Nokia G60 5G: ಭಾರತದಲ್ಲಿ ಮತ್ತೆ ಶುರುವಾಗುತ್ತಾ ನೋಕಿಯಾ ಹವಾ: ಮೊಟ್ಟ ಮೊದಲ 5G ಫೋನ್ ಬಿಡುಗಡೆಗೆ ತಯಾರಿ

| Updated By: Vinay Bhat

Updated on: Oct 30, 2022 | 2:18 PM

ಕಳೆದ ತಿಂಗಳು ಭಾರತದಲ್ಲಿ 5ಜಿ ಸೇವೆಗೆ ಚಾಲನೆ ನೀಡಲಾಯಿತು. ಇದನ್ನೆ ಗಮನದಲ್ಲಿ ಇಟ್ಟುಕೊಂಡು ನೋಕಿಯಾ ಕಂಪನಿ ಇದೀಗ ಭಾರತದಲ್ಲಿ ತನ್ನ ಮೊಟ್ಟ ಮೊದಲ 5G ಫೋನ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರ ಹೆಸರು ನೋಕಿಯಾ ಜಿ60 5ಜಿ (Nokia G60 5G).

Nokia G60 5G: ಭಾರತದಲ್ಲಿ ಮತ್ತೆ ಶುರುವಾಗುತ್ತಾ ನೋಕಿಯಾ ಹವಾ: ಮೊಟ್ಟ ಮೊದಲ 5G ಫೋನ್ ಬಿಡುಗಡೆಗೆ ತಯಾರಿ
Nokia G60 5G
Follow us on

ಒಂದು ಕಾಲದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಈಗ ಹೇಳ ಹೆಸರಿಲ್ಲದಂತಾಗಿದೆ. ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ, ವಿವೋ ಬ್ರ್ಯಾಂಡ್​ಗಳು ಬಂದ ಮೇಲೆ ನೋಕಿಯಾ (Nokia) ಕಂಪನಿಯ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ದೊಡ್ಟ ಮಟ್ಟದಲ್ಲಿ ಯಶಸ್ಸು ಸಾಧಿಸುತ್ತಿಲ್ಲ. ಆದರೀಗ ಹೊಸ ಅವತಾರದೊಂದಿಗೆ ನೋಕಿಯಾ ಭಾರತದಲ್ಲಿ ಮತ್ತೆ ನೆಲೆಯೂರಲು ಯೋಜನೆ ರೂಪಿಸುತ್ತಿದೆ. ದೇಶದಲ್ಲಿ 5G ಯುಗ ಪ್ರಾರಂಭವಾಗುತ್ತಿರುವುದು ಗೊತ್ತೇ ಇದೆ. ಕಳೆದ ತಿಂಗಳು ಭಾರತದಲ್ಲಿ 5ಜಿ ಸೇವೆಗೆ ಚಾಲನೆ ನೀಡಲಾಯಿತು. ಈಗಾಗಲೇ ಕೆಲ ಆಯ್ದ ಮೆಟ್ರೊ ನಗರಗಳಲ್ಲಿ ಜಿಯೋ, ಏರ್ಟೆಲ್ 5ಜಿ ಸೇವೆ ಕೂಡ ಆರಂಭವಾಗಿದೆ. ಇದನ್ನೆ ಗಮನದಲ್ಲಿ ಇಟ್ಟುಕೊಂಡು ನೋಕಿಯಾ ಕಂಪನಿ ಇದೀಗ ಭಾರತದಲ್ಲಿ ತನ್ನ ಮೊಟ್ಟ ಮೊದಲ 5G ಫೋನ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರ ಹೆಸರು ನೋಕಿಯಾ ಜಿ60 5ಜಿ (Nokia G60 5G).

