ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಈಗೀಗ ಆಕರ್ಷಕ ಫೀಚರ್ಗಳುಳ್ಳ ಫೋನನ್ನು ಬಿಡುಗಡೆ ಮಾಡುತ್ತಿರುವ ನೋಕಿಯಾ ಕಂಪೆನಿ ಸದ್ಯ ನೋಕಿಯಾ ಜಿ50 (Nokia G50) ಎಂಬ ಹೊಸ ಸ್ಮಾರ್ಟ್ಫೋನನ್ನು ಅನಾವರಣ ಮಾಡಲು ಸಜ್ಜಾಗಿದೆ. ಆದರೆ, ಅಚ್ಚರಿ ಎಂಬಂತೆ ಈ ಫೋನಿನ ಕೆಲವು ಮಾಹಿತಿ ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ವಾಟರ್‌ಡ್ರಾಪ್ ಶೈಲಿಯ ಡಿಸ್ಪ್ಲೇ ನೋಚ್, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಸೇರಿದಂತೆ ಈ ಫೋನಿನ ಕುರಿತು ಕೆಲವು ಮಾಹಿತಿಗಳು ಲೀಕ್ ಆಗಿವೆ.
ವಿಶೇಷ ಎಂದರೆ ಈ ಫೋನ್ 5ಜಿ ಸಂಪರ್ಕ ಹೊಂದಿರಲಿದೆಯಂತೆ. ಈ ಮೂಲಕ ಕೆಲವೇ ಕೆಲವು ನೋಕಿಯಾ 5ಜಿ ಸ್ಮಾರ್ಟ್ಫೋನ್ಗಳ ಸಾಲಿಗೆ ಇದುಕೂಡ ಸೇರುವುದು ಖಚಿತವಾಗಿದೆ. ಎರಡು ವಿಭಿನ್ನ ಶೇಖರಣಾ ರೂಪಾಂತರಗಳಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದ್ದು, ನೀಲಿ ಮತ್ತು ಮಿಡ್ನೈಟ್ ಸನ್ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.
ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನಲ್ಲಿ ಫೋನ್ ಎಂಬುದು ತಿಳಿದುಬಂದಿದೆ. 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಎಂಬುದು ತಿಳಿದಿದ್ದು, ಹಿಂಭಾಗದ ಫೋನಿನ ವಿನ್ಯಾಸವು ಈಗಿರುವ ನೋಕಿಯಾ ಜಿ 10 ಮತ್ತು ನೋಕಿಯಾ ಜಿ 20 ಅನ್ನು ಹೋಲುತ್ತದೆ.
ಇನ್ನೂ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 ಪ್ರೊಸೆಸರ್ ಅಳವಡಿಸಲಾಗಿದೆಯಂತೆ. ಎಂದಿನಂತೆ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ನೋಕಿಯಾ ಜಿ50 ಯುಕೆ ನಲ್ಲಿ 4GB RAM + 64GB ಸ್ಟೋರೇಜ್ ರೂಪಾಂತರಕ್ಕಾಗಿ ಜಿಬಿಪಿ 207 ಅಂದರೆ ಭಾರತದಲ್ಲಿ ಅಂದಾಜು 11,000 ರೂ. ಎನ್ನಬಹುದು.
ಎಚ್‌ಎಂಡಿ ಗ್ಲೋಬಲ್ ಶೀಘ್ರದಲ್ಲೇ ನೋಕಿಯಾ ಜಿ50 ಸ್ಮಾರ್ಟ್ಫೋನ್ ಬಿಡುಗಡೆ ಆಗಲಿದೆ. ಈ ಬಗ್ಗೆ ಕಂಪೆನಿ ಅಧಿಕೃತವಾಗಿ ಹೇಳಿಲ್ಲವಾದರೂ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಆದಷ್ಟು ಬೇಗ ಈ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎನ್ನಲಾಗಿದೆ.
Realme Narzo 30: ರಿಯಲ್ ಮಿಯಿಂದ ಬಂಪರ್ ಕೊಡುಗೆ: ನಾರ್ಜೊ 30 5G ಈಗ ಹೊಸ ವೇರಿಯೆಂಟ್ನಲ್ಲಿ ಲಭ್ಯ
ಮೊಬೈಲ್ ಬಳಕೆದಾರರೇ ಎಚ್ಚರ: ಈ 8 ಆ್ಯಪ್ಗಳನ್ನು ತಕ್ಷಣವೇ ಡಿಲೀಟ್ ಮಾಡಿ
(Nokia G50 Accidentally Confirmed by the Company on Instagram Ahead of Official Launch)