂದಿವೆ. “ಮೋಟೋ ಸ್ಪೇಷಿಯಲ್ ಸೌಂಡ್” ಗೆ ಸಹ ಬೆಂಬಲವಿದೆ. 30W ಟರ್ಬೋಪವರ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿ ಇದೆ. ಮೊಟೊರೊಲಾ ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ಸಹ ನೀಡುತ್ತದೆ.
ಈ ಫೋನ್ ಆಂಡ್ರಾಯ್ಡ್ 14 ಜೊತೆಗೆ ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಸ್ವೀಕರಿಸುವುದು ಖಚಿತವಾಗಿದೆ. ಆನ್‌ಲೈನ್‌ನಲ್ಲಿ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಥಿಂಕ್‌ಶೀಲ್ಡ್ ರಕ್ಷಣೆ ಇದೆ. ಮೋಟೋರೊಲಾದ G-ಸರಣಿಯು ಭಾರತದಲ್ಲಿ 20,000 ರೂ. ಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಹೀಗಾಗಿ ಮುಂಬರುವ ಮೋಟೋ G84 ಕೂಡ ಅದೇ ರೀತಿ ನಿರೀಕ್ಷಿಸಬಹುದು. ಈ ಫೋನ್ ಫ್ಲಿಪ್ಕಾರ್ಟ್ನಲ್ಲಿ ಸೇಲ್ ಕಾಣಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