ನೋಕಿಯಾ G60 5G ಸ್ಮಾರ್ಟ್‌ಫೋನ್‌ ಸಾಕಷ್ಟು ವಿಶೇಷತೆಯಿಂದ ಕೂಡಿರಲಿದೆ. ಬಲಿಷ್ಠವಾದ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಡಿಸ್ ಪ್ಲೇ ಕೂಡ ವಿಭಿನ್ನವಾಗಿದ್ದು ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಪಡೆದಿರಲಿದೆ ಎನ್ನಲಾಗಿದೆ. ಈ ಫೋನಿನ ಫೀಚರ್ಸ್ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ, ನೋಕಿಯಾ G60 5G 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ IPS LCD ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್​ನಿಂದ ಕೂಡಿರಲಿದೆ.

ಬಲಿಷ್ಠವಾದ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಪಡೆದಿರಲಿದೆ ಎನ್ನಲಾಗಿದೆ. ಜೊತೆಗೆ ಆಂಡ್ರಾಯ್ಡ್‌ 12 OS ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 3 ವರ್ಷಗಳ ಆಂಡ್ರಾಯ್ಡ್‌ ಒಎಸ್‌ ಅಪ್‌ಗ್ರೇಡ್‌ ಮತ್ತು ಮಾಸಿಕ ಸೆಕ್ಯುರ್‌ ಅಪ್ಡೇಟ್‌ ನೀಡಲಿದೆ. ಮೂರು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಳ್ಳಬಹುದು.

ಇದನ್ನೂ ಓದಿ
Moto X40: ಬಿಡುಗಡೆಗು ಮುನ್ನ ಭರ್ಜರಿ ಸದ್ದು ಮಾಡುತ್ತಿದೆ ಮೋಟೋ X40 ಸ್ಮಾರ್ಟ್‌ಫೋನ್‌: ಏನಿದೆ ವಿಶೇಷತೆ?
Amazon: 6000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 10,499 ರೂ. ಗೆ ಮಾರಾಟ ಆಗುತ್ತಿದೆ ಈ ಫೋನ್
ವೈರಸ್ ದಾಳಿ; ಎಸ್​​ಬಿಐ ಸೇರಿ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶ ಅಪಾಯದಲ್ಲಿ
Flipkart: ಶಾಪಿಂಗ್ ಪ್ರಿಯರಿಗೆ ಶಾಕಿಂಗ್ ಸುದ್ದಿ: ಫ್ಲಿಪ್​ಕಾರ್ಟ್ ಕ್ಯಾಶ್ ಆನ್ ಡೆಲಿವರಿ ಆಯ್ಕೆಯಲ್ಲಿ ಭಾರೀ ದೊಡ್ಡ ಬದಲಾವಣೆ

ನೋಕಿಯಾ G60 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದುಕೊಂಡರೆ, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಹೊಂದಿರುವ ಸಾಧ್ಯತೆ ಇದೆ. ಇವುಗಳ ಜೊತೆಗೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ ಎಂಬ ಮಾತಿದೆ.

ದೊಡ್ಡ ಮಟ್ಟದ ಬ್ಯಾಟರಿ ಇರುವುದು ಅನುಮಾನ. ಮೂಲಗಳ ಪ್ರಕಾರ ಇದು 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದಕ್ಕೆ ತಕ್ಕಂತೆ 20W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಐಫೋನ್ ನೂತನ ಸರಣಿಯಲ್ಲಿ ಇರುವಂತೆ eSIM ಆಯ್ಕೆ ಇರಲಿದೆ. ಉಳಿದಂತೆ ವೈಫೈ 6, ಬ್ಲೂಟೂತ್ 5.1, GPS, USB ಟೈಪ್-ಸಿ ಪೋರ್ಟ್ ಬೆಂಬಲ ಪಡೆದುಕೊಂಡಿರಲಿದೆ. ಭಾರತದಲ್ಲಿ ನೋಕಿಯಾ G60 5G ಸ್ಮಾರ್ಟ್‌ಫೋನ್‌ ಬೆಲೆ ಎಷ್ಟಿರಲಿದೆ ಎಂಬುದರ ಮಾಹಿತಿ ಇನ್ನು ಕೂಡ ಬಹಿರಂಗವಾಗಿಲ್ಲ.

Published On - 2:17 pm, Sun, 30 October 22