ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮೋಟೋರೊಲಾ (Motorola) ಕಂಪನಿ ಈಗೀಗ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphone) ಪರಿಚಯಿಸಿ ಭದ್ರವಾಗಿ ನೆಲೆಯೂರಲು ಪ್ರಯತ್ನ ಪಡುತ್ತಿದೆ. ಹೆಚ್ಚಾಗಿ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳಿಂದಲೇ ಭರ್ಜರಿ ಸುದ್ದಿಯಲ್ಲಿರುವ ಮೋಟೋ (Moto) ಕಂಪನಿ ಇದೀಗ ಮತ್ತೊಂದು ಹೊಸತನಕ್ಕೆ ಹೆಜ್ಜೆ ಹಾಕಿದೆ. ಮುಂದಿನ ವರ್ಷ ಆಕರ್ಷಕ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮೋಟೋ ಈಗಿನಿಂದಲೇ ತಯಾರಿಯೊಂದನ್ನು ನಡೆಸುತ್ತಿದೆ. ವಿಶೇಷ ಎಂದರೆ ಈ ಫೋನ್ ಬರೋಬ್ಬರಿ 200 ಮೆಗಾಫಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಒಳಗೊಂಡಿರಲಿದೆಯಂತೆ (Motorola 200-Megapixel Smartphone). ಈ ಫೋನ್ ಆದಾಗಲೇ ಟೆಕ್ ಪ್ರಿಯರಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ. ಕ್ಯಾಮೆರಾ ಜೊತೆಗೆ ಇನ್ನಷ್ಟು ಆಕರ್ಷಕ ಫೀಚರ್ಗಳು ಈ ಫೋನ್ನಲ್ಲಿ ಇರಲಿದೆಯಂತೆ.
ಸ್ಯಾಮ್‌ಸಂಗ್ ತನ್ನ ಹೊಸ 200MP ISOCELL ಕ್ಯಾಮೆರಾ ಸೆನ್ಸಾರ್ ಅನ್ನು ಸೆಪ್ಟೆಂಬರ್‌ನಲ್ಲಿ ಪರಿಚಯಿಸಿತ್ತು. ಆದರೆ ಈ ಸೆನ್ಸಾರ್ ಅನ್ನು ಈಗ ಯಾವುದೇ ಸ್ಮಾರ್ಟ್‌ಫೋನ್ ಕಂಪನಿಯು ಬಳಸಿಲ್ಲ. ಇದೀಗ ಮೋಟೋರೊಲಾ ಕಂಪನಿ ಈ ಸ್ಯಾಮ್‌ಸಂಗ್‌ನ 200MP ISOCELL ಕ್ಯಾಮೆರಾ ಸೆನ್ಸಾರ್ ಬಳಸುವ ಮೊದಲ ಕಂಪನಿಯಾಗಲಿದೆ.
ಟಿಪ್‌ಸ್ಟರ್ ಐಸ್ ಯೂನಿವರ್ಸ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 200MP ಕ್ಯಾಮೆರಾ ಹೊಂದಿರುವ ಈ ಮೋಟೋರೊಲಾ ಸ್ಮಾರ್ಟ್‌ಫೋನ್ 2022ರ ಮಧ್ಯಭಾಗದಲ್ಲಿ ಬಿಡುಗಡಯಾಗುವ ಸಾದ್ಯತೆ ಇದೆ. ಇದಾದ ಬಳಿಕ ಶವೋಮಿ ಮತ್ತು ಸ್ಯಾಮ್‌ಸಂಗ್ ಕೂಡ 200MP ಕ್ಯಾಮೆರಾ ಫೋನ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಶವೋಮಿಗಿಂತ ಮುಂಚಿತವಾಗಿ ಮೋಟೋರೊಲಾ 200MP ಕ್ಯಾಮೆರಾ ಸ್ಮಾರ್ಟ್‌ಫೋನ್ ತಯಾರು ಮಾಡುತ್ತಿದೆ.
ಈಗೀಗ ಮೋಟೋರೊಲ ಕಂಪೆನ ತಾನು ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್ಫೋನ್ಗಳಲ್ಲಿ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಕೆಲ ತಿಂಗಳ ಹಿಂದೆಯಷ್ಟೆ ಭಾರತದಲ್ಲಿ ಮೋಟೋರೊಲಾ ಎಡ್ಜ್ 20 ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಆಗಿತ್ತು. ಇದು 108ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಬಲಿಷ್ಠ ಪ್ರೊಸೆಸರ್ ಕೂಡ ಅಳವಡಿಸಲಾಗಿತ್ತು.
(Motorola is tipped to be the first manufacturer to deploy Samsungs 200-megapixel camera sensor on its smartphone)